Get Updates
Get notified of breaking news, exclusive insights, and must-see stories!

MSIL Recruitment 2023: ಖಾಲಿ 101 ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೊನೆ ದಿನಾಂಕ, ಇತರೆ ಮಾಹಿತಿ ತಿಳಿಯಿರಿ

ಬೆಂಗಳೂರು, ಜೂನ್ 26: ಬೆಂಗಳೂರಿನ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್ (MSIL) ಸಂಸ್ಥೆ ತನ್ನಲ್ಲಿ ಖಾಲಿ ಇರುವ ವಿವಿಧ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ 101 ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಧಿಸೂಚನೆ ತಿಳಿಸಿದೆ.

ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (MSIL) ಸಂಸ್ಥೆಯು ತನ್ನಲ್ಲಿರುವ ಸಹಾಯಕ ವ್ಯವಸ್ಥಾಪಕರು, ಮೇಲ್ವಿಚಾರಕರು ಮತ್ತು ಪದವೀಧರ ಗುಮಾಸ್ತರು, ಗುಮಾಸ್ತರು, ಲೆಕ್ಕ ಗುಮಾಸ್ತರು, ಸೇಲ್ಸ್ ಇಂಜಿನಿಯರ್, ಸೇಲ್ಸ್ ಮೇಲ್ವೀಚಾರಕರು, ಮಾರಾಟ ಪ್ರತಿನಿಧಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

MSIL Recruitment 2023: MSIL Invites To Application For 101 Post By Eligibles

ಆಸಕ್ತರು ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಗಳ ಪೂರ್ಣ ಮಾಹಿತಿ, ಖಾಲಿ ಹುದ್ದೆ ಎಷ್ಟು, ವೇತನ, ಅರ್ಹತೆ ಕುರಿತು ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ. ಅಧಿಸೂಚನೆ ಪೂರ್ತಿ ಓದಿ ಅರ್ಜಿ ಸಲ್ಲಿಸಿದರೆ ಒಳಿತು.

ಹುದ್ದೆಗಳ ಪೂರ್ಣ ವಿವರ

ನೇಮಕಾತಿ ಸಂಸ್ಥೆ - MSIL

ಖಾಲಿ ಹುದ್ದೆಗಳು- 101

ಮಾಸಿಕ ವೇತನ- 21000 ರೂ.ನಿಂದ 70000

ಹುದ್ದೆ ವಿಧ- ಪರ್ಮೆನೆಂಟ್ (ಶಾಶ್ವತ)

ಯಾವ ಹುದ್ದೆಗಳು ಖಾಲಿ- ಸಹಾಯಕ ವ್ಯವಸ್ಥಾಪಕರು- 23

ಸೇಲ್ಸ್ ಇಂಜಿನಿಯರ್ - 04

ಸೇಲ್ಸ್ ಮೇಲ್ವಿಚಾರಕರು- 19

ಮೇಲ್ವಿಚಾರಕರು - 23

ಮಾರಾಟ ಪ್ರತಿನಿಧಿ - 6

ಪದವೀಧರ ಗುಮಾಸ್ತರು - 6

ಲೆಕ್ಕಗುಮಾಸ್ತರು - 06

ಗುಮಾಸ್ತರು - 14

ಸೇಲ್ಸ್ ಇಂಜಿನಿಯರ್ - 04

ಸೇಲ್ಸ್ ಮೇಲ್ವಿಚಾರಕರು- 19

ಮಾರಾಟ ಪ್ರತಿನಿಧಿ - 6

ಅಭ್ಯರ್ಥಿಗಳ ಅರ್ಹತೆ

ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಎಂಬಿಎ, ಡಿಪ್ಲೊಮ ಇನ್ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್/ ಹುದ್ದೆಗೆ ಸಂಬಂಧಿತ ಡಿಗ್ರಿ ಜತೆಗೆ ಜತೆಗೆ ಎರಡು ವರ್ಷ ಕಾರ್ಯಾನುಭವ ಹೊಂದಿರಬೇಕು. ಮೇಲ್ವಿಚಾರಕರ ಹುದ್ದೆಗೆ ಯಾವುದೇ ಪದವಿ ಮುಗಿದಿರಬೇಕು, ಪದವೀಧರ ಗುಮಾಸ್ತರ ಸ್ಥಾನಕ್ಕೆ ಬಿ.ಕಾಂ /ಬಿಬಿಎ/ ಎಕನಾಮಿಕ್ಸ್‌ ಡಿಗ್ರಿ, ಗುಮಾಸ್ತ ಸ್ಥಾನಕ್ಕೆ ಪದವಿ.

MSIL Recruitment 2023: MSIL Invites To Application For 101 Post By Eligibles

ಲೆಕ್ಕಗುಮಾಸ್ತರ ಹುದ್ದೆಗೆ ಪದವಿ ಆಗಿರಬೇಕು.

ಇನ್ನೂ ಸೇಲ್ಸ್‌ ಇಂಜಿನಿಯರ್ ಹುದ್ದೆಗೆ ಡಿಪ್ಲೊಮಾ ಅಭ್ಯರ್ಥಿಗಳು, ಸೇಲ್ಸ್‌ ಮೇಲ್ವಿಚಾರಕರು ಪದವಿ ಜೊತೆಗೆ ಐದು ವರ್ಷದ ಅನುಭವ ಇರಬೇಕು. ಮಾರಾಟ ಪ್ರತಿನಿಧಿಗೆ ಅಜಿ ಸಲ್ಲಿಸುವವರು ಸಹ ಪದವಿ ಜೊತೆಗೆ 5 ವರ್ಷ ಸೇವೆ ಮಾಡಿರಬೇಕು ಎಂದು ಅಧಿಸೂಚನೆ ತಿಳಿಸಿದೆ.

ವಯೋಮಿತಿ ವಿವರ

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ,

ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, SC ST ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳ ಇರಬೇಕು. ಇಂತಹವರು ಜುಲೈ 22 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಇ-ಅಂಚೆ ಕಛೇರಿಗಳಲ್ಲಿ ಅರ್ಜಿ ಶುಲ್ಕ ಪಾವತಿಸಲು ಜುಲೈ 25ರ ತನಕ ಅವಕಾಶ ಇದೆ.

ಅರ್ಜಿ ಶುಲ್ಕ ವಿವರ

ಜೆನೆರಲ್ ಕೆಟಗರಿ ಅಭ್ಯರ್ಥಿಗಳಿಗೆ 1000 ರೂಪಾಯಿ, OBC ಅಭ್ಯರ್ಥಿಗಳಿಗೆ 750 ರೂಪಾಯಿ ಮತ್ತು SC ST ಪ್ರವರ್ಗ-1 ಅಭ್ಯರ್ಥಿಗಳಿಗೆ 250 ರೂಪಾಯಿ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.

ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಬಳಿಕ ಎರಡು ಪರೀಕ್ಷೆ ನಡೆಯಲಿವೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆಯುವ ಅಂಕಗಳ ಆಧಾರದಲ್ಲಿ ಆಯ್ಕೆ ಪಟ್ಟಿ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ. ಈ ಸ್ಪರ್ಧಾತ್ಮಕ ಪರೀಕ್ಷೆಗಳು ರಾಜ್ಯದ ಧಾರವಾಡ ಧಾರವಾಡ, ಬೆಳಗಾವಿ, ಕಲಬುರ್ಗಿ, ಮೈಸೂರು, ದಕ್ಷಿಣ ಕನ್ನಡ, ಬಿಜಾಪುರ, ಬೆಂಗಳೂರು, ದಾವಣಗೆರೆ, ತುಮಕೂರು ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ ನಡೆಯಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+