ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್; ಬೆಂಗಳೂರಿನ 3ನೇ ಇಂಟರ್‌ಚೇಂಜ್ ಆಗಲಿದೆ ಜಯದೇವ ಆಸ್ಪತ್ರೆ!

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಮಹತ್ವದ ಸುದ್ದಿ. ಬೆಂಗಳೂರಿನ ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣವು ನಗರದ ಮೂರನೇ ಮೆಟ್ರೋ ಇಂಟರ್‌ಚೇಂಜ್ ಕೇಂದ್ರವಾಗಿ ಹೊರಹೊಮ್ಮಲಿದೆ. ಪಿಂಕ್ ಲೈನ್‌ನ ಎತ್ತರಿಸಿದ ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಸಂಚಾರ ಆರಂಭವಾಗುವುದರೊಂದಿಗೆ ಈ ನಿಲ್ದಾಣವು ಪಿಂಕ್ ಮತ್ತು ಯೆಲ್ಲೋ ಲೈನ್‌ಗಳನ್ನು ಸಂಪರ್ಕಿಸಲಿದೆ. ಇದರಿಂದ ದಕ್ಷಿಣ ಬೆಂಗಳೂರಿನ ವಸತಿ ಪ್ರದೇಶಗಳು ಹಾಗೂ ಐಟಿ ಕಾರಿಡಾರ್‌ಗಳ ಜನರಿಗೆ ಮೆಟ್ರೋ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ.

ಈಗಾಗಲೇ ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಮತ್ತು ರಾಷ್ಟ್ರೀಯ ವಿದ್ಯಾಲಯ ರಸ್ತೆ (RV Road) ನಿಲ್ದಾಣಗಳು ಇಂಟರ್‌ಚೇಂಜ್ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇದೀಗ ಜಯದೇವ ಆಸ್ಪತ್ರೆ ನಿಲ್ದಾಣ ಈ ಪಟ್ಟಿಗೆ ಸೇರ್ಪಡೆಯಾಗಲಿದೆ.

Namma Metro Bengaluru Metro Pink Line Jayadeva Hospital to Become City s Third Interchange Station

ಆರು ನಿಲ್ದಾಣಗಳ ಪರಿಶೀಲನೆ; ಬಹುತೇಕ ಸೌಲಭ್ಯಗಳು ಸಿದ್ಧ

ಪಿಂಕ್ ಲೈನ್‌ನ ಎತ್ತರಿಸಿದ ಮಾರ್ಗದಲ್ಲಿರುವ ಆರು ನಿಲ್ದಾಣಗಳ ಸಿದ್ಧತೆಯನ್ನು ಪರಿಶೀಲಿಸಿದಾಗ, ಪ್ರಯಾಣಿಕರಿಗೆ ಅಗತ್ಯವಿರುವ ಬಹುತೇಕ ಮೂಲಸೌಕರ್ಯಗಳು ಪೂರ್ಣಗೊಂಡಿರುವುದು ಕಂಡುಬಂದಿದೆ. ಟಿಕೆಟ್ ಕೌಂಟರ್‌ಗಳು, ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಶೌಚಾಲಯಗಳು ಹಾಗೂ ಸ್ಥಳೀಯ ಪ್ರದೇಶಗಳ ನಕ್ಷೆಗಳು ಸಿದ್ಧವಾಗಿವೆ. ಆದರೆ ಜಯದೇವ ಆಸ್ಪತ್ರೆ ನಿಲ್ದಾಣ ಹೊರತುಪಡಿಸಿ ಉಳಿದ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಮೆಟ್ರೋ ಯೋಜನೆಗಳ ವೆಚ್ಚದಲ್ಲಿ ಕೇಂದ್ರ-ರಾಜ್ಯಗಳ ನಡುವೆ ಆರ್ಥಿಕ ಹೊಣೆಗಾರಿಕೆ ಇಲ್ಲವೇ?: ಡಿಕೆಶಿ ಹೇಳಿದ್ದೇನು?
ಮೆಟ್ರೋ ಯೋಜನೆಗಳ ವೆಚ್ಚದಲ್ಲಿ ಕೇಂದ್ರ-ರಾಜ್ಯಗಳ ನಡುವೆ ಆರ್ಥಿಕ ಹೊಣೆಗಾರಿಕೆ ಇಲ್ಲವೇ?: ಡಿಕೆಶಿ ಹೇಳಿದ್ದೇನು?

