Namma Metro update: ಪಿಂಕ್ ಮಾರ್ಗದಲ್ಲಿ ಸುರಂಗ ನಿರ್ಮಾಣ ಕೆಲಸ ಸ್ಥಗಿತ, ಯಾಕೆ?
ಬೆಂಗಳೂರು, ಜೂನ್ 28: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವತಿಯಿಂದ ನಗರದ ವಿವಿಧೆಡೆ ಹೊಸ ಮೆಟ್ರೋ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಈ ಪೈಕಿ ಎತ್ತರದ ಮಾರ್ಗ ಮತ್ತು ಭೂಗತ ಮಾರ್ಗದಲ್ಲಿ ಭರದ ಕಾಮಗಾರಿ ನಡೆಯುತ್ತಿದೆ. ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಕಾಮಗಾರಿಯಲ್ಲಿ ಮತ್ತೆ ಅಡಚಣೆ ಉಂಟಾಗಿದೆ. ಈ ಮಾರ್ಗದಲ್ಲಿ ಮೂರನೇ ಭಾರಿಗೆ ಸಿಂಕ್ ಹೋಲ್ ಬಿದ್ದಿದೆ.
ನಗರದ ಕಾಳೇನ ಅಗ್ರಹಾರ-ನಾಗವಾರ ವರೆಗೆ ನಮ್ಮ ಮೆಟ್ರೋ ಪಿಂಕ್ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಮಾರ್ಗದ ಕೆ.ಜಿ.ಹಳ್ಳಿಯಲ್ಲಿ ರಸ್ತೆಯ ಮೇಲ್ಮೈನಲ್ಲಿ ಹೊಂಡ (ಸಿಂಕ್ ಹೋಲ್) ಕಾಣಿಸಿಕೊಂಡಿದ್ದು, ಇದು ಈವರೆಗೆ ಈ ಮಾರ್ಗದಲ್ಲಿ ಕಂಡು ಬಂದ ಮೂರನೇ ಪ್ರಕರಣವಾಗಿದೆ. ಇದರಿಂದಾಗಿ ನಮ್ಮ ಮೆಟ್ರೊದ ಪಿಂಕ್ ಲೈನ್ ಭೂಗತ ಕಾರ್ಯ ನಡೆಸುತ್ತಿದ್ದ 'ತುಂಗಾ' ಟಿಬಿಎಂ (ಟನಲ್ ಬೋರಿಂಗ್ ಮೆಷಿನ್) ಕೆಲಸ ನಿಂತಿದೆ.

ಸುರಂಗ ಕಾಮಗಾರಿ ವಿಳಂಬ?
ಜರ್ಮನ್ ನಿರ್ಮಿತ ಈ ಟಿಬಿಎಂ ಸುರಂಗ ಕೊರೆಯುವ ಕೆಲಸ ನಡೆಸಿತ್ತು. KG ಹಳ್ಳಿಯಿಂದ ನಾಗವಾರದವರೆಗೆ 938-ಮೀಟರ್ ಸುರಂಗ ಕೊರೆಯುವ ಟಾರ್ಗೆಟ್ ಅನ್ನು ಇನ್ನೇನು ರೀಚ್ ಆಗುವ ಸನಿದಲ್ಲಿದ್ದ ಈ ಟಿಬಿಎಂಗೆ ದಿಢೀರ್ ರಸ್ತೆ ಮೇಲೆ ಬಿದ್ದ ಸಿಂಕ್ ಹೋಲ್ ಅಡಚಣೆ ನೀಡಿದೆ. ಇದರಿಂದ ಕಾಮಗಾರಿ ಮತ್ತಷ್ಟು ವಿಳಂಬ ಆಗಲು ಕಾರಣವಾಗಬಹುದು ಎನ್ನಲಾಗುತ್ತಿದೆ.
ನಮ್ಮ ಮೆಟ್ರೋ ಈ ಪಿಂಕ್ ಮಾರ್ಗವನ್ನು ಮಾರ್ಚ್ 2025 ವೇಳೆಗೆ ಸಾರ್ವಜನಿಕರಿಗೆ ಮುಕ್ತಗೊಳಿಸುವ ಗುಡಿ ಬಿಎಂಆರ್‌ಸಿಎಲ್ ಹಾಕಿಕೊಂಡಿದೆ. ಆದರೆ ಜೂನ್ 26ರಂದು ಗುರುವಾರ ಬೆಳಗ್ಗೆ 8.30ಕ್ಕೆ ಸುರಂಗ ಮಾರ್ಗದ ರಸ್ತೆ ಮೇಲೆ ಗುಂಡಿ ಬಿದ್ದ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ರಸ್ತೆಯಲ್ಲಿ ದೊಡ್ಡ ಗುಂಡಿ: ಇದು ಸಾಮಾನ್ಯ ಎಂದ ಮೆಟ್ರೋ
ಈ ಸಿಂಕ್‌ಹೋಲ್ 2.5-3 ಮೀಟರ್ ಅಗಲ ಹಾಗೂ 3 ಮೀಟರ್ ಆಳಕ್ಕೆ ಗುಂಡಿ ಬಿದ್ದಿದೆ. ಸಾಮಾನ್ಯವಾಗಿ ಸಡಿಲ ಮಣ್ಣಿನಿಂದ ಹೀಗೆ ಆಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಜೊತೆಗೆ ತುಂಗಾ ಟಿಬಿಎಂ ಸುರಂಗ ಕೊರೆಯುತ್ತಾ ಮುಂದೆ ಸಾಗಿದಾಗ ಆಗುವ ಒತ್ತಡ, ಕಂಪನಗಳಿಂದ ಗಾಳಿಯು ಹೀಗೆ ಗುಂಡಿಯ ಮೂಲಕ ಹೊರ ಹೋದಾಗಿ ಹೀಗೆ ರಸ್ತೆ ಮೇಲೆ ಗುಂಡಿ ಬೀಳುತ್ತವೆ. ಮೆಟ್ರೋ ಸುರಂಗ ಮಾರ್ಗದಲ್ಲಿ ಸಿಂಕ್ ಹೋಲ್ ಬೀಳುವುದು ಸಾಮಾನ್ಯವಾಗಿದೆ ಎಂದು ತಿಳಿಸಿದರು.

