Get Updates
Get notified of breaking news, exclusive insights, and must-see stories!

ಗಿರಿರಾಜ್ ನಿರ್ದೇಶನದ 'ಮಾಸ್ತಿಕಲ್ಲು' ನಾಟಕ ನೋಡಿ

ಬೆಂಗಳೂರು, ಜುಲೈ 09: ಜಟ್ಟ, ಮೈತ್ರಿ ಚಲನಚಿತ್ರ ಖ್ಯಾತಿಯ ಗಿರಿರಾಜ್ ಬಿಎಂ ಅವರ ನಿರ್ದೇಶನದ 'ಮಾಸ್ತಿಕಲ್ಲು' ನಾಟಕದ ಪ್ರದರ್ಶನ ಜುಲೈ 10ರಂದು ನಗರದ ಕೆಂಗಲ್ ಹನುಮಂತಯ್ಯ ಕಲಾಸೌಧದಲ್ಲಿ ಆಯೋಜಿಸಲಾಗಿದೆ.

ಸತೀ ಪದ್ಧತಿಯ ಶೋಷಣೆಯ ನೋವುಗಳ ನೋಟವನ್ನು ತೆರೆದಿಡುವ 'ಮಾಸ್ತಿ ಕಲ್ಲು' ನಾಟಕ, ರಾಜಸ್ಥಾನದಲ್ಲಿ ನಡೆದ ರೂಪಾ ಕನ್ವರ್ ಎಂಬುವರ ಸತೀ ಸಹಗಮನದ ಕಥೆಗೆ ಹತ್ತಿರವಾಗಿದ್ದರೂ, ಡಾ. ಶಿವರಾಮ ಕಾರಂತರ 'ಸರಸಮ್ಮನ ಸಮಾಧಿ' ಕಾದಂಬರಿಯ ಪ್ರೇರಣೆಯಿಂದಲೂ ರಚಿಸಲಾಗಿದೆ. ಬಿ.ಎಂ.ಗಿರಿರಾಜ್ ಅವರು ಇದನ್ನು ರಚಿಸಿ, ನಿರ್ದೇಶಿಸಿದ್ದಾರೆ.

ನಾಟಕದ ಪ್ರಧಾನ ಪಾತ್ರಧಾರಿಯಾದ ಚಂದ್ರಯ್ಯನ ಜೀವನೋದ್ದೇಶವಾದ ಪ್ರೇತಗಳ ಅನ್ವೇಷಣೆ ಅವನನ್ನು ಹಲವು ಮಾನವಾತೀತ ಹಾಗು ರೋಮಾಂಚನಕಾರಿ ಅನುಭವ ಹಾಗು ಸನ್ನಿವೇಶಗಳಿಗೆ ಗುರಿಪಡಿಸುತ್ತದೆ.

Masti Kallu Kannada Play Giriraj BM KH Kalasoudha 10 July

ಪ್ರೀತಿ, ತ್ಯಾಗಗಳ ಕಥೆಗಳಿಗೆ ಸಾಕ್ಷಿಯಾಗಿ ನಿಂತಿರುವ ಹಲವು ಮಾಸ್ತಿ ಕಲ್ಲುಗಳ ಪ್ರತೀಕವಾಗಿ ನಾಟಕದ ಹೆಸರನ್ನು 'ಮಾಸ್ತಿಕಲ್ಲು' ಎಂದು ಇಡಲಾಗಿದೆ.

ನಿರ್ದೇಶಕ ಬಿ.ಎಂ. ಗಿರಿರಾಜ್ ನುಡಿ : ಒಂದು ಕೃತಿ ಒಬ್ಬೊಬ್ಬರ ಓದು ಮತ್ತು ಮಾಗುವಿಕೆಯ ಅನುಸಾರವಾಗಿ ಅವರವರಿಗೆ ಬೇರೆ ಬೇರೆ ಅರ್ಥಗಳನ್ನ ಕೋಡುತ್ತದೆ. ಕಾರಂತರ ಬರಹಗಳು ನಮ್ಮ ಅನುಭವ ಮತ್ತು ನಂಬಿಕೆಗಳನ್ನ ಓರೆಗೆ ಹಚ್ಚುತ್ತದೆ. ಹಲವು ಸಲ ಓದಿದಾಗಲೂ ಹಲವು ಅರ್ಥ ಸಾಧ್ಯತೆಗಳನ್ನ ತೋರಿ ನಮ್ಮ ಆಷಾಢಭೂತಿತನಕ್ಕೆ ಬೆಂಕಿ ಇಡುತ್ತದೆ.

60 ವರ್ಷಕ್ಕೂ ಹಿಂದೆ ರಚಿಸಿದ ಕೃತಿ ಇಂದಿಗೂ ahead of its time ಅಂತ ಅನಿಸಿಕೊಳ್ಳುತ್ತದೆ ಅಂದರೆ ಅದು ಲೇಖಕರ ಪ್ರಜ್ವಲ ಕರ್ತೃಶಕ್ತಿಯೂ ಹೌದು ನಮ್ಮ ಸಮಾಜದ ದುರಂತ ಸ್ಥಿತಿಯೂ ಹೌದು. ಇಂತಹ ದ್ವೈತ ಆಯಾಮವನ್ನ ಅದರ ಘನ ಶಕ್ತಿಯಲ್ಲೇ ರಂಗದ ಮೇಲೆ ತರುವ ಪ್ರಾಮಾಣಿಕ ಪ್ರಯತ್ನ ನಮ್ಮದು.

ನಾಟಕ: ಮಾಸ್ತಿಕಲ್ಲು
ದಿನಾಂಕ/ ಸಮಯ: ಜುಲೈ 10, ಶುಕ್ರವಾರ ಸಂಜೆ 7.30 PM
ಸ್ಥಳ: ಕೆಂಗಲ್ ಹನುಮಂತಯ್ಯ ಕಲಾಸೌಧ, ಹನುಮಂತ ನಗರ, ರಾಮಾಂಜನೇಯ ಗುಡ್ಡ ದೇವಾಲಯ ಬಳಿ, ಬೆಂಗಳೂರು.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 7259 98222/333.

(ಒನ್ ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+