ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳಗ್ರಹ ಪರಿಭ್ರಮಣ : ಮಾಮ್‌ನಿಂದ ಶತದಿನೋತ್ಸವ

By Kiran B Hegde
|
Google Oneindia Kannada News

ಬೆಂಗಳೂರು, ಜ. 1: ಈ ವರ್ಷದ ಜನವರಿ 1ನೇ ದಿನಾಂಕ ಭಾರತೀಯರಿಗೆ ಎರಡು ಸಂತೋಷ ನೀಡಿದೆ. 2015ನೇ ವರ್ಷಕ್ಕೆ ಕಾಲಿಡುತ್ತಿರುವುದರ ಜೊತೆಗೆ ದೇಶದದ ಹೆಮ್ಮೆಯ ಮಂಗಳಯಾನವು ಮಂಗಳ ಗ್ರಹದ ಪರಿಭ್ರಮಣ ಆರಂಭಿಸಿ 100 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.

ಮಂಗಳಯಾನ ಹೆಸರಿನ ಉಪಗ್ರಹವು 2014ರ ಸೆಪ್ಟೆಂಬರ್ 24ರಂದು ಮಂಗಳ ಗ್ರಹದ ಕಕ್ಷೆಯನ್ನು ಯಶಸ್ವಿಯಾಗಿ ಸೇರಿಕೊಂಡಿತ್ತು. ಈ ಮೂಲಕ ಮೊದಲ ಯತ್ನದಲ್ಲಿಯೇ ಯಶಸ್ಸು ಗಳಿಸಿದ ಪ್ರಥಮ ದೇಶ ಎಂಬ ಖ್ಯಾತಿಗೆ ಪಾತ್ರವಾಗಿದೆ. [ಮಂಗಳಯಾನ ನಡೆದುಬಂದ ದಾರಿ]

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಸ್ರೋ ವಕ್ತಾರರು, "ಉಪಗ್ರಹವು ಸಾಮಾನ್ಯವಾಗಿಯೇ ಕಾರ್ಯನಿರ್ವಹಿಸುತ್ತಿದೆ" ಎಂದು ತಿಳಿಸಿದ್ದಾರೆ.

mangal

ಬೆಲೆ ತೆರದೆ ಕಾರ್ಯ ಸಾಧನೆ : ಇಸ್ರೋ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ಮಾತನಾಡಿ, "ಭಾರತದ ಮಂಗಳ ಗ್ರಹ ಪರಿಭ್ರಮಣ ಕಾರ್ಯಕ್ರಮವು ಅಂತರಿಕ್ಷಯಾನ ಕಾರ್ಯಕ್ರಮಕ್ಕಾಗಿ ಯಾವುದೇ ಬೆಲೆ ತೆರದೆ ವಿಭಿನ್ನವಾಗಿ ಕಾರ್ಯಸಾಧಿಸುವ ಬಗೆಯನ್ನು ಜಗತ್ತಿಗೆ ಸಾರಿದೆ" ಎಂದು ತಿಳಿಸಿದ್ದಾರೆ. [ಭಾರತ-ಅಮೆರಿಕ ಜಂಟಿ ಮಂಗಳಯಾನ]

ಭೂಮಿಯಿಂದ ಮತ್ತೊಂದು ಸ್ವತಂತ್ರ ಗ್ರಹಕ್ಕೆ ಭಾರತವು ಕಳುಹಿಸಿದ ಪ್ರಥಮ ಉಪಗ್ರಹ ಮಂಗಳಯಾನ. ಮಂಗಳ ಕಕ್ಷೆಯನ್ನು ತಲುಪಿದ ಏಷ್ಯಾದ ಪ್ರಥಮ ದೇಶ ಭಾರತ ಹಾಗೂ ನಾಲ್ಕನೇ ಅಂತರಿಕ್ಷ ಸಂಸ್ಥೆ ಇಸ್ರೋ ಎಂಬ ಹೆಗ್ಗಳಿಕೆ ಸಿಕ್ಕಿದೆ. ಅಲ್ಲದೆ, ಅತ್ಯಂತ ಕಡಿಮೆ ವೆಚ್ಚವಾದ 450 ಕೋಟಿ ರು.ಗಳಲ್ಲಿ ಗುರಿ ಸಾಧಿಸಿದ ಹೆಮ್ಮೆಯೂ ಇಸ್ರೋ ಪಾಲಾಗಿದೆ. [ಮಂಗಳಯಾನ ಶ್ರೇಷ್ಠ ಸಾಧನೆ ಎಂದ ಟೈಮ್ ಡಿಸ್ಕವರಿ]

English summary
The January 1st day of 2015 marks 100 days of India's spacecraft MOM orbiting Mars. The Mangalyaan was successfully inserted into the red planet's orbit on 24th September of 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X