Breaking: Namma Metro: ನೇರಳೆ ಮಾರ್ಗದಲ್ಲಿ ರೈಲು ಸಂಚಾರ ದಿಢೀರ್ ಸ್ಥಗಿತ, ಪ್ರಯಾಣಿಕರ ಪರದಾಟ
ಬೆಂಗಳೂರು, ಜಲೈ 04: ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ವೇಗದ ಮತ್ತು ಸುರಕ್ಷಿತ ಸಾರಿಗೆ ಒದಗಿಸುತ್ತಿರುವ ನಮ್ಮ ಮೆಟ್ರೋ (Namma Metro) ರೈಲಿನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಸಂಚಾರಿಸುತ್ತಿದ್ದ ರೈಲು ಏಕಾಎಕಿ ಸ್ಥಗಿತಗೊಂಡು ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದರಿಂದ ನೂರಾರು ಪ್ರಯಾಣಿಕರು ಪರದಾಡಿದ ಘಟನೆ ಮಂಗಳವಾರ ಬೆಳಗ್ಗೆ ನೇರಳೆ ಮಾರ್ಗದಲ್ಲಿ (Purple Line) ನಡೆದಿದೆ.
Bengaluru Metro's Purple Line services disrupted in the morning due to signalling issues.
— ರೇಖಾ ತಿಪಟೂರು/ Rekha Tipaturu (@RekhaBasavaraju) July 4, 2023
Challenges during peak hours.@NammaBengaluroo pic.twitter.com/JBFx5lp4Cq
ಬೈಯಪ್ಪನಹಳ್ಳಿಯಿಂದ ಕೆಂಗೇರಿವರೆಗಿನ (Purple Line) ನೇರಳೆ ಮಾರ್ಗದಲ್ಲಿ ಎಂದಿನಿಂತೆ ಪೀಕ್ ಅವರ್ (ಹೆಚ್ಚು ಜನ ಓಡಾಡುವ ಅವಧಿ) ನಲ್ಲಿ ಮೆಟ್ರೋ ಸಂಚಾರ ಆರಂಭಿಸಿತ್ತು. ಆದರೆ ಇದ್ದಕ್ಕಿದ್ದಂತೆ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಿತು. ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಇದರಿಂದಾಗಿ ಶಾಲೆ-ಕಾಲೇಜುಗಳು, ಕೆಲಸಗಳಿಗೆ ಹಾಗೂ ಇನ್ನಿತರ ಕಾರ್ಯಗಳಿಗೆ ತೆರಳುತ್ತಿದ್ದ ಪ್ರಯಾಣಿಕರ ಪರದಾಡಿದರು. ಇನ್ನೂ ಈ ನೇರಳೆ ಮಾರ್ಗದಲ್ಲಿ ಮಟ್ರೋ ಸಂಚಾರ ಸ್ಥಗಿತದಿಂದಾಗಿ ಅದೇ ಮಾರ್ಗದಲ್ಲಿ ಬೇರೆ ನಿಲ್ದಾಣಗಳಲ್ಲಿನ ಪ್ರಯಾಣಿಕರು ಸಂಚಾರ ಸಮಸ್ಯೆ ಎದುರಿಸಬೇಕಾಯಿತು.
ಮೆಟ್ರೋ ದಿಢೀರ್ ಸ್ಥಗಿತಕ್ಕೆ ಕಾರಣ
ನೇರಳೆ ಮಾರ್ಗದಲ್ಲಿ ಹೀಗೆ ಮೆಟ್ರೋ ರೈಲು ಹಠಾತ್ ನಿಲ್ಲಲು ಕಾರಣ, ಕೆಲವು ತಾಂತ್ರಿಕ ಸಮಸ್ಯೆಗಳು ಎಂದು ಬಿಎಂಆರ್‌ಸಿಲ್ ಮೂಲಗಳು ತಿಳಿಸಿದೆ.
ಕಳೆದ ಜುಲೈ 02ರ ಭಾನುವಾರವಷ್ಟೇ ಇದೇ ನೇರಳೆ ಮಾರ್ಗ ಎಂಜಿ ರಸ್ತೆಯಿಂದ ಟ್ರಿನಿಟಿವರೆಗೆ ತುರ್ತು ನಿರ್ವಹಣಾ ಕಾರ್ಯ ಕೈಗೊಂಡ ಪರಿಣಾಮ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ ಬೆಳಗ್ಗೆ 07 ಗಂಟೆಯಿಂದ 09 ಗಂಟೆವರೆಗೆ ಸಂಚಾರ ವ್ಯತ್ಯಯ ಉಂಟಾಗಿತ್ತು. ಅದರ ಬೆನ್ನಲ್ಲೆ ಅದೇ ಮಾರ್ಗದಲ್ಲಿ ರೈಲು ಹಠಾತ್ ನಿಲ್ಲುವ ಮೂಲಕ ಸಾರ್ವಜನಿಕರಿಗೆ ತೊಂದರೆ ಸೃಷಿಯಾಗಿದೆ.
ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಜನಜಂಗುಳಿ
ಮೆಟ್ರೋ ರೈಲಿನಲ್ಲಿ ಸಂಚಾರ ವ್ಯತ್ಯಯವಾಗಿದ್ದರಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಜೆಸ್ಟಿಕ್ ಮೆಟ್ರೋ ರೈಲು ನಿಲ್ದಾಣದಲ್ಲಿ ಜನ ಜಂಗುಳಿಯೇ ಕಂಡು ಬಂತು. ಪ್ಲಾಟ್‌ಫಾರ್ಮ್ ತುಂಬಾ ಕಿಕ್ಕಿರಿರು ಕಾಲಿಡಲು ಜಾಗವೇ ಇರದಷ್ಟು ಜನ ತುಂಬಿಕೊಂಡಿದ್ದರು. ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದರಿಂದ ಸರಿಯಾದ ಸಮಯಕ್ಕೆ ಉದ್ದೇಶಿತ ಸ್ಥಳ ತಲುಪದೇ ಜನ ಕಷ್ಟ ಅನುಭವಿಸಿದರು. ಮೆಜೆಸ್ಟಿಕ್ ಸೇರಿದಂತೆ ನೇರಳೆ ಮಾರ್ಗದ ಬಹುತೇಕ ಎಲ್ಲ ರೈಲು ನಿಲ್ದಾಣಗಳಲ್ಲಿ ಇಂತದ್ದೆ ಪರಿಸ್ಥಿತಿ ಕಂಡು ಬಂದಿದೆ.












Click it and Unblock the Notifications