ಐರಾವತ ಬಸ್ಸಿಗೆ ದುಷ್ಕರ್ಮಿಗಳ ಲಗ್ಗೆ, 30 ಲಕ್ಷ ದರೋಡೆ
ಬೆಂಗಳೂರು,ಏ.25: ಬೆಂಗಳೂರಿನಿಂದ ಕೇರಳದ ಕ್ಯಾಲಿಕಟ್‌ಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು ಸಿನಿಮೀಯ ರೀತಿಯಲ್ಲಿ ದರೋಡೆಕೋರರು ಹಿಂಬಾಲಿಸಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಂದ ಹಣವನ್ನು ಕಸಿದು ಪರಾರಿಯಾಗಿದ್ದಾರೆ.
ಶಾಂತಿನಗರ ಬಸ್ ನಿಲ್ದಾಣದಿಂದ ಕ್ಯಾಲಿಕಟ್‌ಗೆ ತೆರಳುತ್ತಿದ್ದ ಐರಾವತ ಬಸ್ಸನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಳ್ಳರು ಚಾಲಕನಿಗೆ ಪಿಸ್ತೂಲ್ ತೋರಿಸಿ ನಿಲ್ಲಿಸುವಂತೆ ಹೇಳಿದ್ದಾರೆ. ಬಸ್ ಚಾಲಕ ಕಳ್ಳರ ಬೆದರಿಕೆಗೆ ಜಗ್ಗದೆ ಮುಂದಕ್ಕೆ ಹೋಗುತ್ತಿದ್ದ ವೇಳೆ ಕಳ್ಳರು ರಾಮನಗರದ ಗೌಸಿಯ ಕಾಲೇಜ್ ಬಳಿ ಬಸ್‌ನ ಮುಂಭಾಗಕ್ಕೆ ಬಂದು ಕಾರನ್ನು ನಿಲ್ಲಿಸಿದ್ದಾರೆ.
ಬಸ್ ಚಾಲಕ ಬ್ರೇಕ್ ಹಾಕಿ ನಿಲ್ಲಿಸುತ್ತಿದ್ದಂತೆ ಕಳ್ಳರು ಇದ್ದಕ್ಕಿಂದಂತೆ ಬಸ್‌ನ ಡೋರ್ ತೆಗೆದು ಚಾಲಕನಿಗೆ ಪಿಸ್ತೂಲ್ ತೋರಿಸಿ ನಾವು ಸಿಸಿಬಿ ಪೊಲೀಸರು,ಈ ಬಸ್‌ನಲ್ಲಿ ಇಬ್ಬರು ಕಳ್ಳರು ಪ್ರಯಾಣಿಸುತ್ತಿದ್ದಾರೆ ಎಂದು ಹೇಳಿ ಒಳ ನುಗ್ಗಿದ್ದಾರೆ.

ಒಳ ನುಗ್ಗಿದ ಕಳ್ಳರು ಸೀಟ್ ನಂಬರ್ 09,10ರಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಅಪಹರಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.ಕೆಂಗೇರಿ ಬಳಿ ಸಾಗುತ್ತಿದ್ದಂತೆ ಇಬ್ಬರ ಬಳಿಯಿಂದ 30 ಲಕ್ಷ ರೂಪಾಯಿ ಬ್ಯಾಗನ್ನು ಕಸಿದು ಕೆಳಗಿಳಿಸಿ ಪರಾರಿಯಾಗಿದ್ದಾರೆ.
ಬೆಳಗಾಗುತ್ತಿದ್ದಂತೆ ಈ ಇಬ್ಬರು ರಾಮನಗರ ಠಾಣೆಗೆ ಬಂದು ನಡೆದ ಘಟನೆಯನ್ನು ವಿವರಿಸಿದಾಗಲೇ ಈ ಸಿನಿಮೀಯ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.
ವಿಲ್ಸನ್ ಗಾರ್ಡನ್‌ಲ್ಲಿರುವ ಚಿನ್ನದ ವ್ಯಾಪಾರಿ ಅಬ್ಬಾಸ್ ಖಾನ್‌ರ ಬಳಿ ಕೆಲಸಕ್ಕಿದ್ದ ಪಾಷ ಮತ್ತು ಸಲೀಂ ಎಂಬವರು ಚಿನ್ನ ತರಲು ಹಣದ ಚೀಲದೊಂದಿಗೆ ಕ್ಯಾಲಿಕಟ್‌ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.ರಾಮನಗರ ಉಪವಿಭಾಗದ ಡಿವೈಎಸ್ಪಿ ರಾಮಲಿಂಗಪ್ಪ ಅವರ ನೇತೃತ್ವದಲ್ಲಿ ದರೋಡೆಕೋರರ ಪತ್ತೆಗಾಗಿ ತಂಡ ರಚಿಸಿದ್ದು, ಕಾರ್ಯಾಚರಣೆ ಆರಂಭಗೊಂಡಿದೆ.[ಬಿಎಂಟಿಸಿ ಆಘಾತ: ಪ್ರಯಾಣಿಕರಿಗೆ ದರ ಏರಿಕೆ ಶಾಕ್]











Click it and Unblock the Notifications