46 ವರ್ಷದ ಮಹಿಳೆಗೆ ಹೃದಯ ದಾನ ಮಾಡಿದ 27ರ ಯುವಕ

ಬೆಂಗಳೂರು, ಫೆಬ್ರವರಿ 28 : 27 ವರ್ಷದ ಯುವಕನ ಹೃದಯವನ್ನು 46 ವರ್ಷದ ಮಹಿಳೆಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಹಾರ್ಟ್‌ ಸೆಂಟರ್‌ನಲ್ಲಿ ಈ ಶಸ್ತ್ರ ಚಿಕಿತ್ಸೆ ನಡೆದಿದೆ.

ಕೃಷ್ಣಗಿರಿ ಜಿಲ್ಲೆಯ ಸಾತನೂರು ಮೂಲದ 27 ವರ್ಷದ ಯುವಕ ಫೆ.26ರಂದು ಅಘಾತದಲ್ಲಿ ಗಾಯಗೊಂಡಿದ್ದರು. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಫೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ, ಫೆ.27ರಂದು ಯುವಕರ ಮೆದುಳು ನಿಷ್ಕ್ರೀಯವಾಗಿದೆ ಎಂದು ವೈದ್ಯರು ಘೋಷಿಸಿದರು. ನಂತರ ಯುವಕನ ಕುಟುಂಬದವರ ಜೊತೆ ಮಾತನಾಡಿ ಅಂಗಾಗ ದಾನಕ್ಕೆ ಒಪ್ಪಿಸಲಾಯಿತು.

MS Ramaiah hospital records heart transplant

ಬುಧವಾರ ಅಪೋಲೋ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಬಿ.ಇ.ಎಲ್.ರಸ್ತೆಯಲ್ಲಿರುವ ಎಂ.ಎಸ್.ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್‌ ಸೆಂಟರ್‌ಗೆ ಗ್ರೀನ್ ಕಾರಿಡಾರ್ ಮೂಲಕ ತರಲಾಯಿತು. 22 ನಿಮಿಷಯದಲ್ಲಿ ಹೃದಯ ಆಸ್ಪತ್ರೆ ತಲುಪಿತು.

ಆಸ್ಪತ್ರೆಯಲ್ಲಿ ದಾಖಲಾಗಿದ್ದ ದಾವಣಗೆರೆ ಮೂಲದ 46 ವರ್ಷದ ಮಹಿಳೆಗೆ ಜೀವಂತ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನಂತರ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ.

MS Ramaiah hospital records heart transplant

ಹೃದಯ ಕಸಿಯನ್ನು ಎಮ್. ಎಸ್. ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್‌ ವೈದ್ಯರಾದ ಯು.ಎಮ್.ನಾಗಮಲ್ಲೇಷ್, ಹಿರಿಯ ಕಂಸಲ್ಟಂಟ್, ಹಾರ್ಟ್ ಫೇಲ್ಯೂರ್ ಹಾಗು ಹೃದಯ ಕಸಿ ವಿಭಾಗದ ಡಾ. ರವಿ ಶಂಕರ್ ಶೆಟ್ಟಿ, ಹಿರಿಯ ಕಾರ್ಡಿಯೋವ್ಯಾಸ್ಕುಲರ್ ಹಾಗು ಹೃದಯ ಕಸಿ ಶಸ್ತ್ರಚಿಕಿತ್ಸಕರಾದ ಡಾ. ಜೂಲಿಯೆಸ್ ಪುನ್ನೆನ್, ಡಾ. ಶಿಲ್ಪಾ ರುದ್ರದೇವರು ಮುಂತಾದವರ ತಂಡ ಯಶಸ್ವಿಯಾಗಿ ನೆರವೇರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+