Namma Metro: ಪಿಲ್ಲರ್ ಕುಸಿತ ಪ್ರಕರಣ, ಇಬ್ಬರ ಸಾವು ಬೆನ್ನಲ್ಲೇ 3 ಎಂಜಿನಿಯರ್ ಅಮಾನತು: BMRCL

ಬೆಂಗಳೂರು, ಜನವರಿ 11: ಮೆಟ್ರೋ ಮಾರ್ಗ ನಿರ್ಮಾಣದ ವೇಳೆ ಕಬ್ಬಿಣ ಪಿಲ್ಲರ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಬುಧವಾರ ಬೆಂಗಳೂರು ಮೆಟ್ರೋ ರೈಲ್ ಕಾಪೋರೇಷನ್ ಲಿಮಿಟೆಡ್ (BMRCL) ಅಮಾನತುಗೊಳಿಸಿದೆ.

ನಗರದಲ್ಲಿ ಮಂಗಳವಾರ ಹೆಣ್ಣೂರು ರಸ್ತೆಯಲ್ಲಿ ನಡೆದ ಪಿಲ್ಲರ್ ಕುಸಿತವಾಗಿ ಎರಡು ಅಮಾಯಕ ಜೀವಗಳು ಬಲಿಯಾದವು. ಹೀಗಾಗಿ ಬೆಂಗಳೂರು ಮೆಟ್ರೋ ರೈಲ್ ಕಾಪೋರೇಷನ್ ಲಿಮಿಟೆಡ್ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಎಚ್ಚೆತ್ತ ಕಂಪನಿಯು ಪ್ರಭಾರಿ ಉಪ ಮುಖ್ಯ ಎಂಜಿನಿಯರ್ ಹಾಗೂ ಕಾರ್ಯ ನಿರ್ವಾಹಕ ಮತ್ತು ಸೈಟ್ ಎಂಜಿನಿಯರ್ ಸೇರಿದಂತೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿದೆ.

ಅಷ್ಟೇ ಅಲ್ಲದೇ ದುರಂತದ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಲು ಹಾಗೂ ತನಿಖೆ ಬಳಿಕ ಸಮಗ್ರ ವರದಿ ಸಲ್ಲಿಸುವ ಸಲುವಾಗಿ ಕಂಪನಿಯೇ ಆಂತರಿಕ ತಾಂತ್ರಿಕ ತಂಡವೊಂದನ್ನು ರಚನೆ ಮಾಡಿದ್ದಾರೆ ಹೇಳಿದೆ. ಪಿಲ್ಲರ್ ಕುಸಿತ ಕಾರಣದಿಂದ ಬೆಂಗಳೂರು ಮೆಟ್ರೋ ರೈಲ್ ಕಾಪೋರೇಷನ್ ಲಿಮಿಟೆಡ್ (BMRCL) ಕಾಮಗಾರಿ ಗುಣಮಟ್ಟ ಬಗ್ಗೆ ಚರ್ಚೆ ಶುರುವಾಗಿದ್ದು, ಅನುಮಾನಗಳು ವ್ಯಕ್ತವಾಗಿವೆ.

Namma Metro: BMRCL suspended for 3 Engineers After Metro pillar Collapse tragedy on Tuesday

ತನಿಖೆಗೆ IISc ಮೊರೆ ಹೋದ BMRCL

ಈ ಕಾರಣಕ್ಕೆ ಪಿಲ್ಲರ್ ಕುಸಿತ ಘಟನೆಗೆ ಸಂಬಂಧಿಸಿಂತೆ ಸ್ವತಂತ್ರವಾಗಿ ತನಿಖೆ ನಡೆಸುವಂತೆ ಹಾಗೂ ವರದಿ ನೀಡುವಂತೆ ಬಿಎಂಆರ್‌ಸಿಎಲ್ ಭಾರತೀಯ ವಿಜ್ಞಾನ ಸಂಸ್ಥೆ (IISc) ಮೊರೆ ಹೋಗಿದೆ. ಈ ಮೂಲಕ ದುರಂತದಿಂದ ಕಂಪನಿ ಮೇಲೆ ಕೇಳಿ ಬಂದ ಆರೋಪಗಳಿಂದ ಮುಕ್ತಗೊಳಿಸುವಂತೆ ಕೇಳಿಕೊಂಡಿದೆ ಎನ್ನಲಾಗಿದೆ.

ದುರಂತದ ಹಿನ್ನೆಲೆ

ಮಂಗಳವಾರ ಬೆಳಗ್ಗೆ 103.30ಗಂಟೆ ಸುಮಾರಿಗೆ ಬೈಪ್ಪನಹಳ್ಳಿಯಿಂದ ಬೆಂಗಳೂರಿನ ನಾಗವಾರ ಸಮೀಪ ಹೆಣ್ಣೂರು ರಸ್ತೆಯಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ ಹಂತ 2B ಕಾಮಗಾರಿಯಲ್ಲಿ ನಿರ್ಮಾಣ ಹಂತದ ಕಬ್ಬಿಣ ಸರಳಿನ ಪಿಲ್ಲರ್ ರಸ್ತೆ ಬಿದ್ದು ಅವಘಡ ಸಂಭವಿಸಿತು. ಇದೇ ವೇಳೆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ದಂಪತಿಗಳ ಪೈಕಿ ತಾಯಿ ತೇಜಸ್ವಿನಿ (25) ಮತ್ತು 2 ವರ್ಷದ ಮಗು ವಿಹಾನ್ ಜೀವ ಬಿಟ್ಟಿವೆ. ತಂದೆ ಹಾಗೂ ಮತ್ತೊಂದು ಮಗುವಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Namma Metro: BMRCL suspended for 3 Engineers After Metro pillar Collapse tragedy on Tuesday

ಪ್ರಕರಣ ಕುರಿತು ತ್ವರಿತಗತಿಯಲ್ಲಿ ಮಾಹಿತಿ ನೀಡಲು ಹಿಂದೇಟು ಹಾಕಿದ್ದ ಬೆಂಗಳೂರು ಮೆಟ್ರೋ ರೈಲ್ ಕಾಪೋರೇಷನ್ ಲಿಮಿಟೆಡ್ (BMRCL) ವಿರುದ್ಧ ಟೀಕೆಗಳು ವ್ಯಕ್ತವಾದವು. ಅಂತಿಮವಾಗಿ ಗೈ ವೈಯರ್ ಪೈಕಿ ಒಂದು ತಂತಿ ಸಡಿಲಗೊಂಡು ರಸ್ತೆ ಬಿದ್ದು ದುರಂತ ಸಂಭವಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ನಂತರ ಕಂಪನಿ 20ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದರೆ, ರಾಜ್ಯ ಸರ್ಕಾರ 10ಲಕ್ಷ ನೀಡುವುದಾಗಿ ಘೋಷಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+