Bengaluru metro: ಒಂದು ನಿಲ್ದಾಣದಲ್ಲೂ ಕಾಣುತ್ತಿಲ್ಲ 'ಸ್ಯಾನಿಟರಿ ನ್ಯಾಪ್‌ಕಿನ್' ವಿತರಣೆ ಯಂತ್ರ-ಸೌಲಭ್ಯ
ಬೆಂಗಳೂರು, ಡಿಸೆಂಬರ್ 22: ರಾಜಧಾನಿ ಜನರಿಗೆ ಉತ್ತಮ ಮತ್ತು ವೇಗದ ಸಾರಿಗೆ ಸೇವೆ ನೀಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮಹಿಳಾ ಪ್ರಯಾಣಿಕರಿಗೆ ಕಹಿ ಅನುಭವ ನೀಡುತ್ತಿದೆ. ಏಕೆಂದರೆ, ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಆರಂಭಿಸಿದ್ದ ಸ್ಯಾನಿಟರಿ ನ್ಯಾಪ್‌ಕಿನ್ (Sanitary Napkin) ವಿತರಣೆ ಯಂತ್ರಗಳನ್ನು ಸ್ಥಗಿತಗೊಳಿಸಿದೆ. ಯಾವ ಮೆಟ್ರೋ ನಿಲ್ದಾಣಗಳಲ್ಲಿ ಈ ಸೌಲಭ್ಯ ಅಳವಡಿಕೆಗೆ ಮುಂದಾಗಿಲ್ಲ. ಆದರೆ ಪ್ರಯಾಣಿಕರು ಈ ಬಗ್ಗೆ ನಿಲ್ದಾಣಗಳಲ್ಲಿ ವಿಚಾರಿಸುತ್ತಲೇ ಇದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಎಂಜಿ ರಸ್ತೆಯ ಮೆಟ್ರೋ ನಿಲ್ದಾಣಗಳಲ್ಲಿ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಣೆಗೆ 'ಸ್ವಾಸ್ಥ ಸ್ತ್ರೀ' ಹೆಸರಿನ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣಾ ಯಂತ್ರಗಳನ್ನು ಅಳವಡಿಸಿತ್ತು. ಇದರಿಂದ ಅನೇಕ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಿತ್ತು. ಆದರೆ ದುರುಷ್ಟವೆಂದರೆ ಒಂದೇ ವಾರದಲ್ಲಿ ಈ ವಿತರಣಾ ಯಂತ್ರಗಳುಸ್ಥಗಿತಗೊಂಡವು. ಈ ಕುರಿತು 'ಡಿಎಚ್' ವರದಿ ಮಾಡಿದೆ.

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿದ್ದ ಸ್ಯಾನಿಟರಿ ವೆಂಡಿಂಗ್ ಮಷಿನ್ ತೆಗೆಯಲಾಗಿದೆ. ಅಲ್ಲದೇ ಮಹಾತ್ಮ ಗಾಂಧಿ (ಎಂಜಿ) ರಸ್ತೆಯ ನಿಲ್ದಾಣದಲ್ಲಿದ್ದ ಯಂತ್ರವನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಈ ಬಗ್ಗೆ ಪ್ರಯಾಣಿಕರು ಕೇಳುತ್ತಲೆ ಇದ್ದಾರೆ. ಆದರೆ ಅವರಿಗೆ ಯಾವುದೇ ಉತ್ತರ ಸಿಕ್ಕಿಲ್ಲ ಎನ್ನಲಾಗಿದೆ.
ಮೆಟ್ರೋ ನಿಲ್ದಾಣಗಳಲ್ಲಿ ಸೌಲಭ್ಯ ಕಲ್ಪಿಸುವ ಅಗತ್ಯವಿದೆ
ಇದೆಲ್ಲ ನೋಡಿದರೆ ಮೆಟ್ರೊ ನಿಲ್ದಾಣಗಳಲ್ಲಿ ನ್ಯಾಪ್‌ಕಿನ್ ವಿತರಣೆ ಯಂತ್ರಗಳ ಅವಳಡಿಕೆ ಅಗತ್ಯತೆ ಇದೆ ಎಂಬುದನ್ನು ಎದ್ದು ಕಾಣುತ್ತದೆ. ಆದರೆ ಅದರ ಪೂರೈಕೆ ಆಸಕ್ತಿ, ಹೊಸ ನಿಲ್ದಾಣಗಳಲ್ಲಿ ವಿತರಣೆ ಯಂತ್ರಗಳ ಅಳವಡಿಕೆ ಮಾಡಲು ಸ್ವತಂತ್ರವಾಗಿದೆ. ಆದರೆ ಈ ಬಗ್ಗೆ ನಮ್ಮ ಮೆಟ್ರೋ ತೀರ್ಮಾನಿಸಿದಂತಿಲ್ಲ.
ಇನ್ನೂ ಬೈಯಪ್ಪನಹಳ್ಳಿ ನಿಲ್ದಾಣದಿಂದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಪಡೆಯಲು ಕನಿಷ್ಠ 2.8 ಕಿಮೀ ದೂರದ ಮಳಿಗೆಗಳಿಗೆ ತೆರಳಬೇಕಿದೆ. ಅದನ್ನೆ ನಿಲ್ದಾಣದಲ್ಲಿ ಒಂದು ಯಂತ್ರವಿದ್ದಿದ್ದರೆ ಸಾಕಷ್ಟು ಪ್ರಯೋಜವಾಗುತ್ತಿತ್ತು. ಕಬ್ಬನ್ ಪಾರ್ಕ್ ಮತ್ತು ಸ್ವಾಮಿ ವಿವೇಕಾನಂದ ರಸ್ತೆಯಂತಹ ಇತರ ಕಾರ್ಯನಿರತ ನಿಲ್ದಾಣಗಳು ಅಥವಾ ಕೆಆರ್ ಪುರ ನಂತರ ಹೊಸ ನಿಲ್ದಾಣಗಳಲ್ಲಿ ಸಹ ನ್ಯಾಪ್‌ಕಿನ್ ವಿತರಣಾ ಸೌಲಭ್ಯಗಳು ಇಲ್ಲ.

