ರಾಜಧಾನಿಯಲ್ಲಿ ವಿದ್ಯುತ್ ಅವಘಡಕ್ಕೆ ಬಲಿಯಾದವರೆಷ್ಟು? ನಿರ್ಲಕ್ಷ್ಯವೇಕೆ?

ಬೆಂಗಳೂರು, ಮೇ 15: ಬೆಸ್ಕಾಂ ವ್ಯಾಪ್ತಿಯಲ್ಲಿ ಮೂರು ವರ್ಷದಲ್ಲಿ ವಿದ್ಯುತ್ ಅಪಘಾತದಿಂದ 60 ಮಂದಿ ಮೃತಪಟ್ಟಿದ್ದಾರೆ.

ಇಷ್ಟಾದರೂ ಕೂಡ ಬೆಸ್ಕಾಂ ಎಚ್ಚೆತ್ತುಕೊಂಡಿಲ್ಲ. ಎಲ್ಲೆಂದರಲ್ಲಿ ವಿದ್ಯುತ್ ತಂತಿ ಬಿದ್ದಿರುತ್ತದೆ, ಮಳೆ, ಗಾಳಿ ಬಂದರೆ ವಿದ್ಯುತ್ ಕಂಬವೇ ಮುರಿದು ಬೀಳುತ್ತದೆ. ಇನ್ನು ಅತಿ ಹೆಚ್ಚು ಜನರು ಓಡಾಡುವ ಉದ್ಯಾನಗಳಲ್ಲೂ ಕೂಡ ವಿದ್ಯುತ್ ತಂತಿಗಳ ಸಮರ್ಪಕ ನಿರ್ವಹಣೆ ಇಲ್ಲ, ರಾಜಧಾನಿ ಇನ್ನೂ ಎಷ್ಟು ಬಲಿಯನ್ನು ನೋಡಬೇಕಿದೆ.

ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಗೆ ಬರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಈ 8 ಜಿಲ್ಲೆಗಳಲ್ಲಿ ಪಾದಚಾರಿ ಮಾರ್ಗಗಳಲ್ಲೇ ಯಮಸ್ವರೂಪಿ ವಿದ್ಯುತ್ ಕಂಬಗಳಿವೆ.

More than 60 people died due electricity mishaps in Bengaluru
ರಾಜಧಾನಿ ಒಂದರಲ್ಲೇ 2015-16 ರಿಂದ 2017-18 ರ 3 ವರ್ಷದಲ್ಲಿ 60 ಜನ ತಮ್ಮ ಜೀವ ಕಳೆದುಕೊಂಡಿದ್ದಾರೆ.

ಹೀಗಾಗಿ ಇಂತಹ ಸ್ಥಳಗಳಲ್ಲಿ ಓಡಾಡುವಾಗ ಜನರು ಸಾಕಷ್ಟು ಜಾಗ್ರತೆ ವಹಿಸಬೇಕು.
ದೋಷಪೂರಿತ ವಿದ್ಯುತ್ ಕಂಬ, ವಿದ್ಯುತ್ ತಂತಿಗಳು ಅಥವಾ ಪವರ್ ಟ್ರಾನ್ಸ್ ಫಾರ್ಮರ್ ಒಂದೊಮ್ಮೆ ಕಂಡುಬಂದ್ರೆ ಬೆಸ್ಕಾಂನ 1912 ಹೆಲ್ಪ್ ಲೈನ್ ಗೆ ಕೂಡಲೇ ದೂರು ನೀಡಬೇಕು.

ಮನೆ ಮುಂದೆ ವಿದ್ಯುತ್ ಕಂಬದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಮನೆಗೆ ತೀರಾ ಹತ್ತಿರವಾಗಿದ್ರೆ ಅವುಗಳನ್ನು ಎಲೆಕ್ಟ್ರಿಕ್ ಕೊಳವೆಗಳಿಂದ ಕವರ್ ಮಾಡುವ ಬಗ್ಗೆ ಬೆಸ್ಕಾಂ ಗೆ ಮನವಿ ಮಾಡಬೇಕಾಗಿರುವು ಸಾರ್ವಜನಿಕರ ಕರ್ತವ್ಯ ಕೂಡ.

ಒಟ್ಟು 8 ಜಿಲ್ಲೆಗಳಲ್ಲಿ ಕಳೆದ 3 ವರ್ಷಗಳಿಂದ 757 ವಿದ್ಯುತ್ ಅಪಘಾತಗಳು ಸಂಭವಿಸಿವೆ. ಅದರಲ್ಲಿ 368 ಮಂದಿ ಮೃತಪಟ್ಟಿದ್ದಾರೆ.

ಮುಂಗಾರು ಆಗಮನವಾಗುತ್ತಿದೆ ಇಂತಹ ಎಷ್ಟೋ ಘಟನೆಗಳು ಮರುಕಳಿಸುವ ಸಾಧ್ಯತೆ ಇದೆ ಹಾಗಾಗಿ ಬೆಸ್ಕಾಂ ಅಧಿಕಾರಿಗಳು ಬೇಗ ಎಚ್ಚೆತ್ತುಕೊಂಡು ಇಡೀ ಬೆಂಗಳೂರಿನ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮನವಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+