ಸಿಎಂ ಭೇಟಿ ಮಾಡಿದ ಮಿಸ್ ದೀವಾ ಸೌಂದರ್ಯ ಸ್ಪರ್ಧೆ ವಿಜೇತೆ ಅಡ್ಲೀನ್ ಕ್ಯಾಸ್ಟಲಿನೊ
ಬೆಂಗಳೂರು, ಮಾರ್ಚ್ 02: ಲೀವಾ ಮಿಸ್ ದೀವಾ ಸೌಂದರ್ಯ ಸ್ಪರ್ಧೆ ವಿಜೇತೆ ಉಡುಪಿಯ ಕುಮಾರಿ ಅಡ್ಲೀನ್ ಕ್ಯಾಸ್ಟಲಿನೊ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
Recommended Video
ಕನ್ನಡತಿ ಕುಮಾರಿ ಅಡ್ಲೀನ್ ಕ್ಯಾಸ್ಟಲಿನೊ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿಗಳು, ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿಯೂ ಸಫಲರಾಗುವಂತೆ ಹಾರೈಸಿದರು.
2019ರಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ ಆವೃತ್ತಿಯ ವಿಜೇತ ವರ್ತಿಕಾ ಸಿಂಗ್, ಉಡುಪಿಯ ಅಡ್ಲೀನ್ ಕ್ಯಾಸ್ಟಲಿನೊ ಅವರಿಗೆ ಕಿರೀಟ ತೊಡಿಸುವ ಮೂಲಕ ಲೀವಾ ಮಿಸ್ ದೀವಾ ಸೌಂದರ್ಯ ಸ್ಪರ್ಧೆ ವಿಜೇತೆ ಎಂದು ಘೋಷಿಸಿದ್ದರು.

ಈ ಮೂಲಕ ಅಡ್ಲೀನ್ ಕ್ಯಾಸ್ಟಲಿನೊ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅಧಿಕೃತವಾಗಿ ಅವಕಾಶ ಪಡೆದುಕೊಂಡರು. ಮುಂಬರುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸುತ್ತಿರುವ ಅಡ್ಲೀನ್ ಮೇಲೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ.
ಅಂದ್ಹಾಗೆ, ಲೀವಾ ಮಿಸ್ ದೀವಾ ಸೌಂದರ್ಯ ಸ್ಪರ್ಧೆಗಾಗಿ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶ ಪ್ರಮುಖ ಹತ್ತು ನಗರಗಳಲ್ಲಿ ನಡೆದ ಆಡಿಷನ್ ನಲ್ಲಿ ಸುಮಾರು 20 ಜನ ಫೈನಲಿಸ್ಟ್ ಗಳು ಆಯ್ಕೆಯಾಗಿದ್ದರು. ಈ 20 ಜನರ ಪೈಕಿ ಅಡ್ಲೀನ್ ಕ್ಯಾಸ್ಟಲಿನೊ ವಿಜೇತರಾಗಿ ಹೊರಹೊಮ್ಮಿದ್ದರು.












Click it and Unblock the Notifications