ಎಣ್ಣೆ ಬಂದ್; ಒಂದೇ ವಾರದಲ್ಲಿ ಸರ್ಕಾರಕ್ಕೆ ಆದ ನಷ್ಟ ಎಷ್ಟು ಗೊತ್ತಾ?

ಬೆಂಗಳೂರು, ಮಾರ್ಚ್ 31: ಕೊರೊನಾ ಮಹಾಮಾರಿಯಿಂದ ದೇಶ ಸಂಪೂರ್ಣ ಲಾಕ್‌ಡೌನ್ ಆಗಿದೆ. ಮದ್ಯಮಾರಾಟಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿರುವುದರಿಂದ ಸರ್ಕಾರಕ್ಕೆ ಭಾರೀ ಪ್ರಮಾಣದ ಆದಾಯ ಖೋತಾ ಆಗಿದೆ.

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಎಲ್ಲ ರೀತಿಯ ಬಾರ್ ರೆಸ್ಟೊರೆಂಟ್, ವೈನ್‌ ಸ್ಟೋರ್‌, ಪಬ್ , ಬಾರ್, ಸರ್ಕಾರಿ ಮದ್ಯಮಾರಾಟ ಮಳಿಗೆಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಪ್ರತಿದಿನ ಅಬಕಾರಿ ಇಲಾಖೆಗೆ ಸುಮಾರು 15 ರಿಂದ 60 ಕೋಟಿ ರುಪಾಯಿ ನಷ್ಟವುಂಟಾಗುತ್ತಿದೆ. ಒಟ್ಟಾರೆ ಕಳೆದ 15 ದಿನಗಳಿಂದ ಕರ್ನಾಟಕದ ಅಬಕಾರಿ ಇಲಾಖೆ ಕೊರೊನಾ ಹೊಡೆತಕ್ಕೆ ತತ್ತರಿಸಿ ಹೋಗಿದ್ದು, 500 ಕೋಟಿ ರುಪಾಯಿ ಆದಾಯ ಕಳೆದುಕೊಂಡಿದೆ.

2019-20 ನೇ ಸಾಲಿನಲ್ಲಿ 21 ಸಾವಿರ ಕೋಟಿ ರುಪಾಯಿ ಆದಾಯ ನಿರೀಕ್ಷಿಸಲಾಗಿತ್ತು. ಆರ್ಥಿಕ ವರ್ಷ ಮುಗಿಲಯ ಬಂದಿರುವುದರಿಂದ ನಿರೀಕ್ಷೆಯಂತೆ 21 ಸಾವಿರ ಕೋಟಿ ರುಪಾಯಿ ಸಂಗ್ರಹ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

More Than 500 crore rupees loss For Karnataka Excise Department At LockDown Time

ಆದರೆ, ಲಾಕ್‌ಡೌನ್‌ ಸಂದರ್ಭದಲ್ಲಿ ಮದ್ಯದ ಅಂಗಡಿಗಳನ್ನು ಕೇರಳದ ರೀತಿ ಕರ್ನಾಟಕದಲ್ಲೂ ತೆರೆಯಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈ ಕುರಿತು ಮಾತನಾಡಿದ ಅಬಕಾರಿ ಸಚಿವ ನಾಗೇಶ್ ಅವರು, ಕೇರಳದ ರೀತಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡಬೇಕು ಎಂಬ ಬೇಡಿಕೆಗಳು ಬಂದಿವೆ. ಆದರೆ, ಪ್ರಸ್ತುತ ಈ ವಿಚಾರದಲ್ಲಿ ನಾನೂ ಏನೂ ಮಾತನಾಡುವುದಿಲ್ಲ ಎಂದಿದ್ದಾರೆ. ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡಬೇಕೋ ಬೇಡವೋ ಎಂಬುದರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಏನನ್ನೂ ಹೇಳುವುದಿಲ್ಲ ಆ ವಿಚಾರದಲ್ಲಿ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+