2023ರಿಂದ ಗುಲಾಬಿ ಮಾರ್ಗದಲ್ಲಿ ಬಿದ್ದ ಮೂರನೇ ಸಿಂಕ್‌ಹೋಲ್ ಇದಾಗಿದೆ. ಈ ಹಿಂದೆ ಎರಡು ಸಿಂಕ್ ಹೋಲ್‌ಗಳು ಬ್ರಿಗೇಡ್ ರಸ್ತೆ ಮತ್ತು ಪಾಟರಿ ಟೌನ್ ರಸ್ತೆಯಲ್ಲಿ ಕಾಣಿಸಿಕೊಂಡವು. ಸದ್ಯ ಮೂರನೇ ಸಿಂಕ್ ಹೋಲ್ ಕಾರಣದಿಂದ ಅಧಿಕಾರಿಗಳು ಟಿಬಿಎಂ ತುಂಗಾವನ್ನು ನಿಲ್ಲಿಸಿದರು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಸ್ಥಳ ಪರಿಶೀಲನೆ ಬಳಿಕ ಸಿಂಕ್‌ಹೋಲ್ ಅನ್ನು ಕಾಂಕ್ರೀಟ್‌ನಿಂದ ತುಂಬಿಸಿ ಮುಚ್ಚಿಸಿದರು. ಇದೇ ವೇಳೆ ಹಳೆಯ ನೀರು/ಒಳಚರಂಡಿ ಪೈಪ್‌ಲೈನ್‌ಗಳನ್ನು ಸರಿಪಡಿಸಲಾಯಿತು. ಈ ಸಿಂಕ್ ಹೋಲ್ ದುರಸ್ತಿಗೊಂಡು ಗಟ್ಟಿಗೊಳ್ಳಲು ಇನ್ನೂ ನಾಲ್ಕು ದಿನಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಅಲ್ಲಿಯವರೆಗೆ ಈ ಟಿಬಿಎಂ ತುಂಗಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಸುರಂಗ ಕಾರ್ಯಾಚರಣೆ ಪೂರ್ಣ ಯಾವಾಗ?
ಇನ್ನೂ ಕೆ.ಜಿ.ಹಳ್ಳಿ - ನಾಗವಾರ ನಡುವಿನ ಭೂಪ್ರದೇಶವು ಎರಡೂ ಯಂತ್ರಗಳಿಗೆ ಸವಾಲಾಗಿದೆ. ಇದು ಮಣ್ಣು, ಕಲ್ಲು ಮತ್ತು ಮರಳನ್ನು ಒಳಗೊಂಡಿದೆ. "ಭೌಗೋಳಿಕ ಪರಿಸ್ಥಿತಿಗಳಿಂದಾಗಿ ಪ್ರಗತಿ ನಿಧಾನವಾಗಿದೆ. ಇಲ್ಲಿ ಸುರಂಗ ಕೊರೆಯುತ್ತಿರುವ ಟಿಬಿಎಂಗಳಲ್ಲಿ ಒಂದು ಅಕ್ಟೋಬರ್ ಅಂತ್ಯಕ್ಕೆ ಮತ್ತೊಂದು ನವೆಂಬರ್ 30ಕ್ಕೆ ಕಾರ್ಯಾಚದರಣೆ ಮುಗಿಸಿ ಹೊರ ಬರಲಿವೆ.












Click it and Unblock the Notifications