ಸಂಸದೆ ಶೋಭಾಗೆ ಜೀವ ಭಯ, ಆತ್ಮರಕ್ಷಣೆಗಾಗಿ ಗನ್ ಬೇಕಂತೆ!

ಬೆಂಗಳೂರು, ಡಿಸೆಂಬರ್ 17: ಚುನಾವಣೆಗೂ ಕರ್ನಾಟಕದಲ್ಲಿ ಗಲಭೆಗಳ ಕಾವು ಹೆಚ್ಚಾಗಿದ್ದು, ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಜೀವ ಬೆದರಿಕೆ ಇದೆಯಂತೆ.

ಆತ್ಮರಕ್ಷಣೆಗಾಗಿ ಪಿಸ್ತೂಲ್​ಗೆ ಅರ್ಜಿ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಸೇರಿ ರಾಜ್ಯದ ವಿವಿಧೆಡೆ ಹಿಂದು ಕಾರ್ಯಕರ್ತರ ಹತ್ಯೆ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆ ಎಂದು ಶೋಭಾ ಎಲ್ಲಾ ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿತ್ತಾ ಬಂದಿದ್ದಾರೆ.

Shobha Karandlaje applies for gun licence : Suneel Kumar

ಪಿಎಫ್​ಐ ಹಾಗೂ ಕೆಎಫ್​ಡಿ ಸಂಘಟನೆಗಳನ್ನು ನಿಷೇಧಿಸಬೇಕು ಹಾಗೂ ಎಲ್ಲ ಪ್ರಕರಣಗಳನ್ನೂ ಭಯೋತ್ಪಾದಕರ ಕೃತ್ಯ ಎಂದು ಪರಿಗಣಿಸಬೇಕು ಎಂದು ಶೋಭಾ ಕರಂದ್ಲಾಜೆ ಅವರು ಆಗ್ರಹಿಸುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವರಿಂದ ಬೆದರಿಕೆ ಇರುವುದಾಗಿ ಗುಪ್ತಚರ ಇಲಾಖೆ ವರದಿ ನೀಡಿತ್ತು ಎನ್ನಲಾಗಿದೆ.

ಗನ್ ಹೊಂದಲು ಲೈಸೆನ್ಸ್ ನೀಡಲು ಪೊಲೀಸ್ ಕಮಿಷನರ್ ಕಚೇರಿಗೆ ದಾಖಲೆ ಸಲ್ಲಿಸಿದ್ದಾರೆ. ಆತ್ಮರಕ್ಷಣೆಗಾಗಿ ಗನ್ ಹೊಂದಲು ಎಲ್ಲರೂ ಅರ್ಹರಾಗಿದ್ದಾರೆ. ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಗುಪ್ತಚರ ಇಲಾಖೆ ನೀಡಿದೆ ಎನ್ನಲಾದ ವರದಿಯನ್ನು ಪರಿಶೀಲಿಸಲಾಗುವುದು ಇನ್ನೆರಡು ವಾರದಲ್ಲಿ ಅನುಮತಿ ನೀಡುವ ಸಾಧ್ಯತೆಯಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+