ಭೋಜನ ಪ್ರಿಯರಿಗೆ ಬಾಯಿ ಚಪ್ಪರಿಸುವ ಸುದ್ದಿ: ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಊಟದ ಸ್ಪರ್ಧೆ
Recommended Video

ಬೆಂಗಳೂರು, ಆಗಸ್ಟ್ 1: ಉತ್ತರ ಕರ್ನಾಟಕದ ಜೋಳದ ರೊಟ್ಟಿ, ದಕ್ಷಿಣ ಕರ್ನಾಟಕದ ಮುದ್ದೆ... ಯಾವುದು ಬೇಕು? ಎಷ್ಟು ಬೇಕು? ನಿಮ್ಮಿಂದ ಎಷ್ಟು ತಿನ್ನಲು ಸಾಧ್ಯವೋ ತಿಂದು ತೋರಿಸಿ. ಗೆದ್ದರೆ ಸಿಗುವ ಬಹುಮಾನ ಕೂಡ ಸಣ್ಣದ್ದೇನಲ್ಲ.
ಭೋಜನ ಪ್ರಿಯರಿಗೆ ಹೀಗೊಂದು ಅಪೂರ್ವ ಸ್ಪರ್ಧೆಯ ಆಹ್ವಾನವನ್ನು 'ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್' ನೀಡಿದೆ.
ಅಪ್ಪಾಜಿ ಕ್ಯಾಂಟೀನ್‌ಗೆ ಒಂದು ವರ್ಷ ತುಂಬಿದ ಸಂಭ್ರಮಾಚರಣೆಗಾಗಿ ಆಗಸ್ಟ್ 4ರ ಶನಿವಾರ ಈ ಊಟದ ಸ್ಪರ್ಧೆ ಆಯೋಜಿಸಲಾಗಿದೆ.

ಬೆಂಗಳೂರಿನ ಹನುಮಂತನಗರದ 50 ಅಡಿ ರಸ್ತೆಯಲ್ಲಿರುವ 'ನಮ್ಮ ಅಪ್ಪಾಜಿ ಕ್ಯಾಂಟೀನ್'ನಲ್ಲಿ ಸ್ಪರ್ಧೆ ನಡೆಯಲಿದ್ದು, ರಾಗಿಮುದ್ದೆ, ಬಸ್ಸಾರು, ಜೋಳದ ರೊಟ್ಟಿ ಮತ್ತು ಎಣ್ಣೆಗಾಯಿ ಜೋಡಿಯ ಭರ್ಜರಿ ಊಟದ ಪೈಪೋಟಿ ನಡೆಯಲಿದೆ.
ಗೆದ್ದವರಿಗೆ ಇಲ್ಲಿ ಭರ್ಜರಿ ಬಹುಮಾನವನ್ನೂ ನೀಡುವುದಾಗಿ ಘೋಷಿಸಲಾಗಿದೆ.
ಆಯೋಜಕರು ನೀಡುವ ಸಮಯದ ಮಿತಿಯೊಳಗೆ ಎಷ್ಟು ಮುದ್ದೆ ಅಥವಾ ರೊಟ್ಟಿ ತಿನ್ನುತ್ತಾರೆ ಎನ್ನುವುದರ ಮೇಲೆ ವಿಜೇತರ ನಿರ್ಧಾರವಾಗುತ್ತದೆ.
ಹೀಗೆ ಗೆದ್ದವರಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ಅಪ್ಪಾಜಿ ಕ್ಯಾಂಟೀನ್‌ನಲ್ಲಿ 30 ದಿನಗಳ ಕಾಲ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ ಉಚಿತವಾಗಿ ಸಿಗಲಿದೆ.
ಎರಡನೆಯ ಬಹುಮಾನ ಪಡೆದವರಿಗೆ 20 ಹಾಗೂ ಮೂರನೇ ಬಹುಮಾನ ಪಡೆದವರಿಗೆ 10 ದಿನ ಉಪಾಹಾರ ಮತ್ತು ಮಧ್ಯಾಹ್ನದ ಭೋಜನ ಉಚಿತವಾಗಿ ಸಿಗಲಿದೆ.
ಹಾಗೆಂದು ಎಲ್ಲರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಮೊದಲು ನೋಂದಾಯಿಸಿದ 10 ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.












Click it and Unblock the Notifications