ಹಸಿರು ಮಾರ್ಗದ ನಮ್ಮ ಮೆಟ್ರೋ ಸೇವೆಯಲ್ಲಿ ವ್ಯತ್ಯಯ, ಬೇಗ ಮನೆ ಸೇರಿಕೊಳ್ಳಿ
ಬೆಂಗಳೂರು, ಮಾರ್ಚ್ 14: ಹಸಿರು ಮಾರ್ಗದ ನಮ್ಮ ಮೆಟ್ರೋ ಸೇವೆಯಲ್ಲಿ ಇಂದು(ಮಾರ್ಚ್ 14) ವ್ಯತ್ಯಯ ಉಂಟಾಗಲಿದೆ.
ಗುರುವಾರ ರಾತ್ರಿ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಮಹಾಕವಿ ಕುವೆಂಪು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಹಳಿ ಕಾಮಗಾರಿ ನಡೆಯುವ ಕಾರಣ ನ್ಯಾಷನಲ್ ಕಾಲೇಜು ಹಾಗೂ ಯಶವಂತಪುರ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ಸಂಚಾರವಿರುವುದಿಲ್ಲ.
ಹಸಿರು ಮಾರ್ಗವು ಯಲಚೇನಹಳ್ಳಿಯಿಂದ ವಿಸ್ತರಣೆಗೊಂಡು ನಾಗಸಂದ್ರಕ್ಕೆ ಮೆಜೆಸ್ಟಿಕ್ ಮೂಲಕ ತೆರಳುತ್ತದೆ. ಯಲಚೇನಹಳ್ಳಿಯಿಂದ ನಾಗಸಂದ್ರಕ್ಕೆ ರಾತ್ರಿ 9.28ಕ್ಕೆ ಕೊನೆಯ ಮೆಟ್ರೋ ಹೊರಡಲಿದೆ.ನಾಗಸಂದ್ರದಿಂದ ರಾತ್ರಿ 9.30ಕ್ಕೆ ಯಲಚೇನಹಳ್ಳಿಗೆ ಕೊನೆಯ ರೈಲು ಸಂಚರಿಸಲಿದೆ.

ಈ ಮೆಟ್ರೋ ಕೇವಲ ಯಲಚೇನಹಳ್ಳಿಯಿಂದ ನ್ಯಾಷನಲ್ ಕಾಲೇಜು ಹಾಗೂ ನಾಗಸಂದ್ರದಿಂದ ಯಶವಂತಪುರದವರೆಗೆ ಮಾತ್ರ ಸಂಚರಿಸಲಿದೆ. ನಾಗಸಂದ್ರ ಹಾಗೂ ಯಲಚೇನಹಳ್ಳಿಗೆ ಮೆಜೆಸ್ಟಿಕ್‌ನಿಂದ ರಾತ್ರಿ 9.50ಕ್ಕೆ ಕೊನೆಯ ರೈಲು ಹೊರಡಲಿದೆ. ಈಗಾಗಲೇ ಏಳು ಆರು ಬೋಗಿಯ ಮೆಟ್ರೋ ರೈಲುಗಳು ನಗರದಲ್ಲಿ ಸಂಚರಿಸುತ್ತಿದ್ದರೂ ಹಸಿರು ಮಾರ್ಗದಲ್ಲಿ ಕೇವಲ 1 ರೈಲು ಮಾತ್ರ ಸಂಚರಿಸುತ್ತಿದೆ.












Click it and Unblock the Notifications