Namma Metro: ವರ್ಷಾಂತಕ್ಕೆ 2 ಮಾರ್ಗ ಸಂಚಾರ ಮುಕ್ತ, ಆಗಸ್ಟ್‌ನಲ್ಲಿ ಪ್ರಾಯೋಗಿಕ ಸಂಚಾರ

ಬೆಂಗಳೂರು, ಜುಲೈ 17: ಪ್ರಸಕ್ತ 2023ರ ವರ್ಷಾಂತ್ಯದ ವೇಳೆಗೆ ಬೆಂಗಳೂರು ನಮ್ಮ ಮೆಟ್ರೊನ ಎರಡು ಮಾರ್ಗಗಳು ಸಾರ್ವಜನಿಕ ಸೇವೆಗೆ ಮುಕ್ತವಾಗಲಿವೆ. ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮುಂದಿನ ತಿಂಗಳ ಈ ಎರಡು ಲೈನ್‌ನಲ್ಲಿ ಪ್ರಾಯೋಗಿಕ ಮೆಟ್ರೋ ಸಂಚಾರ ನಡೆಸಲು ತೀರ್ಮಾನಿಸಿದೆ.

ಬೆಂಗಳೂರು ನಗರವಾಸಿಗಳಿಗೆ ಪ್ರತಿನಿತ್ಯವು ವೇಗದ ಹಾಗೂ ತಡೆರಹಿತ ಪ್ರಯಾಣ ಸೇವೆ ನೀಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಎರಡು ಮಾರ್ಗಗಳಾದ ಬೈಯಪ್ಪನಹಳ್ಳಿ-ಕೆಆರ್ ಪುರ (2.1 ಕಿಮೀ) ಮತ್ತು ಕೆಂಗೇರಿ-ಚಲ್ಲಘಟ್ಟ (2 ಕಿಮೀ) ವಿಭಾಗದಲ್ಲಿ ಮೆಟ್ರೋ ಪ್ರಾಯೋಗಿಕ ಆಗಸ್ಟ್ 22ರಿಂದ ನಡೆಯಲಿದೆ. ಈ ಕುರಿತು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ಮಾಹಿತಿ ನೀಡಿದ್ದಾರೆ.

Namma Metro 2 Line Services Start 2023 Year End, Trail Run In August, Says BMRCL

BMRCL ಈ ಎರಡು ಮಾರ್ಗಗಳನ್ನು ಈವರ್ಷಾಂತಕ್ಕೆ ಸೇವೆ ಆರಂಭಿಸಲಿವೆ. ಅಧಿಕಾರಿಗಳು ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದು, ಹಳಿ ತಪಾಸಣೆ ಕೈಗೊಳ್ಳಲಿದ್ದಾರೆ. ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ (ಪರ್ಪಲ್ ಲೈನ್) ನಿಗದಿತ ಗಡುವಿನೊಳಗೆ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲು ಚಿಂತನೆ ನಡೆದಿದೆ ಎಂದರು.

ಎರಡೂ ಮಾರ್ಗಗಳಲ್ಲಿನ ವೇಳಾಪಟ್ಟಿಯನ್ನು ಪರಿಶೀಲಿಸಲು, ಆಗಸ್ಟ್ನಲ್ಲಿ ಪರೀಕ್ಷಾರ್ಥ ಓಟ ನಡೆಸಲಾಗುವುದು. ಅಲ್ಲಿ ಅಧಿಕಾರಿಗಳ ತಂಡವು ಮೆಟ್ರೋದ ಪ್ರಾಯೋಗಿಕ ಚಾಲನೆಯ ಸಮಯದಲ್ಲಿ ಯಾವುದೇ ರಚನಾತ್ಮಕ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದ್ದಾರೆ ಎಂದು ಪರ್ವೇಜ್ ತಿಳಿಸಿದರು.

