'ಕಾದಿದ್ದ' ಬೆಂಗಳೂರು ಮಣ್ಣಿಗೆ ಮಳೆಯ ಮೊದಲ ಮುತ್ತು

ಬೆಂಗಳೂರು, ಏಪ್ರಿಲ್ 02: ಬಿಸಿಲ ತಾಪಕ್ಕೆ ಕಾದು ಹನಿಗಾಗಿ ಕಾದಿದ್ದ ಬೆಂಗಳೂರು ನೆಲಕ್ಕೆ ಮಳೆ ಇಂದು ತಂಪಾದ ಮುತ್ತು ನೀಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಳೆ ಇಂದು ನಗರದ ಹಲವು ಭಾಗಗಳಿಗೆ ತಂಪೆರದಿದೆ. ಬಿಸಿಲಿಗೆ ಬಸವಳಿದಿದ್ದ ಬೆಂಗಳೂರಿನ ವಾತಾವರಣಕ್ಕೆ ಮಳೆಯು ಅಕ್ಷರಕ್ಕೆ ನಿಲುಕದ ಆಹ್ಲಾದ ತುಂಬಿದೆ. ಬೇಸಿಗೆಯ ನಡುವಲ್ಲಿ ಬರುವ ಈ ರೇವತಿ ಮಳೆಯ ಗುಣವೇ ಅಂತಹದ್ದು. ಇದು ಜೀವಕ್ಕೆ ತಣ್ಣನೆಯ ಭಾವ ನೀಡುತ್ತದೆ.

ಸೂರ್ಯನ ಝಳಕ್ಕೆ ತಲೆಬಾಗಿಸಿ, ಬಿಸಿಲ ಝಳಕ್ಕೆ ಕಣ್ಣು ಕಿರಿದಾಗಿಸಿ, ಹಣೆ ಗಂಟಿಕ್ಕಿಕೊಂಡು ಓಡಾಡುತ್ತಿದ್ದ ಬೆಂಗಳೂರು ಜನಕ್ಕೆ, ಇಂದಿನ ಮಳೆಯು, ಮಳೆಯ ಹನಿಗಳು ಹಣೆಗೆ ಮುತ್ತಿಕ್ಕಲೆಂಬ ಆಸೆ ಮೂಡಿಸಿದೆ, ಆಕಾಶಕ್ಕೆ ಮುಖ ಚಾಚುವಂತೆ ಮಾಡಿದೆ.

Mid summer Rain in Bengalurus some parts

ವಾರದಿಂದಲೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ತಂಪೆರೆರದಿದೆ, ವಾಡಿಕೆಯಂತೆ ಮಾರ್ಚ್‌ ಕೊನೆಯ ವಾರದಲ್ಲಿ ರೇವತಿ ಮಳೆ ಪ್ರಾರಂಭವಾಗುತ್ತದೆ. ಅದರಂತೆಯೇ ಸಮಯಕ್ಕೆ ಸರಿಯಾಗಿಯೇ ಮಳೆ ಬಂದಿದೆ, ಆದರೆ ಬೆಂಗಳೂರಿಗೆ ಬರಲು ಸ್ವಲ್ಪ ತಡವೇ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+