• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಿನೇಶ್ ಗುಂಡೂರಾವ್ ಮಗಳಿಗೆ ಕೊರೊನಾ! ಸ್ಪಷ್ಟನೆ ನೀಡಿದ ಮಾಜಿ ಸಚಿವ

|

ಬೆಂಗಳೂರು, ಮಾರ್ಚ್ 26: ದಾವಣೆಗೆರೆ ಸಂಸದರ ಪುತ್ರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುದ್ದಿ ಸದ್ದು ಮಾಡಿತ್ತು. ಇದೀಗ, ಬೆಂಗಳೂರಿನ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಗಳಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವಿಚಾರ ಕೇಳಿ ಬಂದಿದೆ.

   Dinesh gundu rao clarifies about his daughter has not affected from corona | Oneindia Kannada

   ಲಂಡನ್‌ನಿಂದ ಇತ್ತೀಚಿಗಷ್ಟೆ ಬೆಂಗಳೂರಿಗೆ ಬಂದಿದ್ದ ದಿನೇಶ್ ಗುಂಡೂರಾವ್ ಅವರ ಮಗಳಿಗೆ ಸೋಂಕು ಪತ್ತೆಯಾಗಿದೆ. ಹೋಮ್‌ ಕ್ವಾರೆಂಟೈನ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ.

   'ನನ್ನ ಮಗಳಿಗೆ ಕೊರೊನಾ ಇಲ್ಲ': ಸಂಸದ ಸಿದ್ದೇಶ್ವರ ಸ್ಪಷ್ಟನೆ

   ಈ ವಿಚಾರವಾಗಿ ಖುದ್ದು ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದು, ''ನನ್ನ ಮಗಳಿಗೆ ಕೊರೊನಾ ಸೋಂಕು ಇರುವ ಸುದ್ದಿ ಸುಳ್ಳು'' ಎಂದಿದ್ದಾರೆ.

   ''ಸುದ್ದಿ ವಾಹಿನಿಗಳಲ್ಲಿ ಬಂದಿರುವಂತೆ, ಮಾರ್ಚ್ 16 ರಂದು ಲಂಡನ್‌ನಿಂದ ಬೆಂಗಳೂರಿಗೆ ಬಂದಿದ್ದ ನನ್ನ ಮಗಳಿಗೆ ಕೊರೊನಾ ಸೋಂಕು ಇದೆ ಎನ್ನುವುದು ಸುಳ್ಳು. ಒಂದು ವೇಳೆ ಇದು ಸತ್ಯವಾಗಿದ್ದರೂ ಅದನ್ನು ಒಪ್ಪಿಕೊಳ್ಳುವಲ್ಲಿ ಅವಮಾನವಿಲ್ಲ'' ಎಂದಿದ್ದಾರೆ.

   ಸದ್ಯದ ಭಾರತದಲ್ಲಿ 700ಕ್ಕೂ ಅಧಿಕ ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಇದರಲ್ಲಿ ಬಹುತೇಕರು ವಿದೇಶದಿಂದ ಬಂದವರೇ ಆಗಿದ್ದಾರೆ. ಹಾಗಾಗಿ, ಫೆಬ್ರವರಿ ಬಳಿಕ ಭಾರತಕ್ಕೆ ಬಂದಿರುವವರ ಮೇಲೆ ಹೆಚ್ಚಿನ ಅನುಮಾನವಿದೆ. ಇನ್ನು ವಿದೇಶದಿಂದ ಬಂದವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಮ್‌ ಕ್ವಾರೆಂಟೈನ್‌ನಲ್ಲಿರಬೇಕು ಎಂದು ಸರ್ಕಾರ ಆದೇಶಿಸಿದೆ.

   English summary
   Karnataka Congress committee ex president dinesh gundu rao clarifies about her daughter. she is not affected from corona he said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X