ಬೆಂಗಳೂರು ರೋಡ್‌ಗಳನ್ನು ನೋಡಿ ವಾಹನ ಸವಾರರಿಗೆ ಖುಷಿ, ಯಾಕೆ
ಬೆಂಗಳೂರಲ್ಲಿ ಗುರುವಾರ ಸೂರ್ಯ ಕಣ್ಣು ಬಿಟ್ಟಿದ್ದಾನೆ. ಕಳೆದ ಮೂರು ದಿನಗಳಿಂದ ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ ಇತ್ತು. ಹೀಗಾಗಿ ಸೂರ್ಯನೇ ಕಾಣಿಸಿರಲಿಲ್ಲ. ಗುರುವಾರ ಮಳೆರಾಯ ತುಸು ಬಿಡುವು ಕೊಟ್ಟಿದ್ದಾರೆ. ಆದರೆ, ಸದಾ ಟ್ರಾಫಿಕ್‌ಜಾಮ್‌ನಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರಲ್ಲಿ ಗುರುವಾರ ರೋಡ್‌ಗಳು ಖಾಲಿ.. ಖಾಲಿ ಇದ್ದವು.
ಹೌದು ಗುರುವಾರ ಬೆಂಗಳೂರಲ್ಲಿ ಮಳೆ ಬಿಡುವು ಕೊಟ್ಟಿದ್ದರಿಂದ ಸಾಮಾನ್ಯವಾಗಿಯೇ ಟ್ರಾಫಿಕ್ ಜಾಮ್ ಜಾಸ್ತಿ ಇರಲಿದೆ ಎಂದು ಜನ ಅಂದಾಜಿಸಿದ್ದರು. ಆದರೆ, ಜನರ ಲೆಕ್ಕಾಚಾರ ತಲೆಕೆಳಗಾಗಿದೆ. ಬೆಂಗಳೂರಲ್ಲಿ ಗುರುವಾರ ವಿರಳ ಟ್ರಾಫಿಕ್ ಜಾಮ್ ಇತ್ತು. ರಸ್ತೆಗೆ ಇಳಿದ ಜನ ಇದನ್ನು ನೋಡಿ ಫೂಲ್ ಖುಷಿ ಆಗುವುದರ ಜೊತೆಗೆ ಶಾಕ್ ಸಹ ಆಗಿದ್ದಾರೆ. ಮಳೆ ನಿಂತ ಮೇಲೂ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಆಗದೆ ಇರುವುದಕ್ಕೆ ಕಾರಣ ಇದೆ. ಬೆಂಗಳೂರಲ್ಲಿ ಈ ವಾರ ಪೂರ್ತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಇದೇ ಕಾರಣಕ್ಕೆ ಬೆಂಗಳೂರಿನ ಹಲವು ಐಟಿ - ಬಿಟಿ ಕಂಪನಿಗಳು ಹಾಗೂ ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್‌ಫ್ರಮ್ ಹೋಮ್ ನೀಡಿವೆ. ಅಲ್ಲದೇ ಕಳೆದ ಒಂದುವಾರದಿಂದ ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರಿನ ಹೊರ ವಲಯ, ಸರ್ಜಾಪುರ, ಮಾನ್ಯತಾ ಟೆಕ್ ಪಾರ್ಕ್ ಹಾಗೂ ಮಹದೇವಪುರ ಸೇರಿದಂತೆ ವಿವಿಧ ಭಾಗದಲ್ಲಿ ಮಳೆ ನೀರು ಅಲ್ಲಲ್ಲಿ ನಿಂತಿದೆ. ಕೆಲವು ಕಡೆ ಕೃತಕ ಪ್ರವಾಹವೂ ಸೃಷ್ಟಿಯಾಗಿದೆ. ಈ ಭಾಗಗಳಲ್ಲಿ ಸಂಚರಿಸುವುದು ಸವಾಲಾಗಿದೆ. ಹೀಗಾಗಿ, ಹಲವು ಕಂಪನಿಗಳು ವರ್ಕ್‌ಫ್ರಮ್ ಹೋಮ್ ನೀಡಿದ್ದು ವಾಹನ ಸಂಚಾರ ವಿರಳವಾಗಿದ್ದು, ಟ್ರಾಫಿಕ್ ಜಾಮ್ ಇಲ್ಲ.
ಖಾಸಗಿ ಶಾಲೆಗಳಲ್ಲಿ ರಜೆ: ಇನ್ನು ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳು ಸಹ ರಜೆ ನೀಡಿವೆ. ಅಲ್ಲದೇ ದಸರಾ ರಜೆಯೂ ಮುಂದುವರಿದಿದೆ. ಮಳೆಯಿಂದಾಗಿ ಸಣ್ಣ ಮಕ್ಕಳನ್ನು (ಎಲ್‌ಕೆಜಿ, ಯುಕೆಜಿ ಹಾಗೂ ಬೆಬಿಕೇರ್) ಶಾಲೆಗಳಿಗೆ ಮುಂದಿನ ಒಂದು ವಾರದ ವರೆಗೆ ಕಳುಹಿಸಬೇಡಿ ಎಂದು ಹೇಳಿವೆ. ಹೀಗಾಗಿ, ಈ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಇದೇ ಕಾರಣಕ್ಕೆ ಬೆಂಗಳೂರಲ್ಲಿ ಶಾಲಾ ಬಸ್‌ಗಳ ಸಂಖ್ಯೆ ವಿರಳವಾಗಿದೆ. ಸಾಮಾನ್ಯವಾಗಿ ಬೆಂಗಳೂರಲ್ಲಿ ಬೆಳಿಗ್ಗೆ ಸಮಯದಲ್ಲಿ ಶಾಲಾ ಬಸ್‌ಗಳ ಸಂಖ್ಯೆ ಹೆಚ್ಚಾಗಿ ಇರುತ್ತಿತ್ತು. ಅಲ್ಲದೇ ಕೆಲವು ಖಾಸಗಿ ಶಾಲೆಯ ಬಸ್‌ಗಳನ್ನು ರಸ್ತೆ ಸೈಡ್ ನಿಲ್ಲಿಸುತ್ತಿದ್ದರಿಂದ, ಟ್ರಾಫಿಕ್ ಜಾಮ್ ಸೃಷ್ಟಿಯಾಗುತ್ತಿತ್ತು. ಹೀಗಾಗಿ, ಗುರುವಾರ ಈ ಯಾವ ದೃಶ್ಯಗಳೂ ಪ್ರಮುಖ ರಸ್ತೆಗಳಲ್ಲಿ ಅಷ್ಟಾಗಿ ಕಂಡುಬರಲಿಲ್ಲ.
ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ: ಬೆಂಗಳೂರಲ್ಲಿ ಮಳೆ ತುಸು ಬಿಡುವು ನೀಡಿರುವುದು ನಿಜ. ಆದರೆ, ಬೆಂಗಳೂರಿನ ಬಹುತೇಕ ಭಾಗದಲ್ಲಿ ಗುರುವಾರವೂ ದಟ್ಟ ಮೋಡ ಕವಿದ ವಾತಾವರಣ ಇದೆ. ಹೀಗಾಗಿ, ಯಾವಾಗ ಬೇಕಾದರೂ ನಗರದಲ್ಲಿ ಮಳೆಯಾಗಬಹುದು ಎನ್ನುವ ವಾತಾವರಣ ಇದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಗುರುವಾರವೂ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಒಟ್ಟಾರೆ ಗುರುವಾರ ಬೆಳಿಗ್ಗೆ ಫೀಕ್ ಅವರ್ (ದಟ್ಟಣೆಯ ಅವಧಿ)ನಲ್ಲೂ ಟ್ರಾಫಿಕ್ ಇಲ್ಲದೆ ರಸ್ತೆಗಳು ಖಾಲಿಯಾಗಿದ್ದು, ಅಚ್ಚರಿ ಮೂಡಿಸಿದೆ.
ಹಲವು ದಿನಗಳ ನಂತರ ಬೆಂಗಳೂರು ರಸ್ತೆಗಳಲ್ಲಿ ವಿರಳ ಸಂಚಾರ ಕಂಡುಬಂದಿದ್ದು, ಟ್ರಾಫಿಕ್ ಸಿಗ್ನಲ್‌ಗಳು ಸಹ ಬೇಗ ಬಿಡ್ತಿದ್ವು. ಕೆಲವೊಂದು ರಸ್ತೆಗಳಲ್ಲಿ ಎರೆಡೆರು ಸಿಗ್ನಲ್‌ಗಳಲ್ಲೂ ಗ್ರೀನ್ ಸಿಗ್ನಲ್‌ಗಳು ಸಿಕ್ಕಿದ್ದು ನೋಡಿ ವಾಹನ ಸವಾರರು ಒಳಗೊಳಗೆ ಖುಷಿಯಾಗಿದ್ದರು.












Click it and Unblock the Notifications