RV Road-Bommasandra Metro Line: ಹಳದಿ ಮಾರ್ಗ ವಿಳಂಬದಿಂದ 10 ಲಕ್ಷ ಜನರಿಗೆ ಸಮಸ್ಯೆ: ತೇಜಸ್ವಿ ಸೂರ್ಯ
ಬೆಂಗಳೂರು, ಜುಲೈ 05: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದ ವಿಳಂಬವು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಭಾರಿ ಅಧಿಕಾರಿಗಳನ್ನು ಭೇಟಿಯಾಗಿ ಮಾರ್ಗ ತೆರೆಯಲು ಮನವಿ ಮಾಡಿದರೂ ವಿಳಂಬ ಧೋರಣೆ ಅನುಸರಿಸಿದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವಿರುದ್ಧ ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಾಂತಿನಗರದ ಮೆಟ್ರೊ ಮುಖ್ಯ ಕಚೇರಿಗೆ ತೆರಳಿ, ಹೊಸ ಮಾರ್ಗ ತೆರೆಯುವಂತೆ, ಸಂಚಾರ ದಟ್ಟಣೆ ನೀಗಿಸುವಂತೆ ಆಗ್ರಹಿಸಿದ್ದರು. ನಗರದ ಸಂಚಾರ ದಟ್ಟಣೆ ವಿವರಿಸಿದರು.
ಈ ಕುರಿತು ಶುಕ್ರವಾರ ಬಿಎಂಆರ್‌ಸಿಎಲ್‌ಗೆ ಸಂಸದ ತೇಜಸ್ವಿ ಸೂರ್ಯ ಅವರು ಪತ್ರ ಬರೆದಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಅವರು ಪ್ರತಿಭಟನೆ ಕರೆ ನೀಡಿದ್ದರು. ಅದರಂತೆ ಇಂದು ಪ್ರತಿಭಟನೆ ನಡೆಯಿತು. ಲಾಲಾ ಬಾಗ್ ಬಳಿಕ ಸಾಕಷ್ಟು ಜನ ಸೇರಿ ಸರ್ಕಾರ, ಬಿಎಂಆರ್‌ಸಿಎಲ್ ವಿರುದ್ಧ ಕಿರಿ ಕಾರಿದರು. ಮತ್ತೊಂದೆಡೆ ಆಗಸ್ಟ್‌ನಲ್ಲಿ ನಮ್ಮ ಮೆಟ್ರೋ ತೆರೆಯುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ.

ಕಾಮಗಾರಿ ಮುಗಿದು 04 ವರ್ಷವಾದರೂ ಸೇವೆ ಇಲ್ಲ
ಸಂಸದ ತೇಜಸ್ವಿ ಸೂರ್ಯ ಅವರು, ಅರ್‌ವಿ.ರಸ್ತೆ-ಬೊಮ್ಮಸಂದ್ರವರೆಗೆಇನ 19 ಕಿಲೋ ಮೀಟರ್ ಉದ್ದದ ನಮ್ಮ ಮೆಟ್ರೋ ಹಳದಿ ಮಾರ್ಗ 2014ರಲ್ಲಿ ಕಾಮಗಾರಿ ಆರಂಭವಾಗಿತ್ತು. 2021ರಲ್ಲಿ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಕಾರ್ಯಾಚರಣೆ ಆಗಬೇಕಿತ್ತು, ಆದರೆ ಆಗಲಿಲ್ಲ. 2022ರಲ್ಲಿ ಆಗಲಿಲ್ಲ. ಅದೇ ವರ್ಷಾಂತ್ಯಕ್ಕೆ ಮತ್ತೊಂದು ಗಡುವು ನೀಡಲಾಯಿತು. ಆದರೆ ಕಾರ್ಯಾಚರಣೆ ಆಗಲಿಲ್ಲ. ಹೀಗೆ ವರ್ಷಗಳಲ್ಲಿ ಎರಡು ಮೂರು ಗಡುವು ಮೀರುತ್ತಿದೆ. 2024ರಲ್ಲಿ ಲೋಕಸಭಾ ಚುನಾವಣೆ ಮುನ್ನ ಕಾರ್ಯಾಚರಣೆ ಆರಂಭ ಎಂದರು ಆಗಲಿಲ್ಲ. 2025ರಲ್ಲಿ ಮೂರು ನಾಲ್ಕು ಗಡುವು ಮೀರಿವೆ. ಹೀಗಿದ್ದರು. ಬಿಎಂಆರ್‌ಸಿಎಲ್ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದೆ.
8-10 ಲಕ್ಷ ಜನರಿಗೆ ತೊಂದರೆ, ಟ್ರಾಫಿಕ್..
ಈ ಮಾರ್ಗ ತೆರೆಯುವಿಕೆ ವಿಳಂಬವಾಗದಷ್ಟು ನಿತ್ಯ 8-10 ಲಕ್ಷ ಜನರು ನಿತ್ಯ ಸಂಚಾರ ದಟ್ಟಣೆಯಲ್ಲಿ ನಿಲ್ಲಬೇಕಾಗಿದೆ. ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಪರಿಸರ ಮೇಲೂ ದುಷ್ಪರಿಣಾಮ ಬೀರುತ್ತಿದೆ. ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ನಮ್ಮ ಮೆಟ್ರೋ ಹಳದಿ ಮಾರ್ಗ ತೆರೆಯುವುದು ಅಗತ್ಯವಾಗಿದೆ ಎಂದರು.