ಜಯದೇವ ಆಸ್ಪತ್ರೆ ನಿಲ್ದಾಣದ ವಿಶೇಷತೆ ಏನು?

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ವಿವಿಧ ಮಾರ್ಗಗಳ ಸಂಪರ್ಕಕ್ಕೆ ವಿಶಾಲವಾದ ಸಮತಲ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಲಂಬ ವಿನ್ಯಾಸದ ಮೂಲಕ ವಿವಿಧ ಹಂತಗಳಲ್ಲಿ ಮೆಟ್ರೋ ಮಾರ್ಗಗಳನ್ನು ಜೋಡಿಸಲಾಗಿದೆ. ಬಿಳೆಕಹಳ್ಳಿ-ಡೈರಿ ಸರ್ಕಲ್ ಅಂಡರ್‌ಪಾಸ್, ಹೊರ ವರ್ತುಲ ರಸ್ತೆ (ORR) ಹಾಗೂ ರಾಗಿಗುಡ್ಡ-ಸೆಂಟ್ರಲ್ ಸಿಲ್ಕ್ ಬೋರ್ಡ್ ಫ್ಲೈಓವರ್‌ಗಳ ಮೇಲಿರುವ ಬಹುಮಟ್ಟದ ರಸ್ತೆ ಜಾಲಕ್ಕೆ ಅನುಗುಣವಾಗಿ ನಿಲ್ದಾಣವನ್ನು ಹಲವು ಹಂತಗಳಲ್ಲಿ ನಿರ್ಮಿಸಲಾಗಿದೆ.

Pink Line ಲೋಕಾರ್ಪಣೆಯೊಂದಿಗೆ 100 ಕಿಮೀ ಗಡಿ ದಾಟಿದ ನಮ್ಮ ಮೆಟ್ರೋ ಜಾಲ! ಮುಂಬೈ, ದೆಹಲಿ ನಗರಗಳು ಎಷ್ಟು ಮುಂದಿವೆ?
Pink Line ಲೋಕಾರ್ಪಣೆಯೊಂದಿಗೆ 100 ಕಿಮೀ ಗಡಿ ದಾಟಿದ ನಮ್ಮ ಮೆಟ್ರೋ ಜಾಲ! ಮುಂಬೈ, ದೆಹಲಿ ನಗರಗಳು ಎಷ್ಟು ಮುಂದಿವೆ?

* ಯೆಲ್ಲೋ ಲೈನ್: ಒಂದು ಹಂತದಲ್ಲಿ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗಿದೆ. ಪ್ಲಾಟ್‌ಫಾರ್ಮ್ 1 ಆರ್‌ವಿ ರಸ್ತೆಯ ಕಡೆಗೆ ಹಾಗೂ ಪ್ಲಾಟ್‌ಫಾರ್ಮ್ 2 ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದ ಕಡೆಗೆ ಸಂಪರ್ಕ ಕಲ್ಪಿಸುತ್ತದೆ.

* ಕಾನ್ಕೋರ್ಸ್ ಹಂತ: ಟಿಕೆಟ್ ಕೌಂಟರ್‌ಗಳು, ಸ್ವಯಂಚಾಲಿತ ಟಿಕೆಟ್ ಸಂಗ್ರಹ ವ್ಯವಸ್ಥೆ (AFC) ಗೇಟ್‌ಗಳು ಹಾಗೂ ಪ್ರಯಾಣಿಕರು ಮಾರ್ಗ ಬದಲಾಯಿಸಲು ಅನುಕೂಲವಾಗುವ ಸಾಮಾನ್ಯ ಪಾವತಿ ವಲಯವಿದೆ.

