ಡಿಕೆ ಬ್ರದರ್ಸ್ ಮೇಲೆ ಸಿಬಿಐ ಕಣ್ಣು: ತುರ್ತು ಸುದ್ದಿಗೋಷ್ಠಿಯಲ್ಲಿ ಸ್ಫೋಟಕ ಮಾಹಿತಿ
Recommended Video

ಬೆಂಗಳೂರಿನಲ್ಲಿ ಡಿ ಕೆ ಸುರೇಶ್ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಸ್ಪೋಟಕ ಮಾಹಿತಿ
ಬೆಂಗಳೂರು, ಮೇ 31: ಕೇಂದ್ರದ ಕೆಲವು ಬಿಜೆಪಿ ನಾಯಕರ ಷಡ್ಯಂತ್ರದಿಂದಾಗಿ 3- 4 ದಿನಗಳಲ್ಲಿ ನನ್ನ ಮೇಲೆ ಮತ್ತು ಡಿ ಕೆ ಶಿವಕುಮಾರ್ ಅವರ ಮೇಲೆ ED(ಜಾರಿ ನಿರ್ದೇಶಾಲಯ) ದಾಳಿ ನಡೆಸಲು ಸಿಬಿಐ ವಸರ್ಚ್ ವಾರೆಂಟ್ ನೀಡಿದೆ ಎಂಬ ಮಾಹಿತಿಗಳು ಬಲ್ಲ ಮೂಲಗಳಿಂದ ನಮಗೆ ಲಭ್ಯವಾಗಿದೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಅವರು ಕರೆದ ತುರ್ತುಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಒಟ್ಟು 11 ನಾಯಕರ ಮೇಲೆ ದಾಳಿ ನಡೆಸಲು ಕುತಂತ್ರ ನಡೆಯುತ್ತಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದ್ದು ಇಂಥ ಬೆದರಿಕೆಗಳಿಗೆಲ್ಲ ನಾವು ಬಗ್ಗೋದಿಲ್ಲ ಎಂದು ಅವರು ಹೇಳಿದ್ದಾರೆ.

ಡಿಕೆ ಶಿವಕುಮಾರ್ ಕಿಡಿ
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಿ ಕೆ ಶಿವಕುಮಾರ್, "ನಮಗೆ ಪ್ರಜಾಪ್ರಭುತ್ವದ ಎಲ್ಲಾ ಸಂಸ್ಥೆಗಳ ಬಗ್ಗೆ ಗೌರವವಿದೆ. ಆದರೆ ಅವುಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸರಿಯಲ್ಲ" ಎಂದರು.












Click it and Unblock the Notifications