ನಮ್ಮ ಮೆಟ್ರೋ ಸೇವೆ ಪುನರಾರಂಭ: ಪ್ರತಿಭಟನೆ ಹಿಂಪಡೆದ ಸಿಬ್ಬಂದಿ

ಪ್ರತಿಭಟನೆ ನಿರತ ನಮ್ಮ ಮೆಟ್ರೋ ಸಿಬ್ಬಂದಿ ಮೇಲೆ ಎಸ್ಮಾ ಜಾರಿಗೆ ರಾಜ್ಯ ಸರ್ಕಾರದ ಚಿಂತನೆ. ನಮ್ಮ ಮೆಟ್ರೋ ಸಿಬ್ಬಂದಿ ಹಾಗೂ ಕೆಎಸ್ ಐಎಸ್ಎಫ್ ಸಿಬ್ಬಂದಿ ನಡುವೆ ಜಗಳ. ಮೆಟ್ರೋ ಸಿಬ್ಬಂದಿ ಬಂಧನ ಮಾಡಿರುವ ಕೆಎಸ್ ಐಎಸ್ಎಫ್.

ಬೆಂಗಳೂರು, ಜುಲೈ 7: ಶುಕ್ರವಾರ ಬೆಳಗ್ಗೆಯಿಂದ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ರೈಲು ಸಂಚಾರ,ಶುಕ್ರವಾರ ಮಧ್ಯಾಹ್ನದ ವೇಳೆ ಪುನರಾರಂಭವಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್ ಸಿಎಲ್) ಅಧ್ಯಕ್ಷ ಯು.ಎ. ವಸಂತರಾವ್, ರೈಲು ಸೇವೆಗಳು ಪುನರಾರಂಭವಾಗಿರುವುದನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.

ಹಲಸೂರು ಗೇಟ್ ಪೊಲೀಸ್ ಠಾಣಾಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ನಮ್ಮ ಮೆಟ್ರೋ ಸಿಬ್ಬಂದಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಮೆಟ್ರೋ ಸಿಬ್ಬಂದಿ ಧರಣಿಗೆ ಕೂತಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ, ಮೆಟ್ರೋ ರೈಲು ಸಂಚಾರ ಆರಂಭವಾಗಿರಲಿಲ್ಲ.

Namma Metro staff call-off protest, restart service

ಪ್ರತಿಭಟನೆಗೆ ಕಾರಣ: ಗುರುವಾರ (ಜುಲೈ 6) ಬೆಳಗ್ಗೆ ಸೆಂಟ್ರಲ್ ಕಾಲೇಜು ನಿಲ್ದಾಣವಾದ ಸರ್.ಎಂ. ವಿಶ್ವೇಶ್ವರಯ್ಯ ನಿಲ್ದಾಣಕ್ಕೆ ಪ್ರಯಾಣಕ್ಕಾಗಿ ಕೆಎಸ್ ಐಎಸ್ಎಫ್ ಆಗಮಿಸಿದ್ದಾಗ, ಮೆಟ್ರೋ ಸಿಬ್ಬಂದಿ ಎಂದಿನಂತೆ ತಪಾಸಣೆಗೆ ಮುಂದಾಗಿದ್ದರು.

ಆದರೆ, ತಪಾಸಣೆಗೆ ಕೆಎಸ್ ಐಎಸ್ಎಫ್ ಸಿಬ್ಬಂದಿ ನಿರಾಕರಿಸಿದ ಹಿನ್ನೆಲೆಯಲ್ಲಿ ಜಗಳ ಶುರುವಾಗಿದೆ. ಇದು ವಿಕೋಪಕ್ಕೆ ತಿರುಗಿ, ಕೆಎಸ್ ಐಎಸ್ಎಫ್ ಹಾಗೂ ಮೆಟ್ರೋ ಸಿಬ್ಬಂದಿಯ ನಡುವೆ ತಳ್ಳಾಟವೂ ನಡೆದ್ದು, ದೊಡ್ಡ ಗಲಾಟೆಯೇ ಆಯಿತು. ತಮ್ಮ ಮೇಲೆ ಹಲ್ಲೆ ಮಾಡಿದರೆಂದು ಆರೋಪಿಸಿರುವ ಕೆಎಸ್ ಐಎಸ್ಎಫ್ ಸಿಬ್ಬಂದಿ, ನಮ್ಮೆ ಮೆಟ್ರೋದ ಕೆಲ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಇದು ಮೆಟ್ರೋ ಸಿಬ್ಬಂದಿಯ ವಿವಾದಕ್ಕೆ ಕಾರಣವಾಗಿದೆ.

ಈ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಂದಿನಂತೆ ಜುಲೈ 7ರಂದು ಬೆಳಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ಮೆಟ್ರೋ ಸೇವೆ ನಿಂತು ಹೋಗಿದೆ. ಈ ಬಗ್ಗೆ ಮೆಟ್ರೋ ಸಂಸ್ಥೆಯ ಅಧಿಕಾರಿಗಳು ಪ್ರತಿಭಟನೆಯ ಸ್ಥಳಕ್ಕಾಗಮಿಸಿ ಸಂಧಾನ ಮಾಡಲೆತ್ನಿಸಿದರೂ, ಅದು ಫಲ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+