ಐಟಿ-ಬಿಟಿ ಮುಖ್ಯಸ್ಥರ ಭೇಟಿ ಮಾಡಿ ಕ್ಷೇತ್ರ ಬೆಳವಣಿಗೆ ಮಾಹಿತಿ ಪಡೆದ ಜಾರ್ಜ್
Recommended Video

ಬೆಂಗಳೂರು, ಜೂನ್ 27: ಸಚಿವ ಕೆ.ಜೆ. ಜಾರ್ಜ್ ಅವರು ಇದೇ ಮೊದಲ ಬಾರಿಗೆ ಮೆಡಿಸಿನ್, ಬಯೋಟೆಕ್ನಾಲಜಿ ಹಾಗೂ ವಿಜ್ಞಾನ ಕ್ಷೇತ್ರದ ಮುಖ್ಯಸ್ಥರನ್ನು ಭೇಟಿ ಮಾಡಿ ಕ್ಷೇತ್ರದ ಬೆಳವಣಿಗೆಯನ್ನು ತಿಳಿದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸಂಶೋಧನೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮೂಲಸೌಕರ್ಯದಿಂದ ಕೂಡಿದ ಹಾಸ್ಟೆಲ್ ಸ್ಥಾಪಿಸಲಾಗಿದೆ. 2500 ವಿಸ್ತೀರ್ಣದಲ್ಲಿ ನಿರ್ಮಿಇಸಿರುವ ಈ ಹಾಸ್ಟೆಲ್‌ನಲ್ಲಿ 24 ಡಬಲ್ ಬೆಡ್ ರೂಂ ಹಾಗೂ ನಾಲ್ಕು ಸ್ಟುಡಿಯೋ ಅಪಾರ್ಟ್‌ಮೆಂಟ್ ಒಳಗೊಂಡಿದ್ದು, 7.2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಮೂಲಸೌಕರ್ಯದಿಂದ ಪುನರ್‌ನಿರ್ಮಾಣ ಮಾಡಿರುವ ಹ್ಯೂಮನ್ ಜೆನೆಟಿಕ್ ಕೇಂದ್ರದ ಹಾಸ್ಟೆಲ್ ಉದ್ಘಾಟಿಸಿದರು. ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ 2017-18ನೇ ಸಾಲಿನಲ್ಲಿ ಸುಮಾರು 700 ಕೋಟಿ ರೂ. ಅನುದಾನ ನೀಡಲಾಗಿದೆ. ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು. ಹೀಗಾಗಿ ಹಾಸ್ಟೆಲ್ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬಯೋ ಇನ್ಫಾರ್ಮಾಟಿಕ್ಸ್ ಅಂಡ್ ಅಪ್ಲೈಡ್ ಬಯೋ ಟೆಕ್ನಾಲಜಿ ಸಂಸ್ಥಗೆ ಭೇಟಿ ನೀಡಿದ್ದ ಅವರು ಡಾ. ಕಿರಣ್ ಮಜುಂದಾರ್ ಷಾ ಹಾಗೂ ಕ್ರಿಸ್ ಗೋಪಾಲಕೃಷ್ಣ, ಕೃಷ್ಣಕುಮಾರ್ ಅವರೊಂದಿಗೆ ಚರ್ಚಿಸಿದರು.











Click it and Unblock the Notifications