Namma Metro: ಈವರೆಗೆ ಮೆಟ್ರೋ ದುರಂತದಲ್ಲಿ ಮೃತಪಟ್ಟವರ ವಿವರ, ಸೂಕ್ತ ಕ್ರಮ, ಪರಿಹಾರದ ಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಮೆಟ್ರೊ ಕಾಮಗಾರಿಗಳು ನಡೆಯುತ್ತಿವೆ. ಯೋಜನೆ ಆರಂಭವಾದಾಗಿನಿಂದ ಈವರೆಗೆ ಸಮಾರು 50 ಅಪಘಾತಗಳು ನಡೆದಿವೆ. ಇದರಲ್ಲಿ ಮೃತಪಟ್ಟವರೆಷ್ಟು?, ಕೈಗೊಂಡ ಕ್ರಮವೇನು?, ಪರಿಹಾರ ಮೊತ್ತವೆಷ್ಟು? ಎಂಬ ಸಮಗ್ರ ವರದಿ ನಿಮ್ಮ ಮುಂದೆ.
ಬೆಂಗಳೂರು, ಫೆಬ್ರವರಿ 21: ಬೆಂಗಳೂರಲ್ಲಿ ನಮ್ಮ ಮೆಟ್ರೋ ಪಿಲ್ಲರ್ ದುರಂತ ನಡೆದ ನಂತರ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಕಾಮಗಾರಿ, ಗುತ್ತಿಗೆದಾರನ ನಿರ್ಲಕ್ಷ್ಯ ಹಾಗೂ ಸಾವು ನೋವುಗಳ ಸಾಕಷ್ಟು ಮುನ್ನೆಲೆಗೆ ಬರುತ್ತಿವೆ.
ಬೆಂಗಳೂರಿನಾದ್ಯಂತ ಅಲ್ಲಲ್ಲಿ ನಮ್ಮ ಮೆಟ್ರೊ ಮಾರ್ಗದ ಕಾಮಗಾರಿಗಳು ಹಾಗೂ ಹಾಲಿ ಮಾರ್ಗಗಳ ವಿಸ್ತರಣೆಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಸುಮಾರು 2007ರಲ್ಲಿ ಆರಂಭವಾದ ಮೆಟ್ರೋ ಯೋಜನೆ ಆರಂಭವಾಗಲಿದೆ. ಅಲ್ಲಿಂದ ಈವರೆಗೆ ಸಮಾರು 50 ಮಂದಿ ವಿವಿಧ ಮೆಟ್ರೋ ಯೋಜನೆ/ಕಾಮಗಾರಿ ವೇಳೆ ಅಪಘಾತಕ್ಕೆ ಒಳಗಾಗಿದ್ದಾರೆ.
ಹೌದು, ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಇದೇ ವಿಷಯವನ್ನು ವಿಧಾನಪರಿಷತ್ ಸದಸ್ಯ ಜಡಿಎಸ್ ಮುಖಂಡ ಟಿ.ಎ.ಶರವಣ ಅವರು ಲಿಖಿತವಾಗಿ ಪ್ರಶ್ನಿಸಿದ್ದರು. ಅಧಿಕೃತ ಮಾಹಿತಿಗೆ ಮನವಿ ಮಾಡಿದ್ದರು. ಈ ಕುರಿತು ಅವರಿಗೆ ದೊರೆತ ಮಾಹಿತಿಯನ್ನು ಅವರು ಸಾರ್ವಜನಿಕರಿಗೆ ಬಹಿರಂಗಪಡಿಸಿದ್ದಾರೆ.

ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿ ದುರಂತಗಳಿಗೆ ಇದುವರೆಗೆ ಒಟ್ಟು ಸುಮಾರು 50 ಮಂದಿ ಒಳಗಾಗಿದ್ದಾರೆ. ಅದರಲ್ಲಿ ಒಟ್ಟು 38ಮಂದಿ ಮೃತಪಟ್ಟಿದ್ದಾರೆ. ಅಂದರೆ ಮೆಟ್ರೋ ಸುರಂಗ, ನೆಲದಡಿಯಿಂದ ಎತ್ತರದ ಪಿಲ್ಲರ್ ನಿರ್ಮಾಣ, ಟ್ರ್ಯಾಕ್ ಹಾಕುವಾಗ, ಮಣ್ಣುಕುಸಿದು ಹೀಗೆ ಹಲವು ಸಂದರ್ಭಗಳಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಈ ಪೈಕಿ ಕಾರ್ಮಿಕರ ಸಂಖ್ಯೆ ಹೆಚ್ಚು ಎನ್ನಲ್ಲಾಗಿದೆ.
ಅಧಿಕಾರಿಗಳ ವಿರುದ್ಧ ಏನು ಕ್ರಮ
ನಮ್ಮ ಮೆಟ್ರೋ ಕಾಮಗಾರಿಗೆ ಅವಘಡಗಳಲ್ಲಿ ಕಾರಣರಾದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ವಿಧಾನಪರಿಷತ್ ಸದಸ್ಯರು ಕೇಳಿದ್ದರು. ಇದಕ್ಕೆ ರಾಜ್ಯ ಸರ್ಕಾರ ಬಿಎಂಆರ್‌ಸಿಎಲ್‌ನ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇದುವರೆಗೆ ಗುತ್ತಿಗೆದಾರರಿಗೆ ಒಟ್ಟು 1,77,00,000 ರೂಪಾಯಿಷ್ಟು ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.

BMRCL 3.15 ಕೋಟಿ ರೂ. ಪರಿಹಾರ
ಮೆಟ್ರೋ ಕಾಮಗಾರಿ ಸ್ಥಳಗಳಲ್ಲಿ ಗಾಯಗೊಂಡ ಹಾಗೂ ಸಾವಿಗೀಡಾದ ವ್ಯಕ್ತಿಗಳ ಕುಟುಂಬಗಳಿಗೆ ಇದವರೆಗೂ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಒಟ್ಟು 3,15,74,389, ಗಷ್ಟು ಪರಿಹಾರ ನೀಡಿದೆ.
ಜೊತೆಗೆ ಕಾಮಗಾರಿ ಸ್ಥಳದಲ್ಲಿ ಅವಘಡಗಳು ಆಗದಂತೆ ತಡೆಯಲು ಸುರಕ್ಷತೆ ಹಾಗೂ ಮುನ್ನೆಚ್ಚರಿಎಕ ವಹಿಸಲು ಯೋಜನೆ ಒಪ್ಪಂದದಲ್ಲಿ ಸುರಕ್ಷತೆ, ಆರೋಗ್ಯ ಹಾಗೂ ಪರಿಸರ ಕೈಪಿಡಿ ಒಂದು ಭಾಗವಾಗಿರಲಿದೆ. ಪ್ರತಿ ಗುತ್ತಿಗೆದಾರರ ಈ ಕೈಪಿಡಿ ಆಧಾರದಲ್ಲೇ ಕೆಲಸ ಮಾಡಬೇಕು ಎಂದು ತಿಳಿಸಲಾಗಿದೆ.












Click it and Unblock the Notifications