ಮೆಟ್ರೋ ಸುರಂಗ ಮಾರ್ಗ ಕಾರ್ಯ: ನಾಳೆಯಿಂದ ಎಂಜಿ ರಸ್ತೆಯಲ್ಲಿ ಹೆವಿ ಟ್ರಾಫಿಕ್
ಬೆಂಗಳೂರು, ಜೂನ್ 14: ಎಂಜಿ ರಸ್ತೆ ಸುತ್ತಮುತ್ತಲು ವಾಸಿಸುತ್ತಿರುವವರಿಗೆ ಈ ಶನಿವಾರದಿಂದ ಟ್ರಾಫಿಕ್ ಸಮಸ್ಯೆ ಎದುರಾಗಲಿದೆ.
ಎಲ್ಲಾ ವಾಹನಗಳು ಸೆಂಟ್ರಲ್ ಬಿಜಿನೆಸ್ ಡಿಸ್ಟ್ರಿಕ್ಟ್‌ನಿಂದಲೇ ಸಾಗುವುದರಿಂದ ಸಂಚಾರ ದಟ್ಟಣೆ ವಿಪರೀತವಾಗಲಿದೆ. ಎಂಜಿ ರಸ್ತೆ ಹಾಗೂ ಕಾಮರಾಜ್ ರಸ್ತೆ ಮಧ್ಯೆ ಮೆಟ್ರೋ ಸುರಂಗ ಕಾಮಗಾರಿ ನಡೆಯುವ ಕಾರಣ ಮಾರ್ಗ ಬದಲಾಯಿಸಲಾಗಿದೆ. ಕಾಮರಾಜ ರಸ್ತೆಯಿಂದ ಕಾವೇರಿ ಎಂಪೋರಿಯಂ, ಕಬ್ಬನ್ ರಸ್ತೆವರೆಗೂ ಟ್ರಾಫಿಕ್ ಇರಲಿದೆ.
ಬಿಎಂಆರ್‌ಸಿಎಲ್ ಮಾಹಿತಿ ಪ್ರಕಾರ ಸುರಂಗ ಮೆಟ್ರೋ ಮಾರ್ಗವು ಹೊಸೂರು ರಸ್ತೆ, ರಿಚ್‌ಮಂಡ್ ರಸ್ತೆ ಮೂಲಕ ವೆಲ್ಲಾರ ಜಂಕ್ಷನ್ ತಲುಪುತ್ತದೆ.ಬಳಿಕ ಬ್ರಿಗೆಡ್ ರಸ್ತೆ ಹಾಗೂ ಎಂಜಿ ರಸ್ತೆಯನ್ನೂ ಕ್ರಾಸ್ ಮಾಡುತ್ತದೆ.
ಈಗ ಎಂಜಿರಸ್ತೆಯಲ್ಲಿರುವ ಪ್ಲ್ಯಾಟ್‌ಫಾರಂ ಎಡ್ಜ್‌ಗಿಂತಲೂ 50 ಮೀ ಎತ್ತರದಲ್ಲಿರುತ್ತದೆ. ಸುರಂಗ ಮಾರ್ಗ ಕಾರ್ಯ ಪೂರ್ಣಕ್ಕೆ 2024 ಡೆಡ್‌ಲೈನ್ ನೀಡಲಾಗಿದೆ. ಇನ್ನೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ.
ಆಂಜನೇಯ ಟೆಂಪಲ್ ಜಂಕ್ಷನ್‌ಲ್ಲಿ ಬಸ್‌ಗಳ ಸಂಚಾರ ನಿರ್ಬಂಧಿಸಲಾಗಿದೆ. ಸ್ವಾಮಿ ವಿವೇಕಾನಂದ ರಸ್ತೆ-ಹಲಸೂರು ಸ್ಟೇಷನ್, ಟ್ರಿನಿಟಿ ವೃತ್ತ, ರಿಚ್‌ಮಂಡ್ ರೋಡ್ ಕಾರಿಡಾರ್ ಮೂಲಕವೇ ಚಲಿಸಬೇಕು.

ಮೇಯೋ ಹಾಲ್‌ನಿಂದ ಬರುವ ವಾಹನಗಳು ಹೇಗೆ ಸಂಚರಿಸಬೇಕು
ಮೇಯೋ ಹಾಲ್‌ನಿಂದ ಬರುವ ವಾಹನಗಳು ಎಂಜಿ ರಸ್ತೆಯ ಕಡೆಗೆ ತಿರುವು ಪಡೆಯದೆ ಬಲಗಡೆ ತಿರುಗಿ ಕಾವೇರಿ ಎಂಪೋರಿಯಂ ಕಡೆಗೆ ಬರಬೇಕು.
ಅಲ್ಲಿಂದ ಅನಿಲ್ ಕುಂಬ್ಳೆ ವೃತ್ತದ ವರೆಗೂ ಹಾಗೆಯೇ ಸಂಚರಿಸಬೇಕು. ಬಳಿಕ ಬಲ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್ ಕಡೆಗೆ ಬಂದು ಅಲ್ಲಿಂದ ಬಿಆರ್‌ವಿ ಜಂಕ್ಷನ್ ಕಡೆಗೆ ಬರಬೇಕು.