ಒಂದು ನಿಲ್ದಾಣದಲ್ಲೂ ಸ್ಯಾನಿಟರಿ ಪ್ಯಾಡ್ ವಿತರಣೆ ಇಲ್ಲ
ಈ ಕಾರಣದಿಂದ ಮಹಿಳೆಯರು ಅಗತ್ಯ ಸಂದರ್ಭಗಳಲ್ಲಿಯೂ ಸಹ ಹೊರಗಿನ ದೂರದ ಮಳಿಗೆಗಳನ್ನು ಅವಲಂಬಿಸಬೇಕಿದೆ.
BMRCL ಅಧಿಕಾರಿಗಳು ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಪ್‌ಕಿನ್ ಯಂತ್ರ ಅಳವಡಿಸಲು ಮುಕ್ತವಾಗಿದ್ದಾರೆ. ಹೀಗಿದ್ದರೂ ಸಹಿತ ಒಂದೇ ಒಂದು ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್ ವಿತರಣಾ ಸೌಲಭ್ಯ ಇಲ್ಲ. ಇದು ಪ್ರಯಾಣಿಕರಿಗೆ ಬೇಸರ ಉಂಟು ಮಾಡಿದೆ.
ಈ ಹಿಂದೆ ನ್ಯಾಪ್‌ಕಿನ್ ವಿತರಣೆ ಯಂತ್ರ ಇಟ್ಟಿದ್ದ ಸ್ವಾಸ್ಥ ಟೆಕ್ನೋವೇಶನ್ಸ್ ಕಂಪನಿಯ ಸಂಸ್ಥಾಪಕ-ಸಿಇಒ ಉದಯಕುಮಾರ್ ಮುತ್ತೂರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಮ್ಮ ಯಂತ್ರವನ್ನು ನಿಲ್ದಾಣದಲ್ಲಿ ಕೇವಲ ಒಂದು ವಾರದವರೆಗೆ ಮಾತ್ರ ಇರಿಸಿಕೊಳ್ಳಲು ಅನುಮತಿ ನೀಡಿದ್ದರು. ಈ ವೇಳೆ ಅದರ ಪ್ರಚಾರಕ್ಕೆ ಅವಕಾಶ ಇರಲಿಲ್ಲ. ಜೊತೆಗೆ ಪ್ರತಿ ಚದರ ಅಡಿಗೆ ನಿರ್ದಿಷ್ಟ ಮೊತ್ತ ಪಾವತಿಗೆ ಕೇಳಿದ್ದರು. ಇಷ್ಟು ಮೊತ್ತ ನಮಗೆ ಹೆಚ್ಚಾಗುತ್ತಿತ್ತು ಎಂದು ತಿಳಿಸಿದರು.
ಈ ಸೌಲಭ್ಯ ಅಳವಡಿಕೆಗೆ BMRCL ಚರ್ಚೆ
ಸದ್ಯ ಬೆಂಗಳೂರಿನ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿತರಣೆ ಯಂತ್ರಗಳನ್ನು ಅಳವಡಿಸಲು ವಿವಿಧ ಕಂಪನಿಗಳ ಜೊತೆಗೆ ನಮ್ಮ ಮೆಟ್ರೋ (BMRCL) ಚರ್ಚೆ ನಡೆಸುತ್ತಿದೆ. ಎರಡು ನ್ಯಾಪ್‌ಕಿನ್ ಪ್ಯಾಕ್‌ಗೆ ಹತ್ತು ರೂಪಾಯಿ ಬೆಲೆ ನಿಗದಿ ಮಾಡುವ ಉದ್ದೇಶ ಇದೆ ಎನ್ನಲಾಗಿದೆ.
ಬೆಂಗಳೂರಿನ ಮೆಟ್ರೋ ಮಹಿಳಾ ಪ್ರಯಾಣಿಕರಿಗೆ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಪ್‌ಕಿನ್ ವಿತರಣೆ ಸೌಲಭ್ಯ ಇಲ್ಲದಿರುವುದು ಬೇಸರ ತರಿಸಿದೆ. ಇದೊಂದು ಸೌಲಭ್ಯ ಎಂದು ಹೇಳದೆ ಮಹಿಳೆಯರು ಹಕ್ಕು ಎಂದು ಭಾವಿಸಬೇಕು ಎಂದು 23 ವರ್ಷ ಮಹಿಳಾ ಪ್ರಯಾಣಿಕರು ತಿಳಿಸಿದ್ದಾರೆ.












Click it and Unblock the Notifications