* ಪಿಂಕ್ ಲೈನ್: ಮೇಲಿನ ಹಂತದಲ್ಲಿ ಪ್ಲಾಟ್‌ಫಾರ್ಮ್ 3 ತಾವರೆಕೆರೆ ಕಡೆಗೆ ಹಾಗೂ ಪ್ಲಾಟ್‌ಫಾರ್ಮ್ 4 ಕಾಳೇನ ಅಗ್ರಹಾರ ಕಡೆಗೆ ಸಂಪರ್ಕ ಕಲ್ಪಿಸುತ್ತದೆ.

ಪ್ರಯಾಣಿಕರು ಯೆಲ್ಲೋ ಲೈನ್‌ನಿಂದ ಪಿಂಕ್ ಲೈನ್‌ಗೆ ಬದಲಾಯಿಸುವಾಗ ನಿಲ್ದಾಣದ ಹೊರಗೆ ಬರಬೇಕಾಗಿಲ್ಲ. ಒಳಾಂಗಣ ಮೆಟ್ಟಿಲುಗಳು, ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳ ಮೂಲಕ ನೇರವಾಗಿ ಮತ್ತೊಂದು ಮಾರ್ಗಕ್ಕೆ ತೆರಳಬಹುದು. ಇದಕ್ಕಾಗಿ ಮತ್ತೆ ಟಿಕೆಟ್ ಖರೀದಿಸುವ ಅಗತ್ಯವೂ ಇರುವುದಿಲ್ಲ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಸೂಚನಾ ಫಲಕಗಳು ಹಾಗೂ ಡಿಜಿಟಲ್ ಡಿಸ್‌ಪ್ಲೇಗಳು ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಆರು ಮೆಟ್ರೋ ನಿಲ್ದಾಣಗಳಲ್ಲಿ ಯಾವೆಲ್ಲ ಸೌಲಭ್ಯಗಳಿವೆ?

1. ಕಾಳೇನ ಅಗ್ರಹಾರ: ಪಿಂಕ್ ಲೈನ್‌ನ ದಕ್ಷಿಣ ತುದಿಯ ಈ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್‌ಗಳು, ಸ್ಪರ್ಶ ಸಂವೇದಿ ನೆಲಹಾಸು, ಶೌಚಾಲಯಗಳು ಮತ್ತು ಸ್ಥಳೀಯ ಪ್ರದೇಶಗಳ ನಕ್ಷೆಗಳು ಸಿದ್ಧವಾಗಿವೆ. ಕೊತ್ತನೂರು ಮುಖ್ಯ ರಸ್ತೆ ಹಾಗೂ ದೊಡ್ಡಕಮ್ಮನಹಳ್ಳಿ ಮುಖ್ಯ ರಸ್ತೆಯ ಕಡೆಗೆ ಎರಡು ಪ್ರವೇಶ ಮತ್ತು ನಿರ್ಗಮನ ದ್ವಾರಗಳಿವೆ.

2. ಹುಳಿಮಾವು: ವಸತಿ ಪ್ರದೇಶಗಳು ಹಾಗೂ ಬನ್ನೇರುಘಟ್ಟ ರಸ್ತೆಯಲ್ಲಿರುವ ಕ್ರೈಸ್ಟ್ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಸಂಪರ್ಕ ಕಲ್ಪಿಸುವ ಈ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್‌ಗಳು, ಲಿಫ್ಟ್‌ಗಳು, ಶೌಚಾಲಯಗಳು ಮತ್ತು ನಿರ್ಗಮನ ದ್ವಾರಗಳು ಸಿದ್ಧವಾಗಿವೆ. ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಹಾಗೂ ಅರೆಕೆರೆ ಕೆರೆಯ ಕಡೆಗೆ ಸಂಪರ್ಕ ಕಲ್ಪಿಸಲಾಗಿದೆ.