ಬಿಆರ್‌ವಿ ಜಂಕ್ಷನ್‌ನಿಂದ ಬರುವ ವಾಹನಗಳು ಹೇಗೆ ಹೋಗಬೇಕು?
ಬಿಆರ್‌ವಿ ಜಂಕ್ಷನ್‌ನಿಂದ ಬರುವ ವಾಹನಗಳು ಬಲಗಡೆ ತಿರುವು ಪಡೆಯದೆ ಕಾಮರಾಜ ರಸ್ತೆ, ಕಬ್ಬನ್ ಜಂಕ್ಷನ್‌ಮೂಲಕ ಎಂಜಿ ರಸ್ತೆಗೆ ಬರಬೇಕು. ಅಲ್ಲಿಂದ ಮಣಿಪಾಲ್ ಸೆಂಟರ್ ಕಡೆಗೆ ಚಲಿಸಬೇಕು. ಅಲ್ಲಿಂದ ಬಲ ತಿರುವು ಪಡೆದು ಎಂಜಿ ರಸ್ತೆಗೆ ಬರುವ ಮುನ್ನವೇ ಡಿಕೆನ್ಸನ್ ರಸ್ತೆ ಮೂಲಕ ವೆಬ್ಸ್ ಜಂಕ್ಷನ್‌ಗೆ ತೆರಳಬೇಕು.

ಶನಿವಾರದಿಂದ ವಾಹನ ಸವಾರರು ಸಂಚರಿಸಬೇಕಿರುವ ಮಾರ್ಗ
ಶನಿವಾರದಿಂದ ಬ್ರಿಗೆಡ್ ರಸ್ತೆ, ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ಹೋಗುವ ವಾಹನ ಸವಾರರು ಕಾಮರಾಜ್ ರಸ್ತೆಯಲ್ಲಿ ಬಲ ತಿರುವು ಪಡೆದುಕೊಳ್ಳಬೇಕು ಅಲ್ಲಿಂದ ಕಬ್ಬನ್ ರಸ್ತೆ, ಮೂಲಕ ಬಿಆರ್‌ವಿ ಜಂಕ್ಷನ್ ತಲುಪಿ ಮುಂದುವರೆಯಬೇಕು.
ಆಂಜನೇಯ ಟೆಂಪಲ್ ಜಂಕ್ಷನ್‌ಲ್ಲಿ ಬಸ್‌ಗಳ ಸಂಚಾರ ನಿರ್ಬಂಧಿಸಲಾಗಿದೆ. ಸ್ವಾಮಿ ವಿವೇಕಾನಂದ ರಸ್ತೆ-ಹಲಸೂರು ಸ್ಟೇಷನ್, ಟ್ರಿನಿಟಿ ವೃತ್ತ, ರಿಚ್‌ಮಂಡ್ ರೋಡ್ ಕಾರಿಡಾರ್ ಮೂಲಕವೇ ಚಲಿಸಬೇಕು.

ಡೈರಿ ವೃತ್ತ-ನಾಗವಾರ ಮೆಟ್ರೋ ಸುರಂಗ ಕಾರಿಡಾರ್ ಕಾರ್ಯ ಶೀಘ್ರ ಆರಂಭ
ಗೊಟ್ಟಿಗೆರೆ ನಾಗವಾರ ಕೆಂಪು ಮಾರ್ಗದಲ್ಲಿ ಬರುವ ಡೈರಿ ವೃತ್ತ-ನಾಗವಾರ ಮಧ್ಯೆ ಸುರಂಗ ಮೆಟ್ರೋ ಕಾಮಗಾರಿ ಕೆಲವೇ ವಾರಗಳಲ್ಲಿ ಆರಂಭವಾಗಲಿದೆ.
ಒಟ್ಟು 14 ಕಿ.ಮೀ ಉದ್ದದ ಸುರಂಗ ಮಾರ್ಗ ಇದಾಗಿದ್ದು, ಎಲ್ಲಾ ಮೆಟ್ರೋ ಸುರಂಗ ಮಾರ್ಗಕ್ಕಿಂತಲೂ ಇದು ಅತಿ ಉದ್ದದ ಮಾರ್ಗವಾಗಿದೆ. ಲಾರ್ಸನ್ ಹಾಗೂ ಟರ್ಬೋ ಕಂಪನಿಯು ವೆಲ್ಲಾರ ಜಂಕ್ಷನ್‌ನಿಂದ ಶಿವಾಜಿನಗರ(2.7 ಕಿ.ಮೀ), ಶಿವಾಜಿನಗರದಿಂದ ಪಾಟರಿ ಟೌನ್ (2.8) ಕಿ.ಮೀ ಮಾರ್ಗದಲ್ಲಿ ಸುರಂಗ ಮೆಟ್ರೋ ಮಾರ್ಗ ನಿರ್ಮಿಸಲು ಗುತ್ತಿಗೆ ತೆಗೆದುಕೊಂಡಿದೆ. ಮಾರ್ಚ್ ತಿಂಗಳಿನಿಂದ ಬಿಎಂಆರ್‌ಸಿಎಲ್ ಈ ಪ್ರದೇಶದಲ್ಲಿ ಮಣ್ಣಿನ ಪರಿಶೀಲನೆಯನ್ನು ಮಾಡುತ್ತಿದೆ.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications