ರೋಷನ್ ಬೇಗ್ ಅಮಾನತು, ತಕ್ಕ ಶಾಸ್ತಿ ಎಂದ ಹ್ಯಾರಿಸ್

ಬೆಂಗಳೂರು, ಜೂನ್ 19: ಕಾಂಗ್ರೆಸ್ ಪಕ್ಷದಿಂದ ರೋಷನ್ ಬೇಗ್ ಅವರನ್ನು ಅಮಾನತು ಮಾಡಿದ ಅಖಿಲ್ ಭಾರತ ಕಾಂಗ್ರೆಸ್ ಪಕ್ಷ(ಎಐಸಿಸಿ) ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಬೆಂಗಳೂರಿನ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಹೇಳಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಗುರುತಿಸಿಕೊಂಡ ಕಾರಣಕ್ಕೆ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಮಂಗಳವಾರ ಅಮಾನತು ಮಾಡಲಾಗಿತ್ತು.

ಸತತ ಎಚ್ಚರಿಕೆಗಳನ್ನು ನೀಡಿದ್ದರೂ ಮತ್ತು ಶೋಕಾಸ್ ನೋಟಿಸ್ ಕೊಟ್ಟಿದ್ದರೂ ಅವುಗಳನ್ನು ನಿರ್ಲಕ್ಷಿಸಿ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡುವುದನ್ನು ಬೇಗ್ ಮುಂದುವರಿಸಿದ್ದರು. ಈ ಕಾರಣ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕೆಪಿಸಿಸಿಗೆ ಎಐಸಿಸಿ ಅನುಮತಿ ನೀಡಿದೆ.

NA Haris welcomes Congress decision of suspending Roshan Baig

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಹ್ಯಾರಿಸ್, "ಕಾಂಗ್ರೆಸ್ ಪಕ್ಷದ ನಡೆಯನ್ನು ನಾನು ಸ್ವಾಗತಿಸುತ್ತೇನೆ. ಒಬ್ಬ ಹಿರಿಯ ನಾಯಕರಾಗಿ ಅವರು ಪಕ್ಷದ ನಿಯಮ, ಶಿಸ್ತನ್ನು ಉಲ್ಲಂಘಸಿದ್ದಷ್ಟೇ ಅಲ್ಲ, ಪಕ್ಶಃದ ವಿರುದ್ಧ ಕೆಲಸ ಮಾಡಿದ್ದಾರೆ. ಆತನ ನಡೆ ಅಕ್ಷಮ್ಯ. ಕಾಂಗ್ರೆಸ್ ಎಂದಿಗೂ ಜನರಿಗಾಗಿ ಕೆಲಸಮಾಡಲು ಬಯಸುತ್ತದೆ" ಎಂದು ಹ್ಯಾರಿಸ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+