ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣ ಆರೋಪಿಗೆ ಜಾಮೀನು ನಿರಾಕರಣೆ

ಬೆಂಗಳೂರು, ಜನವರಿ 18: ವಿಧಾನಸೌಧದ ಪಶ್ಚಿಮ ಗೇಟ್‌ ಬಳಿ ವ್ಯಕ್ತಿಯೊಬ್ಬರ ಬಳಿ 25.76 ಲಕ್ಷ ಹಣ ಪತ್ತೆಯಾದ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನಿರಾಕರಿಸಲಾಗಿದೆ.

ಎರಡೂ ಕಡೆಯ ವಾದ ಆಲಿಸಿದ್ದ ಸೆಷನ್ಸ್‌ ನ್ಯಾಯಾಲಯವು ಆರೋಪಿ ಟೈಪಿಸ್ಟ್‌ ಮೋಹನ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತು. ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿತು.

ಸಚಿವರೊಬ್ಬರ ಕಚೇರಿಯಲ್ಲಿ ಟೈಪಿಸ್ಟ್‌ ಆಗಿರುವ ಮೋಹನ್ ಎಂಬುವರ ಬಳಿ ಜನವರಿ 16ರಂದು ವಿಧಾನಸೌಧದ ಪಶ್ಚಿಮ ಗೇಟ್‌ ಬಳಿ 25.76 ಲಕ್ಷ ಮೊತ್ತದ ಭಾರಿ ಹಣ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು.

Money siezed in Vidhan Soudha: accused bail application rejected

ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಆರೋಪಿ ಪರ ವಕೀಲ ಶ್ಯಾಮ್‌ಸುಂದರ್ ಅವರು, ಆ ಹಣ ಚಿನ್ನ ಗಿರವಿ ಇಟ್ಟು ತಂದ ಹಣವಾಗಿತ್ತು ಎಂದಿದ್ದರು. ಅಷ್ಟು ಹಣ ನೀಡಲು ಕೆಜಿಗಟ್ಟಲೆ ಚಿನ್ನ ಇಡಬೇಕೆಂದು ಪ್ರತಿವಾದಿ ಲಾಯರ್ ವಾದಿಸಿದ್ದರು.

ಇಂದಿಗೆ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಮಂಜುಳಾ ಅವರು, ಪ್ರಕರಣ ತನಿಖಾ ಹಂತದಲ್ಲಿದ್ದಾಗ ಜಾಮೀನು ನೀಡುವುದು ಸರಿ ಅಲ್ಲ ಎಂದು, ಜಾಮೀನು ಅರ್ಜಿಯನ್ನು ತಿರಸ್ಕಾರಗೊಳಿಸಿದರು.

ಟೈಪಿಸ್ಟ್‌ ಮೋಹನ್ ಅವರ ಬಳಿ ಸಿಕ್ಕಿರುವ ಹಣವು ಸಚಿವರೊಬ್ಬರಿಗೆ ಸೇರಿದ ಲಂಚದ ಹಣ ಎಂಬ ಗುಮಾನಿ ಇದ್ದು. ಸತ್ಯಾಂಶ ತನಿಖೆ ಬಳಿಕ ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+