3. ಐಐಎಂ-ಬಿ (ಬಿಳೆಕಹಳ್ಳಿ): ಭಾರತೀಯ ನಿರ್ವಹಣಾ ಸಂಸ್ಥೆ (IIM Bangalore), ಅಪೋಲೊ ಮತ್ತು ಫೋರ್ಟಿಸ್ ಆಸ್ಪತ್ರೆಗಳ ಸಮೀಪದಲ್ಲಿರುವ ಈ ನಿಲ್ದಾಣದಲ್ಲಿ AFC ಗೇಟ್‌ಗಳು, ಟಿಕೆಟ್ ಕೌಂಟರ್‌ಗಳು ಮತ್ತು ಲಿಫ್ಟ್‌ಗಳು ಕಾರ್ಯನಿರ್ವಹಿಸಲು ಸಿದ್ಧವಾಗಿವೆ. ಪಾಂಡುರಂಗ ನಗರ ಹಾಗೂ ಐಐಎಂ-ಬಿ ಕಡೆಗೆ ಪ್ರವೇಶ ದ್ವಾರಗಳಿವೆ.

4. ಜೆ.ಪಿ. ನಗರ 4ನೇ ಹಂತ: ಭವಿಷ್ಯದಲ್ಲಿ ಆರೆಂಜ್ ಲೈನ್‌ನ ಇಂಟರ್‌ಚೇಂಜ್ ನಿಲ್ದಾಣವಾಗಲಿರುವ ಇಲ್ಲಿ ಭದ್ರತಾ ತಪಾಸಣಾ ವ್ಯವಸ್ಥೆಗಳು, ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳನ್ನು ಅಳವಡಿಸಲಾಗಿದೆ.

5. ಜಯದೇವ ಆಸ್ಪತ್ರೆ: ಪಿಂಕ್ ಮತ್ತು ಯೆಲ್ಲೋ ಲೈನ್‌ಗಳನ್ನು ಸಂಪರ್ಕಿಸುವ ಪ್ರಮುಖ ನಿಲ್ದಾಣ ಇದಾಗಿದೆ. ಜಯದೇವ ಆಸ್ಪತ್ರೆ ಹಾಗೂ ಬಿಟಿಎಂ ಲೇಔಟ್ ಮೊದಲನೇ ಹಂತದ ಕಡೆಗೆ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಕಲ್ಪಿಸಲಾಗಿದೆ.

6. ತಾವರೆಕೆರೆ: ನಾಗವಾರದವರೆಗಿನ ಭೂಗತ ಮಾರ್ಗದ ವಿಸ್ತರಣೆ ಪೂರ್ಣಗೊಳ್ಳುವವರೆಗೆ ಇದು ತಾತ್ಕಾಲಿಕ ಉತ್ತರದ ಟರ್ಮಿನಲ್ ಆಗಿ ಕಾರ್ಯನಿರ್ವಹಿಸಲಿದೆ. ಇಲ್ಲಿ ಕಾನ್ಕೋರ್ಸ್, ಶೌಚಾಲಯಗಳು, ಸ್ಥಳೀಯ ಪ್ರದೇಶಗಳ ನಕ್ಷೆಗಳು ಮತ್ತು ಪ್ರವೇಶ ದ್ವಾರಗಳ ಸಿದ್ಧತೆ ಪೂರ್ಣಗೊಂಡಿದೆ. ನಾಲ್ಕನೇ ಟಿ ಬ್ಲಾಕ್ ಜಯನಗರ ಹಾಗೂ ತಾವರೆಕೆರೆ ಕಡೆಗೆ ಸಂಪರ್ಕ ಕಲ್ಪಿಸಲಾಗಿದೆ.

ಇದರ ಮತ್ತೊಂದು ವಿಶೇಷವೆಂದರೆ, ತಾವರೆಕೆರೆ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗಳ ಆಗಮನದ ಕುರಿತು ನೈಜ ಸಮಯದ ಮಾಹಿತಿ ನೀಡುವ ಡಿಜಿಟಲ್ ಡಿಸ್‌ಪ್ಲೇ ಅಳವಡಿಸಲಾಗಿದೆ. ಯಾವ ಮಾರ್ಗದ ಬಸ್ ಬರುತ್ತಿದೆ, ಅದರ ಗಮ್ಯಸ್ಥಾನ ಹಾಗೂ ಆಗಮನದ ಅಂದಾಜು ಸಮಯವನ್ನು ಪ್ರಯಾಣಿಕರು ತಿಳಿದುಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+