ನಮ್ಮ ಮೆಟ್ರೋ 2ನೇ ಹಂತ: ಡಿಪೋ ಸೇರಿ ಇತರೆ ಕಾಮಗಾರಿ ಕುರಿತು ಮಾಹಿತಿ

ಬೆಂಗಳೂರು, ಜೂನ್ 16: ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಇನ್ನೇನು ಆರಂಭಗೊಳ್ಳಲಿದ್ದು ನಾಲ್ಕು ಡಿಪೋಗಳನ್ನು ನಿರ್ಮಿಸಲಾಗುತ್ತಿದೆ. ನಮ್ಮ ಮೆಟ್ರೋ ನಿಗಮವು ಮೆಟ್ರೋ ರೈಲುಗಳ ದುರಸ್ತಿ ಹಾಗೂ ನಿಲುಗಡೆ ಉದ್ದೇಶದಿಂದ ಮೆಟ್ರೋ ಎರಡನೇ ಹಂತದಲ್ಲಿ ನಾಲ್ಕು ಡಿಪೋ ನಿರ್ಮಾಣಕ್ಕೆ ಆದ್ಯತೆ ನೀಡಿದೆ.

ಈಗಾಗಲೇ ನೊಯ್ಡಾ ಮೂಲದ ಸಂಸ್ಥೆಯು ಕೊತ್ತನೂರು ಡಿಪೋ ನಿರ್ಮಾಣದ ಗುತ್ತಿಗೆ ಪಡೆದಿದ್ದು , ಕೆಲವೇ ದಿನಗಳಲ್ಲಿ ಕಾರ್ಯ ಆರಂಭಗೊಳ್ಳಲಿದೆ. ಬಿಎಂಆರ್‌ಸಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಡಿಪೋ ನಿರ್ಮಾಣಕ್ಕಾಗಿ 163.44 ಕೋಟಿ ರೂ.ಮೊತ್ತ ನಿಗದಿ ಮಾಡಲಾಗಿತ್ತು. ನೊಯ್ಡಾ ಮೂಲದ ಸಂಸ್ಥೆಯು 153.83 ಕೋಟಿ ರೂ. ಮೊತ್ತಕ್ಕೆ ನಿರ್ಮಿಸುವುದಾಗಿ ಟೆಂಡರ್ ಪಡೆದಿದ್ದು, ಶೀಘ್ರವೇ ಕಾರ್ಯಾದೇಶ ನೀಡಿ ಕಾಮಗಾರಿ ಆರಂಭವಾಗಲಿದೆ.

ರೈಲುಗಳ ಸಂಖ್ಯೆ 150

ರೈಲುಗಳ ಸಂಖ್ಯೆ 150

ಎರಡನೇ ಹಂತದ ಮೆಟ್ರೋ ರೈಲುಗಳ ಸಂಖ್ಯೆ 150 ಆಗುವ ನಿರೀಕ್ಷೆ ಇದ್ದು, ಮೆಟ್ರೋ ಡಿಪೋಗಳ ಸಂಖ್ಯೆಯೂ ದ್ವಿಗುಣಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಹೊಸ ಡಿಪೋಗಳ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ.

ಹಸಿರು ಮಾರ್ಗ, 6 ಬೋಗಿಗಳ 50 ಮೆಟ್ರೋ ರೈಲು

ಹಸಿರು ಮಾರ್ಗ, 6 ಬೋಗಿಗಳ 50 ಮೆಟ್ರೋ ರೈಲು

ಈಗಿರುವ ಮೊದಲ ಹಂತದ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಆರು ಬೋಗಿಗಳ 50 ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ದುರಸ್ತಿಗೆ ಅನುಕೂಲವಾಗಲಿ ಎಂದು ಬೈಯಪ್ಪನಹಳ್ಳಿ ಮತ್ತು ಪೀಣ್ಯ ಮಾರ್ಗದಲ್ಲಿ ಮೆಟ್ರೋ ಡಿಪೋ ನಿರ್ಮಿಸಲಾಗಿದ್ದು ಕಾರ್ಯ ನಿರ್ವಹಿಸುತ್ತಿವೆ.

72 ಕಿ.ಮೀ ಕಾಮಗಾರಿ ಶುರು

72 ಕಿ.ಮೀ ಕಾಮಗಾರಿ ಶುರು

ಲಾಕ್‌ಡೌನ್ ಸಡಿಲಿಕೆ ಬಳಿಕ ಕಳೆದ 15 ದಿನಗಳಿಂದ ಮೆಟ್ರೋ ಎರಡನೇ ಹಂತದ ಕಾಮಗಾರಿಗಳು ಪುನರಾರಂಭಗೊಂಡಿವೆ. ಈಗ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ (15.5 ಕಿ.ಮೀ), ಮೈಸೂರು ರಸ್ತೆ-ಕೆಂಗೇರಿ(7.70 ಕಿ.ಮೀ), ಹೆಸರಘಟ್ಟ ಬಿಐಇಸಿ(3.77 ಕಿ.ಮೀ), ಯಲಚೇನಹಳ್ಳಿ-ಅಂಜನಾಪುರ( 6.28 ಕಿ.ಮೀ), ಆರ್‌ವಿ ರಸ್ತೆ ಬೊಮ್ಮಸಂದ್ರ (18.80 ಕಿ.ಮೀ) , ಹಾಗೂ ಗೊಟ್ಟಿಗೆರೆ-ನಾಗವಾರ(21.25 ಕಿ.ಮೀ) ಮಾರ್ಗದಲ್ಲಿ ಸುಮಾರು 72 ಕಿ.ಮೀ ಮೆಟ್ರೋ ಕಾಮಗಾರಿ ನಡೆಯುತ್ತಿದೆ.

ಎಲ್ಲೆಲ್ಲಿ ಡಿಪೋ ನಿರ್ಮಾಣ

ಎಲ್ಲೆಲ್ಲಿ ಡಿಪೋ ನಿರ್ಮಾಣ

ಗೊಟ್ಟಿಗೆರೆ-ಐಐಎಂಬಿ ಮಾರ್ಗಕ್ಕಾಗಿ ಹೆಣ್ಣೂರು ಸಮೀಪದ ಕೊತ್ತನೂರಿನಲ್ಲಿ , ನಾಯಂಡಹಳ್ಳಿ-ಕೆಂಗೇರಿ ಮಾರ್ಗಕ್ಕಾಗಿ ಚಲ್ಲಘಟ್ಟ, ಯಲಚೇನಹಳ್ಳಿ-ಅಂಜನಾಪುರ ಮಾರ್ಗಕ್ಕಾಗಿ ರವಿಶಂಕರ್ ಗುರೂಜಿ ಆಶ್ರಮ ಸಮೀಪ ಅಂಜನಾಪುರದಲ್ಲಿ, ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗಕ್ಕಾಗಿ ಹೆಬ್ಬಗೋಡಿಯಲ್ಲಿ ನೂತನ ಡಿಪೋ ನಿರ್ಮಾಣಗೊಳ್ಳಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+