ಎರಡು ಹೊಸ ಮೆಟ್ರೋ ಮಾರ್ಗಗಳಲ್ಲಿ ಟ್ರಯಲ್ ರನ್

ಮುಂದಿನ ತಿಂಗಳು ಆಗಸ್ಟ್ 22 ರಿಂದ ಕೆಂಗೇರಿ-ಚಲ್ಲಂಘಟ್ಟ ಮತ್ತು ಬೈಯಪ್ಪನಹಳ್ಳಿ- ಕೆಆರ್ ಪುರ ಮೆಟ್ರೋ ವಿಭಾಗದಲ್ಲಿ ಆರು ಬೋಗಿಗಳ ಒಂದು ರೈಲು ಪ್ರಾಯೋಗಿಕ ಸಂಚಾರ ನಡೆಸಲಿದೆ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.

Namma Metro 2 Line Services Start 2023 Year End, Trail Run In August, Says BMRCL

ಈ ಮಧ್ಯೆ BMRCL ಪ್ರಾಧಿಕಾರವು ಅಧಿಕಾರಿಗಳ ಸಹಿತ ಗುತ್ತಿಗೆದಾರರ ದಾಖಲೆ, ಟ್ರಾಕ್ ತಪಾಸಣೆ ಮಾಡಬೇಕಿದೆ. ಈ ಸಂಬಂಧ ಮೆಟ್ರೋ ರೈಲು ಸುರಕ್ಷತೆ (CMRS) ಆಯುಕ್ತರು ಈ ಎರಡೂ ವಿಭಾಗಗಳನ್ನು ಲೈನ್ ಪರಿಶೀಲಿಸುವುದು ಅಗತ್ಯವಿದೆ ಎಂದು ತಿಳಿಸಿದರು.

ನೇರಳೆ ಮಾರ್ಗದ ರೈಲು ಸಂಚಾರ

ನಮ್ಮ ಮೆಟ್ರೋ ನೇರಳೆ ಮಾರ್ಗ (ಪರ್ಪಲ್ ಲೈನ್‌) ದಲ್ಲಿ 39.4 ಕಿಮೀ ಉದ್ದದ ಮೆಟ್ರೋ ವಿಸ್ತರಣೆಗೆ ಪ್ರಸ್ತುತ ಬಳಕೆಯಲ್ಲಿದೆ. ವೈಟ್‌ಫೀಲ್ಡ್ (ಕಾಡುಗೋಡಿ) ಕೆ.ಆರ್ ಪುರ ವಿಭಾಗಕ್ಕೆ ಮತ್ತು ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಸಂಪರ್ಕಿಸುತ್ತದೆ. ಆದರೆ ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ಮಧ್ಯೆದ ಮೆಟ್ರೊ ಸಂಚಾರ ಆರಂಭವಾಗದ ಕಾರಣ ಮಹದೇವಪುರ, ಐಟಿಪಿಬಿ, ಕಾಡುಗೋಡಿ ಮುಂತಾದ ಸ್ಥಳಗಳಿಗೆ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ.

ಬಿಟ್ಟು ಹೋಗಿದ್ದ ಈ ಸಂಪರ್ಕ ಕೊಂಡಿಯನ್ನು ನಿರ್ಮಿಸಿದ ನಂತರ ಈ ಭಾಗದಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ. ಅಲ್ಲಿಯವರೆಗೆ ಬೈಯಪ್ಪನಹಳ್ಳಿಯಿಂದ ಕೆಆರ್‌ ಪುರಂವರೆಗೆ ಫಿಡರ್ ಬಸ್ ಮೂಲಕ ತೆರಳಿ ವೈಟ್ಫೀಲ್ಡ್ ಗೆ ಹೋಗಬೇಕಿದೆ. ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ಮಾರ್ಗ ಸಂಚಾರಕ್ಕೆ ಮುಕ್ತವಾದರೆ ನೆರೆಹೊರೆಯ ಪ್ರದೇಶಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಐಟಿ ಕಾರಿಡಾರ್‌ಗೆ ಸಂಪರ್ಕ ಸಾಧಿಸಿದ ಮೊದಲ ಲೈನ್ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+