ಮಹಿಳಾ ಅಧಿಕಾರಿ ಮೇಲೆ ದರ್ಪ: ಅದೊಂದು ಸಣ್ಣ ಘಟನೆ ಎಂದ ಸಚಿವ

ಬೆಂಗಳೂರು, ಜನವರಿ 23: ತುಮಕೂರು ಎಸ್‌ಪಿ ದಿವ್ಯಾ ಗೋಪಿನಾಥ್ ಮೇಲೆ ದರ್ಪ ತೋರಿದ್ದ ಘಟನೆಗೆ ಸಂಬಂಧಿಸಿದಂತೆ ಸಚಿವ ಸಾ.ರಾ.ಮಹೇಶ್ ಅವರು ಪ್ರತಿಕ್ರಿಯೆ ನೀಡಿದ್ದು, ಅದೊಂದು ಸಣ್ಣ ಘಟನೆ ಎಂದಿದ್ದಾರೆ.

ಸಚಿವನಾದ ನನ್ನನ್ನೇ ಅವರು ಒಳಗಡೆ ಬಿಡಲಿಲ್ಲ, ನನ್ನ ಜೊತೆಗೆ ಇನ್ನೂ ಕೆಲವರು ಶಾಸಕರಿದ್ದರು ಅವರನ್ನೂ ಬಿಡಲಿಲ್ಲ ಹಾಗಾಗಿ ನಾನು ಅವರಿಗೆ ಬುದ್ಧಿ ಹೇಳಿದೆ ಅಷ್ಟೆ ಎಂದು ಮಹೇಶ್ ಹೇಳಿದ್ದಾರೆ.

'ಇಲ್ಲಿ ನ್ಯೂಸೆನ್ಸ್ ಮಾಡುತ್ತಿದ್ದೀರಾ ಎಂದು ಹೇಳಿದ್ದು ನಿಜ ಅದರಲ್ಲಿ ತಪ್ಪೇನಿದೆ. ಸಚಿವರು, ಶಾಸಕರ ಮೇಲೆಯೇ ಹೀಗೆ ದರ್ಪ ತೋರಿದರೆ ಸಾರ್ವಜನಿಕರ ಕತೆ ಏನು ಎಂದು ಸಚಿವ ಮಹೇಶ್ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

Minister SR Mahesh reaction about his arrogance on IPS officer

ಸಿಎಂ ಕುಮಾರಸ್ವಾಮಿ ಅವರು ಸಹ ಸಾ.ರಾ.ಮಹೇಶ್ ಅವರ ಪರ ವಹಿಸಿದ್ದು, ಅದೊಂದು ಸಣ್ಣ ಘಟನೆ ಆಗಿದ್ದು, ಅದನ್ನು ಅಲ್ಲಿಯೇ ಸರಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಘಟನೆ ನಡೆದಾಗ ಉಪಸ್ಥೀತರಿದ್ದ ಬಿಜೆಪಿ ಶಾಸಕ ರೇಣುಕಾಚಾರ್ಯ ಸಹ ಸಾ.ರಾ.ಮಹೇಶ್ ಅವರ ಪರವಹಿಸಿದ್ದು, ಅದೊಂದು ಸಣ್ಣ ಘಟನೆ ಅಷ್ಟೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+