ಬೆಂಗಳೂರಿನಲ್ಲಿ ಲಘು ಸ್ಫೋಟ: ಶಾಸಕ ಹ್ಯಾರಿಸ್ ಗೆ ಗಾಯ
Recommended Video
ಬೆಂಗಳೂರು, ಜನವರಿ 22: ನಗರದ ವಿವೇಕನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಲಘು ಸ್ಫೋಟ ಸಂಭವಿಸಿ ಶಾಸಕ ಹ್ಯಾರಿಸ್ ಗೆ ಗಾಯವಾಗಿದೆ.
ವಿವೇಕನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಲಘು ಸ್ಫೋಟವೊಂದು ಸಂಭವಿಸಿದ ಪರಿಣಾಮ ಹ್ಯಾರಿಸ್ ಅವರಿಗೆ ಗಾಯವಾಗಿದೆ. ಅವರ ಜೊತೆಗೆ ಇನ್ನೂ ನಾಲ್ಕು ಮಂದಿಗೆ ಗಾಯವಾಗಿದೆ.
ಹ್ಯಾರಿಸ್ ಅವರನ್ನು ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹ್ಯಾರಿಸ್ ಅಭಿಮಾನಿಗಳು ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ. ಹ್ಯಾರಿಸ್ ಅವರ ತೊಡೆ ಮತ್ತು ಕಿವಿ ಭಾಗಕ್ಕೆ ಗಾಯಗಳಾಗಿವೆ ಎಂದು ಹ್ಯಾರಿಸ್ ಪುತ್ರ ನಲಪಾಡ್ ಹೇಳಿದ್ದಾರೆ.

ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಲಘು ಪ್ರಮಾಣದ ಸ್ಫೋಟವಾಗಿದ್ದು, ಕಚ್ಚಾ ಬಾಂಬ್ ಎಂಬ ಅನುಮಾನವನ್ನು ಹ್ಯಾರಿಸ್ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿದ ನಲಪಾಡ್
ಮಾಧ್ಯಮಗಳ ಜೊತೆ ಮಾತನಾಡಿದ ಪುತ್ರ ನಲಪಾಡ್, 'ಒಂದು ಹಸಿರು ಬಣ್ಣದ ಪ್ಲಾಸ್ಟಿಕ್ ನಲ್ಲಿ ಸುತ್ತಿದ ದುಂಡನೆಯ ವಸ್ತುವನ್ನು ಹ್ಯಾರಿಸ್ ಅವರು ಕೂತಿದ್ದ ಚೇರ್ ಕಡೆಗೆ ಎಸೆಯಲಾಯಿತು, ಅದು ಹ್ಯಾರಿಸ್ ಪಕ್ಕ ಕೂತಿದ್ದ ಮೋಹನ್ ಅವರ ಕೈಗೆ ತಗುಲಿ ಕೆಳಗೆ ಬಿದ್ದು ಸ್ಫೋಟವಯಿತು' ಎಂದು ಹೇಳಿದ್ದಾರೆ.

ಹೊನ್ನಾರಪೇಟೆ ಕಾರ್ಪೊರೇಟರ್ ಮೇಲೆ ಆರೋಪ
ಘಟನೆಯಲ್ಲಿ ಹ್ಯಾರಿಸ್ ಜೊತೆಗೆ ಮೋಹನ್, ಚಿಟ್ಟಿಬಾಬು ಮತ್ತು ಸಂಪತ್ ಎಂಬುವರಿಗೂ ಗಾಯವಾಗಿದೆ. ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ಕೆಲವು ಮಹಿಳೆಯರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ. ಹೊನ್ನಾರಪೇಟೆ ವಾರ್ಡ್ ಕಾರ್ಪೊರೇಟರ್ ಶಿವಕುಮಾರ್ ಈ ಕೃತ್ಯದ ಹಿಂದೆ ಇದ್ದಾರೆಂದು ಹ್ಯಾರಿಸ್ ಪರ ಬೆಂಬಲಿಗರು ಆರೋಪಿಸಿದ್ದಾರೆ.

'ನನಗೂ ಹ್ಯಾರಿಸ್‌ಗೂ ವೈಯಕ್ತಿಕ ದ್ವೇಷವಿಲ್ಲ'
ಆದರೆ ಘಟನೆ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಶಿವಕುಮಾರ್, 'ನನಗೂ ಶಾಸಕ ಹ್ಯಾರಿಸ್‌ಗೂ ವೈಯಕ್ತಿಕ ದ್ವೇಷ ಇಲ್ಲ, ನಾನು ಹ್ಯಾರಿಸ್ ಅನ್ನು ಭೇಟಿ ಮಾಡುತ್ತೇನೆ, ಘಟನೆ ಬಗ್ಗೆ ತನಿಖೆ ಆಗಲಿ' ಎಂದಿದ್ದಾರೆ.

ಉಕ್ಕಿನ ಸಣ್ಣ ಗುಂಡುಗಳು ದೊರೆತಿವೆ
ಸ್ಥಳಕ್ಕೆ ಪೊಲೀಸರು ಮತ್ತು ಎಫ್‌ಎಸ್‌ಎಲ್ ತಂಡ ಆಗಮಿಸಿದ್ದು, ಸ್ಫೋಟ ನಡೆದ ಜಾಗದಲ್ಲಿ ತನಿಖೆ ನಡೆಸಿದ್ದಾರೆ. ಕೆಲವು ಉಕ್ಕಿನ ಬಾಲ್ಸ್‌ಗಳನ್ನು ಸಂಗ್ರಹಿಸಿದ್ದಾರೆ. ಅದರ ಜೊತೆ ಸ್ಫೋಟಕದಂತೆ ಕಾಣುವ ಪುಡಿಯನ್ನು ಎಫ್‌ಎಸ್‌ಎಲ್ ತಂಡ ಸಂಗ್ರಹಿಸಿದ್ದಾರೆ.ಶ್ವಾನ ದಳ ಸಹ ಸ್ಥಳಕ್ಕೆ ಕರೆದುಕೊಂಡು ಬರಲಾಗಿದೆ.
-
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications