'MOM ಎಂದಿಗೂ ನಿರಾಶೆಗೊಳಿಸುವುದಿಲ್ಲ' : ಮೋದಿ

ಪೀಣ್ಯ(ಬೆಂಗಳೂರು), ಸೆ.24: ಮಂಗಳ ಗ್ರಹ ಇಂದು ತನ್ನ 'ಮಾಮ್' (ಮಾರ್ಸ್ ಆರ್ಬಿಟರ್ ಮಿಷನ್(MOM)) ಜೊತೆಗೂಡಿದೆ. ಈ ಮಹತ್ವದ ಯೋಜನೆಗೆ 'MOM' ಎಂದು ಸಂಕ್ಷಿಪ್ತ ಹೆಸರಿಸಿದ ದಿನವೇ ನನಗೆ ಅಂದುಕೊಂಡೆ, MOM(ಅಮ್ಮ) ಎಂದಿಗೂ ನಿರಾಶೆ ಮೂಡಿಸುವುದಿಲ್ಲವೆಂದು, ಮೊದಲ ಯತ್ನದಲ್ಲೇ ಭಾರತ ಅಸಾಧ್ಯವಾದ ಗಡಿ ದಾಟಿ ಯಶ ಸಾಧಿಸಿದೆ. ಇದು ದೇಶಕ್ಕೆ ಹೆಮ್ಮೆಯ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳಯಾನ ಯಶಸ್ಸಿನ ನಂತರ ತಮ್ಮ ಭಾಷಣದಲ್ಲಿ ಹೇಳಿದರು.

ನಗರದ ಪೀಣ್ಯದಲ್ಲಿರುವ ISTRAC ಕೇಂದ್ರದಲ್ಲಿ ಬುಧವಾರ ಸಂಭ್ರಮದ ವಾತಾವರಣ. ಕೆಂಪು ಗ್ರಹ ಮಂಗಳನ ಕಕ್ಷೆಗೆ ಭಾರತದ ನೌಕೆ ಸೇರಿಕೊಳ್ಳುವ ಅಭೂತಪೂರ್ವ ಕ್ಷಣವನ್ನು ನೋಡಲು ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಕೆಂಪು ಕೋಟ್ ಧರಿಸಿ ಬಂದಿದ್ದು ವಿಶೇಷ.[ಮಂಗಳನಿಗೆ ಇಂದು ಮಾಮ್ ಸಿಕ್ಕಿದಳು : ಮೋದಿ ]

ನಿಗೂಢವಾದ ಹಾಗೂ ಯಾರೂ ತಲುಪಲು ಸಾಧ್ಯವಾಗದ ತಾಣವನ್ನು ತಲುಪಲು ವಿಜ್ಞಾನಿಗಳು ಪಟ್ಟ ಶ್ರಮಕ್ಕೆ ಅಭಿನಂದನೆಗಳು, ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಮಾನವನ ಕಲ್ಪನೆಗೂ ಮೀರಿ 650 ಮಿಲಿಯನ್ ಕಿ.ಮೀ ದೂರ ಕ್ರಮಿಸಲಾಗಿದೆ. ವಿವಿಧ ದೇಶಗಳು ಸುಮಾರು 51 ಬಾರಿ ಮಂಗಳನ ಅಂಗಳ ತಲುಪಲು ಯತ್ನಿಸಿ 21 ಬಾರಿ ಮಾತ್ರ ಯಶ ಕಂಡಿವೆ. ಭಾರತ ತನ್ನ ಮೊದಲ ಪ್ರಯತ್ನದಲ್ಲೇ ಇಂಥದ್ದೊಂದು ಮಹತ್ವದ ಸಾಧನೆ ಮಾಡಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

ಒಂದು ವೇಳೆ ಈ ಯೋಜನೆ ವಿಫಲವಾಗಿದ್ದರೆ ಅದರ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತಿದ್ದೆ. ವಿಜ್ಞಾನಿಗಳಿಗೆ ಈ ಬಗ್ಗೆ ಅಭಯ ನೀಡಿದ್ದೆ. ಅದರೆ, ನಮ್ಮ ವಿಜ್ಞಾನಿಗಳ ಮೇಲೆ ನಾನು ನಂಬಿಕೆ ಇದೆ, ಹೆಮ್ಮೆ ಇದೆ ಎಂದರು. ಮೋದಿ ಅವರ ಭಾಷಣದ ಪ್ರಮುಖ ಅಂಶಗಳನ್ನು ಮುಂದೆ ಓದಿ...

ಹಾಲಿವುಡ್ ಚಿತ್ರಕ್ಕೆ ತಗಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚ

ಹಾಲಿವುಡ್ ಚಿತ್ರಕ್ಕೆ ತಗಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚ

ನಾವು ಈ ಸಾಧನೆಯನ್ನು ಒಂದು ಹಾಲಿವುಡ್ ಚಿತ್ರಕ್ಕೆ ತಗಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ಮಾಡಿದ್ದೇವೆ. ಮಾನವನ ಕಲ್ಪನೆಗೂ ಮೀರಿ ನಾವು ಮುಂದೆ ಹೋಗಿದ್ದೇವೆ.
ಮಂಗಳಯಾನ ನಿಜಕ್ಕೂ ಒಂದು ಸಾಧನೆ ಎಂದು ಮೋದಿ ಹೇಳಿದ್ದಾರೆ. 2013ರಲ್ಲಿ ಮಂಗಳಯಾನ ಉಡಾವಣೆಯಾದ ಸಂದರ್ಭದಲ್ಲೂ ಮೋದಿ ಇದೇ ಮಾತುಗಳನ್ನಾಡಿದ್ದನ್ನು ಇಲ್ಲಿ ಸ್ಮರಿಸಬಹುದು [ಅಂದಿನ ಭಾಷಣ ವಿವರ ಇಲ್ಲಿದೆ]

ಭಾರತ ಜಗದ್ಗುರುವಾಗಲು ಇಟ್ಟ ದಿಟ್ಟ ಹೆಜ್ಜೆ

ಭಾರತ ಜಗದ್ಗುರುವಾಗಲು ಇಟ್ಟ ದಿಟ್ಟ ಹೆಜ್ಜೆ

* ನಮ್ಮ ವಿಜ್ಞಾನಿಗಳು ಇಂದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಧನೆ ಮೂಲಕ ಸ್ವಾಮಿ ವಿವೇಕಾನಂದರ ಕನಸು ನನಸಾಗಿದೆ
* ಭಾರತವನ್ನು ಇಡೀ ಜಗತ್ತೇ ಎದ್ದು ನೋಡುವಂತಾಗಿದೆ. ಇಂದಿನ ಯಶಸ್ಸು ಇನ್ನಷ್ಟು ಸಾಧನೆಗೆ ಸ್ಫೂರ್ತಿಯಾಗಲಿದೆ
* ಇದು ಮಾನವನ ಕಲ್ಪನೆಗೂ ಮೀರಿದ ಸಾಧನೆ, ಭಾರತದ ದೇಶದ ಎಲ್ಲ ದೇಶಗಳನ್ನು ಹಿಂದಿಕ್ಕಿದೆ
* ಈ ಸಾಧನೆ ನವರಾತ್ರಿಗೆ ಶುಭಸೂಚನೆ, ಜಾಗೃತ ಭಾರತ ಕನಸು ನನಸಾಗಿಸಲು ಶ್ರಮಿಸುತ್ತಿರುವ ವಿಜ್ಞಾನಿಗಳಿಗೆ ಅಭಿನಂದನೆ
* ಕ್ರಿಕೆಟ್ ಪಂದ್ಯದಲ್ಲಿ ಗೆದ್ದರೆ ಇಡೀ ದೇಶ ಸಂಭ್ರಮಿಸುತ್ತೆ ವಿಜ್ಞಾನಿಗಳ ಈ ಸಾಧನೆ ಅದಕ್ಕಿಂತ ಸಾವಿರ ಪಟ್ಟು ದೊಡ್ಡದು.

ಉದ್ದೇಶ ಮಂಗಳಕರವಾಗಿದ್ದರೆ ಮಂಗಳವೇ ಆಗುತ್ತೆ

ಉದ್ದೇಶ ಮಂಗಳಕರವಾಗಿದ್ದರೆ ಮಂಗಳವೇ ಆಗುತ್ತೆ

* ಯಶಸ್ಸಿನ ಭಾವನೆಯಿದ್ದರೆ ಅದರಿಂದ ಯಶಸ್ಸೇ ಸಿಗುತ್ತೆ, ನಮ್ಮ ಉದ್ದೇಶ ಮಂಗಳಕರವಾಗಿದ್ದರೆ ಮಂಗಳವೇ ಆಗುತ್ತೆ
* ಯಾವುದೇ ಸವಾಲುಗಳನ್ನು ನಾವೀಗ ಎದುರಿಸಬಲ್ಲೆವು, ಮೂರೇ ವರ್ಷದಲ್ಲಿ ಇಸ್ರೋ ದೊಡ್ಡ ಸಾಧನೆ ಮಾಡಿದೆ
* ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದೀರಿ, ಅಸಾಧ್ಯವಾದುದನ್ನು ನಾವು ಸಾಧಿಸಬಲ್ಲೆವು
* ಗುರು-ಶಿಷ್ಯ ಪರಂಪರೆ ನಮ್ಮ ಭಾರತದ ಸಂಸ್ಕೃತಿಯ ಬೇರಾಗಿದೆ. ಸಂಸ್ಕೃತಿಯನ್ನು ಇಸ್ರೋ ವಿಜ್ಞಾನಿಗಳು ಈ ಪರಂಪರೆಯನ್ನು ಮುಂದುವರೆಸಿಕೊಂದು ಹೋಗುತ್ತಿದ್ದಾರೆ. ಇದು ಹೀಗೆ ಮುಂದುವರೆಯಲಿ
* ಭಾರತೀಯರ ಕನಸು ಈಡೇರಿದೆ, ಬಾಹ್ಯಾಕಾಶದ ಸಾಧನೆಯಲ್ಲಿ ಮಂಗಳಯಾನ ಒಂದು ಮಾದರಿ, ನಮ್ಮ ಶಕ್ತಿಯನ್ನು ಜಗತ್ತಿಗೇ ತೋರಿಸಿದ್ದೀರಿ

ಗುರು ಶಿಷ್ಯ ಪರಂಪರೆ ಬೆಳೆಸುತ್ತಿರುವ ಇಸ್ರೋ

ಗುರು ಶಿಷ್ಯ ಪರಂಪರೆ ಬೆಳೆಸುತ್ತಿರುವ ಇಸ್ರೋ ಬಗ್ಗೆ ಅಭಿಮಾನವಿದೆ ಎಂದ ಪ್ರಧಾನಿ ಮೋದಿ

ರವೀಂದ್ರನಾಥ ಠಾಗೋರ್ ಮಾತುಗಳನ್ನು ಉಲ್ಲೇಖ

ರವೀಂದ್ರನಾಥ ಠಾಗೋರ್ ಮಾತುಗಳನ್ನು ಉಲ್ಲೇಖ

Where the mind is led frwrd by thee Into everwidening thought&action,into that heaven of freedom,my Father,let my country awake. @ANI_news

ಇನ್ನಷ್ಟು ದೊಡ್ಡ ಗುರಿಯನ್ನು ಸಾಧಿಸೋಣ ಎಂದು ಕರೆ

ಇನ್ನಷ್ಟು ದೊಡ್ಡ ಗುರಿಯನ್ನು ಸಾಧಿಸೋಣ ಎಂದು ಕರೆ

Let us set ourselves for even more challenging goals and try even harder to achieve them: PM Modi

ಮಂಗಳಮಯವಾಗಿದ್ದರೆ ಎಲ್ಲವೂ ಮಂಗಳಕರ

ಮನಸ್ಸು ಮಂಗಳಮಯವಾಗಿದ್ದರೆ ಎಲ್ಲವೂ ಮಂಗಳಕರವಾಗುತ್ತದೆ

ಮಂಗಳಯಾನದ ಅಭೂತಪೂರ್ಣ ಕ್ಷಣ ವಿಡಿಯೋ

ಮಂಗಳಯಾನದ ಅಭೂತಪೂರ್ಣ ಕ್ಷಣ ವಿಡಿಯೋ ನೇರ ವರದಿ ಮಾಡಿದ ದೂರದರ್ಶನ, ಮೋದಿ ಅವರ ಭಾಷಣವೂ ಇದರಲ್ಲಿ ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+