2 ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ದಿನಾಂಕ ನಿಗದಿ

ಬೆಂಗಳೂರು, ಫೆಬ್ರವರಿ 16: ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಮಾರ್ಗಗಳ ರೈಲು ಸಂಚಾರಕ್ಕೆ ಬಿಎಂಆರ್‌ಸಿಎಲ್ ಮುಹೂರ್ತ ನಿಗದಿ ಮಾಡಿದೆ. ಮೆಟ್ರೋ 2ನೇ ಹಂತದ ಯೋಜನೆ ಒಟ್ಟು 72 ಕಿ. ಮೀ. ಮಾರ್ಗವನ್ನು ಒಳಗೊಂಡಿದೆ.

ನಮ್ಮ ಮೆಟ್ರೋದ ಕನಕಪುರ ಮಾರ್ಗ ಆಗಸ್ಟ್ 15ಕ್ಕೆ, ಮೈಸೂರು ರಸ್ತೆಯ ಮಾರ್ಗ ನವೆಂಬರ್ 1ಕ್ಕೆ ರೈಲುಗಳ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. ಎರಡೂ ಮಾರ್ಗವನ್ನು ಈ ವರ್ಷದಲ್ಲಿ ಲೋಕಾರ್ಪಣೆ ಮಾಡುವ ಗುರಿಯನ್ನು ಹೊಂದಲಾಗಿದೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, "ಕನಕಪುರ ಮಾರ್ಗವನ್ನು ಸ್ವಾತಂತ್ರ ದಿನಾಚರಣೆಗೆ, ಮೈಸೂರು ರೋಡ್ ಮಾರ್ಗವನ್ನು ರಾಜ್ಯೋತ್ಸವಕ್ಕೆ ಉದ್ಘಾಟನೆ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ರೈಲು ಸಂಚಾರದ ದಿನಾಂಕವನ್ನು ಬಿಎಂಆರ್‌ಸಿಎಲ್ ಘೋಷಣೆ ಮಾಡಿದೆ. ರೈಲು ಪ್ರಯಾಣಕ್ಕೆ ಮುಕ್ತವಾಗುವ 3 ರಿಂದ 4 ತಿಂಗಳ ಮೊದಲು ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕ ಸಂಚಾರ ಆರಂಭವಾಗಬೇಕಿದೆ.

ಎರಡು ಮಾರ್ಗಗಳು

ಎರಡು ಮಾರ್ಗಗಳು

ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಯೋಜನೆ 72 ಕಿ. ಮೀ. ಮಾರ್ಗವನ್ನು ಒಳಗೊಂಡಿದೆ. ಒಟ್ಟು ಆರು ಮಾರ್ಗಗಳು ಇದರಲ್ಲಿ ಬರಲಿದ್ದು, 2 ಮಾರ್ಗ 2020ರಲ್ಲಿ ರೈಲುಗಳ ಸಂಚಾರಕ್ಕೆ ಮುಕ್ತವಾಗಲಿದೆ. ಕನಕಪುರ ರಸ್ತೆಯಿಂದ-ಅಂಜನಾಪುರ ಟೌನ್ ಶಿಪ್ (6.5 ಕಿ. ಮೀ.) ಮತ್ತು ನಾಯಂಡಹಳ್ಳಿಯಿಂದ ಮೈಸೂರು ರಸ್ತೆ ವಿಸ್ತರಣೆ ಮಾರ್ಗ (8 ಕಿ. ಮೀ.) ಮಾರ್ಗದಲ್ಲಿ ಮೊದಲು ರೈಲುಗಳ ಸಂಚಾರ ಆರಂಭವಾಗಲಿದೆ.

2ನೇ ಹಂತದನ ಮೆಟ್ರೋ ಮಾರ್ಗಗಳು

2ನೇ ಹಂತದನ ಮೆಟ್ರೋ ಮಾರ್ಗಗಳು

ನಮ್ಮ ಮೆಟ್ರೋ 2ನೇ ಹಂತದ 72 ಕಿ. ಮೀ. ಮಾರ್ಗದಲ್ಲಿ ಎರಡು ಮಾರ್ಗ ಮಾತ್ರ ಈ ವರ್ಷ ಸಂಚಾರಕ್ಕೆ ಮುಕ್ತವಾಗಲಿದೆ. ಮಾರ್ಗಗಳ ವಿವರ

* ಕನಕಪುರ ರಸ್ತೆ-ಅಂಜನಾಪುರ ಟೌನ್ ಶಿಪ್
* ನಾಯಂಡಹಳ್ಳಿ-ಚಲ್ಲಘಟ್ಟ ಡಿಪೋ
* ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್‌
* ಆರ್. ವಿ. ರಸ್ತೆ ಬೊಮ್ಮಸಂದ್ರ
* ತುಮಕೂರು ರಸ್ತೆ-ಬಿಐಇಸಿ
* ಗೊಟ್ಟಿಗೆರೆ-ನಾಗವಾರ

ಕಾಮಗಾರಿಗಳು ಅಂತಿಮ ಹಂತದಲ್ಲಿ

ಕಾಮಗಾರಿಗಳು ಅಂತಿಮ ಹಂತದಲ್ಲಿ

ಯಲಚೇನಹಳ್ಳಿ-ಅಂಜನಾಪುರ ಟೌನ್ ಶಿಪ್ ನಡುವಿನ 6.5 ಕಿ. ಮೀ. ಮಾರ್ಗದಲ್ಲಿ ಹಳಿಗಳನ್ನು ಹಾಕುವ ಕೆಲಸ ಪೂರ್ಣಗೊಂಡಿದೆ. ಅಂಜಾನಪುರ ಹೊರತುಪಡಿಸಿ ಉಳಿದ ನಾಲ್ಕು ನಿಲ್ದಾಣಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಮಾರ್ಚ್ ಅಂತ್ಯದ ವೇಳೆಗೆ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.

ನಾಯಂಡನಹಳ್ಳಿ-ಕೆಂಗೇರಿ ಮಾರ್ಗ

ನಾಯಂಡನಹಳ್ಳಿ-ಕೆಂಗೇರಿ ಮಾರ್ಗ

ಮೈಸೂರು ರಸ್ತೆಯಲ್ಲಿ ನಾಯಂಡಹಳ್ಳಿ-ಕೆಂಗೇರಿ ನಡುವಿನ ಮಾರ್ಗವನ್ನು ಮಾತ್ರ ನವೆಂಬರ್ 1ರಂದು ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದೆ. ಆದರೆ, ಚಲ್ಲಘಟ್ಟ ಡಿಪೋ ತನಕ ಈ ಮಾರ್ಗ ಸಾಗಲಿದ್ದು, ಭೂ ಸ್ವಾಧೀನದ ಕುರಿತ ಗೊಂದಲದಿಂದಾಗಿ ಕಾಮಗಾರಿ ವಿಳಂಬವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+