Utpadana Manthan: ಇಂದು ಕೈಗಾರಿಕಾ ಕಾರ್ಯತಾಂತ್ರಿಕ ಸಮಾವೇಶ
ಬೆಂಗಳೂರು, ಜೂನ್ 10: ಕರ್ನಾಟಕ ಕೈಗಾರಿಕೆ/ತಯಾರಿಕಾ ವಲಯದಲ್ಲಿ ರಾಜ್ಯದ ಸದೃಢ ಬೆಳವಣಿಗೆ ಗುರಿಯಾಗಿಸಿಕೊಂಡು ಇಂದು ಮಂಗಳವಾರ ರಾಜಧಾನಿ ಬೆಂಗಳೂರಿನಲ್ಲಿ ಮಹತ್ವದ ಕಾರ್ಯತಾಂತ್ರಿಕ ಸಮಾವೇಶ ಆಯೋಜಿಸಲಾಗಿದೆ. 'ಉತ್ಪಾದನಾ ಮಂಥನ' ಹೆಸರಿನಡಿ ಕಾರ್ಯಕ್ರಮ ಜರುಗಲಿದ್ದು, ಅನೇಕ ಪ್ರಮುಖ ಕಂಪನಿಗಳು ಪಾಲ್ಗೊಳ್ಳಲಿವೆ. ಕೈಗಾರಿಕೆ ದಿಕ್ಸೂಚಿ, ಉತ್ಪಾದಣೆ, ಭವಿಷ್ಯದ ಕುರಿತು ಮಹತ್ವದ ಚರ್ಚೆಗಳು ಆಗಲಿವೆ, ನಿರ್ಧಾರ ಕೈಗೊಳ್ಳುವ, ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.
ಈ ಸಮಾವೇಶದಲ್ಲಿ ಏರ್ ಇಂಡಿಯಾದ ಪ್ರಾಜೆಕ್ಟ್ ಮುಖ್ಯಸ್ಥ ಜಿತಿನ್ ಗುಲಾಟಿ, ಆಲ್ಫಾ ಡಿಸೈನ್ ನ ಎಂಡಿ ಕರ್ನಲ್ ಎಚ್.ಎಸ್.ಶಂಕರ್, ಬಿಐಎಎಲ್ ಸಿಇಒ ಹರಿ ಮರಾರ್, ಟೊಯೋಟಾ ಉಪಾಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್ ಸೇರಿದಂತೆ ಮುಂಚೂಣಿ ಕಂಪನಿಗಳ ಉನ್ನತ ಪ್ರತಿನಿಧಿಗಳು ಈ ಒಂದು ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ ಅವರ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ.

ಈ ಕೈಗಾರಿಕಾ ಸಮಾವೇಶದಲ್ಲಿ ಒಟ್ಟು 58 ಕೈಗಾರಿಕೋದ್ಯಮಗಳಿಗಳು, 10 ನವೋದ್ಯಮಗಳ ಮುಖ್ಯಸ್ಥರು ಪಾಲ್ಗೊಂಡು ಚರ್ಚಿಸಲಿದ್ದಾರೆ. ವಲಯವಾರು ಕಾರ್ಯಸಾಧ್ಯವಾದ ನೀಲನಕ್ಷೆ ರೂಪಿಸುವುದು ಮುಖ್ಯ ಉದ್ದೇಶ ಹೊಂದಲಾಗಿದೆ. ಮುಖ್ಯವಾಗಿ ರಾಜ್ಯ ಕೈಗಾರಿಕೆ ವಲಯದಲ್ಲಿನ ತಯಾರಿಕಾ ವಲಯದ ಅಭಿವೃದ್ಧಿ ಪಥಕ್ಕೆ ದಿಕ್ಸೂಚಿ ರೂಪಿಸಲಾಗುತ್ತದೆ. ಸಮಾವೇಶದಿಂದ ಅಗತ್ಯ ಮಾರ್ಗದರ್ಶನ ಲಭ್ಯವಾಗಲಿದೆ. ಸಾಕಷ್ಟು ಹೂಡಿಕೆ ಆಕರ್ಷಣೆ ಜೊತೆಗೆ ಉದ್ಯೋಗ ಸೃಷ್ಟಿ ಸಾಧ್ಯತೆ ಇದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ಕರ್ನಾಟಕ ಭಿವೃದ್ಧಿಪಡಿಸಲು ಕೆಲವು ಮಹತ್ವವ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಈ ಸಮಾವೇಶ ಮಹತ್ವದ್ದಾಗಿದೆ. ಕೈಗಾರಿಕೆ ಹಾಗೂ ನವೋದ್ಯಮಗಳ ತಜ್ಞರು, ಉದ್ದಿಮೆದಾರರ ಸಲಹೆ ಪಡೆದು ಭವಿಷ್ಯಕ್ಕೆ ಆದ್ಯತೆ ನೀಡಲು, ನಾವೀನ್ಯತೆ ಆಧಾರಿತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವ ಪರಿಹಾರಗಳನ್ನು ಎಲ್ಲರ ಸಹಯೋಗದಲ್ಲಿ ಕಂಡುಕೊಳ್ಳುವ ಗುರಿ ಸಮಾವೇಶದ್ದಾಗಿದೆ.
ಇನ್ನೂ ಏಕ ದಿನದ ಈ ಸಮಾವೇಶ ಇದಾಗಿದ್ದು, ಅದು ಪೂರ್ಣಗೊಂಡ ನಂತರ ಸಚಿವ ಎಂಬಿ ಪಾಟೀಲರು ಸಮಾವೇಶದಲ್ಲಿ ನಡೆದ ಚರ್ಚೆಗಳ ಬಗ್ಗೆ ಸಂಜೆ 4.30 ಸುದ್ದಿಗೋಷ್ಠಿ ನಡೆಸಿ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.












Click it and Unblock the Notifications