ಬೇಡಿಕೆಗಳು ಏನು?
ನಮ್ಮ ಮೆಟ್ರೋ ಹಳದಿ ಮಾರ್ಗ ನಿಗದಿತ ಕಾಲಮಿತಿ ಮಾರ್ಗ ಅಧಿಕೃತವಾಗಿ ಉದ್ಘಾಟನೆ ಆಗಬೇಕು. ಬಹುನಿರೀಕ್ಷಿತ ದರ ನಿಗದಿ ಸಮಿತಿ ವರದಿಯ ಬಿಡುಗಡೆ ಮಾಡಬೇಕು. ಡಬಲ್ ಡೆಕ್ಕರ್ ಫ್ಲೈಓವರ್‌ನ ಸ್ಥಿತಿ ಮತ್ತು ರಾಗಿಗುಡ್ಡ ಜಂಕ್ಷನ್ ವಿಭಾಗದ ಎಚ್‌ಎಸ್‌ಆರ್ ಲೇಔಟ್‌ನ ಪೂರ್ಣಗೊಳಿಸಬೇಕು ಎಂದು ತೇಜಸ್ವಿ ಸೂರ್ಯ ಅವರು ಪ್ರತಿಭಟನೆ ನಂತರ BMRCL ಗೆ ಮನವಿ ನೀಡಿ ಒತ್ತಾಯಿಸಿದರು.
ಮೆಟ್ರೋ ದರ ಏರಿಕೆ, ಜನ ಸಂಚಾರ ಇಳಿಕೆ
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮತ್ತು ಬಸ್ ಎರಡು ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದೆ. BMCRL ಇತ್ತೀಚೆಗೆ ಮೆಟ್ರೋದ ದರಗಳನ್ನು ಶೇಕಡಾ 100 ಹೆಚ್ಚಿಸಿದೆ. ಹಾಗೆ ಮಾಡುವ ಮೊದಲು, ಒಂದು ಸಮಿತಿಯು ಅಂತಾರಾಷ್ಟ್ರೀಯ ಪ್ರವಾಸವನ್ನು ನಡೆಸಿ ವರದಿಯನ್ನು ಮಂಡಿಸಿತು. ಈ ವರದಿಯನ್ನು ಆಧರಿಸಿ, ಮೆಟ್ರೋ ದರದಲ್ಲಿ 130% ಹೆಚ್ಚಳವನ್ನು ಜಾರಿಗೆ ತರಲಾಯಿತು. ಮೆಟ್ರೋ ದರ ಏರಿಕೆಯಾದಾಗಿನಿಂದ, ನಿತ್ಯದ ಪ್ರಯಾಣಿಕರ ಸಂಖ್ಯೆ 1 ಲಕ್ಷದಷ್ಟು ಇಳಿಕೆ ಆಗಿದೆ.
ಪತ್ರಕರ್ತರು ಈ ವಿಚಾರ ಕುರಿತು RTI ಗಳನ್ನು ಸಲ್ಲಿಸಿದ್ದಾರೆ. ಸಾರ್ವಜನಿಕ ಕಾರ್ಯಕರ್ತರು RTI ಗಳನ್ನು ಸಲ್ಲಿಸಿದ್ದಾರೆ. ಮೂರು ತಿಂಗಳುಗಳು ಕಳೆದಿವೆ. ಮೇಲಿಂದ ಮೇಲೆ ಡೆಡ್‌ಲೈನ್ ಮೀರುತ್ತಿವೆ. ಇಷ್ಟಾದರೂ ಹಳದಿ ಮಾರ್ಗ ತೆರೆಯದೇ ವಿಳಂಬ ಮಾಡಲಾಗುತ್ತಿದೆ. ಅಧಿಕಾರಿಗಳು ಏನನ್ನು ಮರೆ ಮಾಚಲು ಹೀಗೆ ಮಾಡುತ್ತಿದ್ದಾರೆ ಎಂದು ಸಂಸದರು ಪ್ರಶ್ನೆ ಮಾಡಿದರು.
ಆಗಸ್ಟ್ 15ರಂದು ಯೆಲ್ಲೋ ಲೈನ್ ತೆರೆಯಲು ಪ್ಲಾನ್?
ಇದರ ಬೆನ್ನಲ್ಲೆ BMRCL ಮೂಲಗಳ ಪ್ರಕಾರ, ನಮ್ಮ ಮೆಟ್ರೊ ಅರ್‌ವಿ.ರಸ್ತೆ-ಬೊಮ್ಮಸಂದ್ರವರೆಗೆಇನ 19 ಕಿಲೋ ಮೀಟರ್ ಉದ್ದದ ಮಾರ್ಗವು ಮುಂದಿನ ತಿಂಗಳ ಆಗಸ್ಟ್ 15ರಂದು ತೆರೆಯಲು ಪ್ಲಾನ್ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ. ಒಂದು ವೇಳೆ ನಿಗದಿಯಂತೆ ಈ ಮಾರ್ಗ ತೆರೆಯಬೇಕಾದರೆ ಇನ್ನಷ್ಟು ಹೆಚ್ಚಿನ ರೈಲುಗಳು ಬೇಕಾಗುತ್ತದೆ. ಆದರೆ ಸದ್ಯ ಮೆಟ್ರೋ ನಿಗಮದ ಕಡೆ ಇರುವುದು ಮೂರು ಹೊಸ ರೈಲುಗಳು ಮಾತ್ರ. ಹೀಗಾಗಿ ಮಾರ್ಗ ತೆರೆಯುತ್ತಾ? ಇಲ್ಲವಾ ಎಂಬುದು ಇನ್ನಷ್ಟೆ ತಿಳಿಯಬೇಕಿದೆ.












Click it and Unblock the Notifications