ನಮ್ಮ ಮೆಟ್ರೋ: ಮತ್ತೆ ಸುರಂಗ ಕೊರೆಯಲು ಮುಂದಾದ ವರದಾ

ಬೆಂಗಳೂರು, ಜನವರಿ 29: ನಮ್ಮ ಮೆಟ್ರೋದ ಎರಡನೇ ಹಂತದ ಸುರಂಗ ನಿರ್ಮಾಣ ಕಾರ್ಯ ಚುರುಕುಗೊಂಡಿದ್ದು, ವೆಲ್ಲಾರ-ಲ್ಯಾಂಗ್‌ಫೋರ್ಡ್‌ ನಡುವೆ ಮತ್ತೆ ಕಾರ್ಯಾಚರಣೆ ಆರಂಭಿಸಿದೆ.

ನಮ್ಮ ಮೆಟ್ರೋದ ಸುರಂಗ ಮಾರ್ಗ ಕೊರೆಯುವ ಯಂತ್ರ- ವರದ ಮತ್ತೆ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಕಳೆದ ವರ್ಷ ನವೆಂಬರ್ 11ರಂದುವೆಲ್ಲಾರ ಶಾಫ್ಟ್ (RMS ಶಾಫ್ಟ್) ನಿಂದ ಲ್ಯಾಂಗ್‌ಫೋರ್ಡ್ ಟೌನ್ ನಿಲ್ದಾಣದವರೆಗೆ ಬೋರಿಂಗ್ ಅನ್ನು ಪೂರ್ಣಗೊಳಿಸಿದ ಯಂತ್ರವು ಅದೇ ದಿಕ್ಕಿನಲ್ಲಿ ಸಮಾನಾಂತರ ರೇಖೆಯಲ್ಲಿ ಸುರಂಗ ಮಾರ್ಗವನ್ನು ಕೊರೆಯಲು ಪ್ರಾರಂಭಿಸಿತು.

ಎಂಟು ತಿಂಗಳ ಕಾಲ ಸುರಂಗ ಮಾರ್ಗ ಕೊರೆದ ನಂತರ ಲ್ಯಾಂಗ್‌ಫೋರ್ಡ್ ನಿಲ್ದಾಣವನ್ನು ತಲುಪಿದಾಗ, ಅದನ್ನು ಕಿತ್ತು ಹಾಕಲಾಯಿತು. ಮತ್ತೊಂದು ಮಾರ್ಗಕ್ಕಾಗಿ ಮರು ಪ್ರಾರಂಭಿಸಲು ಮತ್ತೆ ವೆಲ್ಲರಾಕ್ಕೆ ರಸ್ತೆಯ ಮೂಲಕ ಸಾಗಿಸಲಾಯಿತು. ವರದಾ ಯಂತ್ರವನ್ನು ಬಳಸಿ ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಲ್ಯಾಂಗ್‌ಫೋರ್ಡ್‌ ಟೌನ್ ನಿಲ್ದಾಣದವರೆಗೆ 594 ಮೀ ಉದ್ದದ ಸುರಂಗ ಕೊರೆಯಲಾಗಿತ್ತು. 2021ರ ಮಾರ್ಚ್ 12ರಂದು ಆರಂಭವಾಗಿದ್ದ ಈ ಕಾಮಗಾರಿ ನ.11ರಂದು ಪೂರ್ಣಗೊಂಡಿತ್ತು.

Namma Metro: Tunnel Boring Machine Varada Starts Work On Parallel Line

ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಲ್ಯಾಂಗ್‌ಫೋರ್ಡ್‌ ಟೌನ್ ವರೆಗಿನ ಇನ್ನೊಂದು ಸುರಂಗವನ್ನು ನಿರ್ಮಿಸುವುದಕ್ಕೂ ಇದೇ ಯಂತ್ರವನ್ನು ಬಳಸಲಾಗುತ್ತಿದೆ. ಈ ಯಂತ್ರವನ್ನು ಜರ್ಮನಿಯಿಂದ ತರಿಸಿಕೊಳ್ಳಲಾಗಿದೆ. ಇದು 5.80 ಮೀ ವ್ಯಾಸದ ಸುರಂಗವನ್ನು ನಿರ್ಮಿಸುತ್ತದೆ.

ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಗೊಟ್ಟಿಗೆರೆ-ನಾಗವಾರದವರೆಗಿನ 21.25 ಕಿ.ಮೀ ಉದ್ದದ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರದವರೆಗೆ 13.76 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಇದು ದೇಶದಲ್ಲೇ ಅತಿ ಉದ್ದದ ಮೆಟ್ರೋ ಸುರಂಗ ಮಾರ್ಗ. ಒಟ್ಟು 9 ಯಂತ್ರಗಳು ಸುರಂಗ ಕಪರೆಯುವ ಕಾರ್ಯದಲ್ಲಿ ತೊಡಗಿವೆ. ಪ್ರತಿ ದಿನ ಸರಾಸರಿ 3.5 ಮೀ ಉದ್ದದಷ್ಟು ಸುರಂಗ ಕೊರೆಯಲಾಗುತ್ತದೆ.

ವರದ ಸುರಂಗ ಮಾರ್ಗ ಕೊರೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೊದಲು ಈ ಸಾಲಿನಲ್ಲಿ 594 ಮೀಟರ್‌ಗಳನ್ನು ಕೊರೆಯುತ್ತದೆ. ನಾಗವಾರದಿಂದ ಕಾಳೇನ ಅಗ್ರಹಾರ (ಗೊಟ್ಟಿಗೆರೆ) ವರೆಗಿನ ಮೆಟ್ರೊ ಮಾರ್ಗಕ್ಕೆ ಅಂತರ್ಗತ ಕಾರಿಡಾರ್ ರಚಿಸಲು ಒಂಬತ್ತು ಟಿಬಿಎಂಗಳು ಕೊರೆಯಲಾಗುತ್ತದೆ.

ತಮಿಳುನಾಡಿನ ಚೆನ್ನೈ ಮೂಲದ ಕಾರ್ಖಾನೆಯಲ್ಲಿ ಈ ಟಿಬಿಎಂ ನಿರ್ಮಾಣವಾಗಿದೆ. ಜರ್ಮನ್‌ ಮೂಲದ ಹೆರೆನ್‌ಕ್ನೆಚ್‌ ಕಂಪನಿಯು ಚೆನ್ನೈನಲ್ಲಿ ಈ ಯಂತ್ರವನ್ನು ನಿರ್ಮಾಣ ಮಾಡಿದೆ. ಯಂತ್ರದ ಬಹುತೇಕ ಬಿಡಿಭಾಗಗಳನ್ನು ಸ್ಥಳೀಯವಾಗಿಯೇ ನಿರ್ಮಿಸಲಾಗಿದೆ. ಫೆಬ್ರವರಿ ಮೊದಲ ವಾರದಲ್ಲಿಯೇ ಈ ಯಂತ್ರದ ಬಿಡಿಭಾಗಗಳನ್ನು ನಗರಕ್ಕೆ ತರಲಾಗಿತ್ತು.'

ವೆಲ್ಲಾರ- ಲ್ಯಾಂಗ್‌ಫೋರ್ಡ್‌ ನಡುವೆ 650 ಮೀಟರ್‌ ಉದ್ದದ ಸುರಂಗವನ್ನು ಈ ಯಂತ್ರ ಕೊರೆಯಲಿದೆ. ನಿತ್ಯ ಸರಾಸರಿ 6 ಮೀಟರ್‌ ಸುರಂಗ ಕೊರೆಯುವ ಗುರಿಯನ್ನು ಹೊಂದಲಾಗಿದೆ. ಈ ಮಾರ್ಗದ ನಿರ್ಮಾಣ ಗುತ್ತಿಗೆಯನ್ನು ಆಫ್ಕನ್ಸ್‌ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪನಿಗೆ ನೀಡಲಾಗಿದೆ.

ಡೇರಿ ವೃತ್ತದಿಂದ ನಾಗವಾರದವರೆಗೆ 13.85 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣವಾಗುತ್ತಿದ್ದು, ಒಟ್ಟು 9 ಟಿಬಿಎಂಗಳು ಕೆಲಸ ಮಾಡಲಿವೆ. ಈ ಪೈಕಿ ಈಗಾಗಲೇ ನಾಲ್ಕು ಯಂತ್ರಗಳು ಕಾರ್ಯಾಚರಣೆ ಆರಂಭಿಸಿದ್ದು, ನಾನಾ ಹಂತಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ.

ಟ್ಯಾನರಿ ರಸ್ತೆ-ನಾಗವಾರ ನಡುವೆ ಸುರಂಗ ಕೊರೆಯಲು ನಿಯೋಜಿಸಲಾಗುವ ಟಿಬಿಎಂ ತುಂಗಾ ಮತ್ತು ಭದ್ರಾ ಕೂಡ ಚೆನ್ನೈನಲ್ಲೇ ತಯಾರಾಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

Recommended Video

      Tata Group ಗೆ ಸೇರಿದ ಏರ್ ಇಂಡಿಯಾ ವಿಮಾನದಲ್ಲಿ ಏನೆಲ್ಲಾ ವಿಶೇಷತೆಗಳಿದೆ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+