ಸೇನೆಯ ಅಪರೂಪದ ಚಿತ್ರಗಳನ್ನು ನೋಡಲು ಬನ್ನಿ
ಬೆಂಗಳೂರು, ಜ.15 : ಬುಧವಾರ ಸೇನಾ ದಿನಾಚಾರಣೆ, ಈ ಸಂದರ್ಭದಲ್ಲಿ ಬೆಂಗಳೂರು ಕಂಟೋನ್ಮೆಂಟ್ ನ ಅಪರೂಪದ ಚಿತ್ರಗಳನ್ನು ನೋಡಬೇಕಾದರೆ. ಎಂಜಿ ರಸ್ತೆಯ ನಮ್ಮ ಮೆಟ್ರೋ ರಂಗೋಲಿ ಬುಲೆವರ್ಡ್ ಗೆ ಬನ್ನಿ. ಬುಧವಾರ ಮತ್ತು ಗುರುವಾರ ಬುಲೆವರ್ಡ್ ನಲ್ಲಿ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರ ನೆನಪಿಗಾಗಿ ಪ್ರತಿ ವರ್ಷ ಜ.15ರಂದು ಸೇನಾ ದಿನಾಚರಣೆ ಆಚರಿಸಲಾಗುತ್ತದೆ. ಕರ್ನಾಟಕ ಮತ್ತು ಕೇರಳ ಉಪಪ್ರಾಂತ್ಯ ಮತ್ತು ನಮ್ಮ ಮೆಟ್ರೋ ಜಂಟಿಯಾಗಿ ಈ ಬಾರಿ ಸೇನಾದಿನಾಚರಣೆ ಪ್ರಯುಕ್ತ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದೆ. [ಸುಗ್ಗಿ-ಹುಗ್ಗಿ: ಇಂದು ರವೀಂದ್ರ ಕಲಾಕ್ಷೇತ್ರಕ್ಕೆ ಬನ್ನಿ]

ಎಂಜಿ ರಸ್ತೆಯ ನಮ್ಮ ಮೆಟ್ರೋ ರಂಗೋಲಿ ಬುಲೆವರ್ಡ್ ನಲ್ಲಿ ಈ ಪ್ರದರ್ಶನ ಬುಧವಾರ ಮತ್ತು ಗುರುವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಬೆಂಗಳೂರು ಕಂಟೋನ್ಮೆಂಟ್ ನ ಅಪರೂಪದ ಛಾಯಾಚಿತ್ರಗಳು, ಮಾಹಿತಿಗಳು ಈ ಪ್ರದರ್ಶನದಲ್ಲಿ ದೊರೆಯಲಿವೆ. ಹಳೆಯ ಚಿತ್ರಗಳನ್ನು ನೋಡುತ್ತಾ ಹಿಂದಿನ ನೆನಪನ್ನು ಮೆಲುಕು ಹಾಕಲು ಇಚ್ಛಿಸುವವರು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಬಹುದು.
ಈ ಪ್ರದರ್ಶನ ಕೇವಲ ಎರಡು ದಿನಗಳಿಗೆ ಮಾತ್ರ ಸೀಮಿತವಾಗಿಲ್ಲ. ಭಾರತೀಯ ಸೇನೆ ಸಾಗಿಬಂದ ಹಾದಿಯ ಕುರಿತ ಛಾಯಾಚಿತ್ರಗಳ ಪ್ರದರ್ಶನ ವಿಸ್ಮಯ ಗ್ಯಾಲರಿಯಲ್ಲಿ ಜ.15ರಿಂದ 27ರವರೆಗೆ ನಡೆಯಲಿದೆ. ಸೇನಾ ದಿನಾಚರಣೆ ಕೇವಲ ಪ್ರದರ್ಶನಗಳಿಗೆ ಸೀಮೀತವಾಗಿಲ್ಲ. ಭಾರತೀಯ ಸೇನೆಯ ವಾದ್ಯಗೋಷ್ಠಿ ಜ.15 ಮತ್ತು 16ರಂದು ಬಯಲುವಿನಲ್ಲಿ ನಡೆಯಲಿದೆ.
ಕಾಮ್ ರಾಜ್ ರಸ್ತೆ ಮತ್ತು ಎಎಸ್ ಸಿ ಸೆಂಟರ್ ನ ಸೇನಾ ಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಂಗಸ್ಥಳದಲ್ಲಿ ಜ.15 ಮತ್ತು 16ರಂದು ಸಂಜೆ 5.30ರಿಂದ 6.30ರವರೆಗೆ ನಡೆಸಿಕೊಡಲಿದ್ದಾರೆ. ಮೀರಾ ಮೋಹನ್ ಅವರಿಂದ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಾರತೀಯ ಯೋಧರಿಗೆ ಗೌರವ ಸಲ್ಲಿಸುವವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.












Click it and Unblock the Notifications