3 ಕೋಟಿ ಹಣ ಕಳ್ಳತನ : ಸಿಸಿಬಿಯಿಂದ ಕಾಂಗ್ರೆಸ್ ನಾಯಕಿ ವಿಚಾರಣೆ

ಬೆಂಗಳೂರು, ಆಗಸ್ಟ್ 22 : ಬೆಂಗಳೂರಿನ ಸಿಸಿಬಿ ಪೊಲೀಸರು ಕಾಂಗ್ರೆಸ್ ಪಕ್ಷದ ನಾಯಕಿ ಕೆ.ಟಿ.ವೀಣಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 3 ಕೋಟಿ ರೂ. ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿದೆ.

ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಸರೋಜ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಕೆ.ಟಿ.ವೀಣಾ ವಿಚಾರಣೆ ನಡೆಸಿದರು. ಸರೋಜಾ ಅವರ ಮನೆಯಲ್ಲಿದ್ದ ಹಣವನ್ನು ವೀಣಾ ಅವರ ಸೂಚನೆಯಂತೆ ಕಳವು ಮಾಡಲಾಗಿದೆ ಎಂಬುದು ಆರೋಪವಾಗಿದೆ.

ಹರಿಪ್ರಸಾದ್ ಎಂಬುವವರು ಸಹೋದರಿ ಸರೋಜಾ ಮನೆಯಲ್ಲಿ 3 ಕೋಟಿ ಹಣವಿಟ್ಟಿದ್ದರು. ಸರೋಜಾ ಅವರ ಸಂಬಂಧಿಯಾದ ಕೆ.ಟಿ.ವೀಣಾ ಅವರು ಸರೋಜಾ ಅವರ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಹಣ ಇರುವ ವಿಚಾರವನ್ನು ಅವರಿಗೂ ತಿಳಿಸಲಾಗಿತ್ತು.

Money missing case : CCB police detained Congress leader

ಸರೋಜಾ ಅವರು ಸಂಬಂಧಿಕರ ಮನೆಗೆ ಹೋದಾಗ ವೀಣಾ ಅವರ ಸೂಚನೆಯಂತೆ ನಟರಾಜು ಮತ್ತು ಬಾಬು ಎಂಬುವವರು 3 ಕೋಟಿ ಕಳ್ಳತನ ಮಾಡಿದ್ದಾರೆ ಎಂಬುದು ಆರೋಪವಾಗಿದೆ.

ಸರೋಜಾ ಅವರ ವೀಣಾ ಅವರ ಮೇಲೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಆದ್ದರಿಂದ, ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. 3 ಕೋಟಿ ಹಣ ಗದಗ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರಿಗೆ ಸೇರಿದ್ದು ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+