ನಿಸಾರ್ ಅಹಮದ್ ಅವರ ಗೀತ ಗಾಯನೋತ್ಸವ ಇಂದು
ಬೆಂಗಳೂರು, ಮಾ. 6: ಖ್ಯಾತ ಕೊಳಲು ವಾದಕ ಪಂಡಿತ್ ಪ್ರವೀಣ್ ಗೋಡ್ಖಿಂಡಿ ನೇತೃತ್ವದ ಸಂಜೋಗ್ ಬಾನ್ಸುರಿ ವಿದ್ಯಾಲಯದ ಆಶ್ರಯದಲ್ಲಿ ಮಾರ್ಚ್ 7 ರಂದು ಸಂಜೆ ನಗರದ ಅಕ್ಷರ ಶಾಲೆಯ ಶ್ರೀ ವಿದ್ಯಾ ಸಭಾಭವನದಲ್ಲಿ 'ನಿಸಾರರ ಗೀತ ಗಾಯನೋತ್ಸವ' ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ.
ಕವಿ ಕೆ. ಎಸ್ .ನಿಸಾರ್ ಅಹಮದ್ ಅವರ ಗೀತೆಗಳನ್ನು ಗಾಯಕಿಯರಾದ ಸುಪ್ರಿಯಾ ರಘುನಂದನ್, ಮಂಗಳಾ ರವಿ ಮತ್ತು ವಿನಯ್ ನಾಡಿಗ್ ಪ್ರಸ್ತುತಪಡಿಸಲಿದ್ದಾರೆ. ಕವಿ ನಿಸಾರ್ ಅಹಮದ್ ಮತ್ತು ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕ್ಕೀ ಕೇಜ್ ಅವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ನಿಸಾರರ ಗೀತ ಗಾಯನೋತ್ಸವ
ಸ್ಥಳ: ಅವರ್ ಸ್ಕೂಲ್, ಬನಶಂಕರಿ ಪೊಲೀಸ್ ಠಾಣೆ ಹಿಂಭಾಗ
ಸಮಯ: ಸಂಜೆ 6 ಗಂಟೆ, ಶನಿವಾರ, ಮಾರ್ಚ್ 7
ಉಚಿತ ಪ್ರವೇಶ












Click it and Unblock the Notifications