ಭಾರತರತ್ನ ಸಿಎನ್ನಾರ್ ರಾವ್ ಸರಳತೆ ತಲೆಬಾಗಿದ ತೇಜಸ್ವಿ ಸೂರ್ಯ

ಬೆಂಗಳೂರು, ಮೇ 30: ಲೋಕಸಭೆ ಚುನಾವಣೆ 2019ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಅಭೂತಪೂರ್ವ ಜಯ ದಾಖಲಿಸಿದ ತೇಜಸ್ವಿ ಸೂರ್ಯ ಅವರು ನೂತನ ಸಂಸದರಾಗಿ ಮೋದಿ ಸರ್ಕಾರ 2.0 ಸ್ಥಾಪನೆಗೆ ಸಾಕ್ಷಿಯಾಗಲಿದ್ದಾರೆ.

ಮೇ 30ರಂದು ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಾರಿ 6 ಸಾವಿರಕ್ಕೂ ಹೆಚ್ಚು ಆಹ್ವಾನಿತ ಅತಿಥಿಗಳು ಭಾಗವಹಿಸಲಿದ್ದಾರೆ.

ಲೋಕಸಭೆ ಚುನಾವಣೆ 2019ರಲ್ಲಿ ಮೋದಿ ನೇತೃತ್ವ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿದ್ದಲ್ಲದೆ, ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ 300 ಗಡಿ ದಾಟಿದ ಭಾರತೀಯ ಜನತಾ ಪಕ್ಷವು 2 ಸ್ಥಾನದಿಂದ ಆರಂಭಿಸಿ 303 ಸ್ಥಾನಕ್ಕೇರಿದೆ.

MP Tejaswi Surya Tweets about Bharat Ratna Prof. CNR Rao

ಈ ಸಂಭ್ರಮದಲ್ಲಿರುವ ತೇಜಸ್ವಿ ಸೂರ್ಯ ಅವರಿಗೆ ಭಾರತರತ್ನ ಸಿಎನ್ ಅರ್ ರಾವ್ ಅವರು ಫೋನ್ ಕರೆ ಮಾಡಿ ಶುಭ ಹಾರೈಸಿದ್ದಾರೆ. ಈ ಬಗ್ಗೆ ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದಾರೆ.

'ನಾನು ಬೆಂಗಳೂರು ದಕ್ಷಿಣದ ನಿವಾಸಿ ಹಾಗೂ ನನ್ನ ಕ್ಷೇತ್ರವನ್ನು ನಿಮ್ಮಂಥ ಯುವ ನೇತಾರರು ಪ್ರತಿನಿಧಿಸುತ್ತಿರುವುದು ಸಂತಸ ತಂದಿದೆ. ನಾನು ನನ್ನ ಚಿಕ್ಕಂದಿನಲ್ಲಿ ಬಸವನಗುಡಿಯ ಬಸವೇಶ್ವರ ಆರೆಸ್ಸೆಸ್ ಶಾಖಾಗೆ ಹೋಗುತ್ತಿದ್ದೆ, ನೀವು ಒಮ್ಮೆ ಐಐಎಸ್ಸಿಗೆ ಬಂದು ನನ್ನನ್ನು ಭೇಟಿ ಮಾಡಿ' ಎಂದು ಸಿಎನ್ನಾರ್ ರಾವ್ ಅವರು ನನಗೆ ತಿಳಿಸಿದರು ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿ, ಸರಳತೆಯೇ ಶ್ರೇಷ್ಠ ವ್ಯಕ್ತಿಗಳ ಗುರುತು ಎಂದಿದ್ದಾರೆ.

ಸಂಸದ ಪ್ರತಾಪ್ ಸಿಂಹ ಅವರ ಜತೆಗೂಡಿ ಅಟಲ್ ಬಿಹಾರಿ ವಾಜಪೇಯಿ ಅವರ ಅಟಲ್ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಿದ ಚಿತ್ರವನ್ನು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+