ಮಾಸ್ಟರ್ ಪ್ಲಾನ್ ವಿಳಂಬ: ಮತ್ತಷ್ಟು ಸಲಹೆ, ಆಕ್ಷೇಪಣೆ ಆಹ್ವಾನ

ಬೆಂಗಳೂರು, ಮಾರ್ಚ್ 24: ಬಿಡಿಎ ಮಾಸ್ಟರ್ ಪ್ಲಾನ್ 2031 ಯೋಜನೆ ಇನ್ನಷ್ಟು ವಿಳಂಬವಾಗಲಿದೆ. ಮಾಸ್ಟರ್ ಪ್ಲಾನ್ ಯೋಜನೆಯನ್ನು ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರ ಹೊರಟಿದೆ ಎಂದು ಬಿಜೆಪಿ ಆರೋಪಿಸಿದ ಹಿನ್ನೆಲೆಯಲ್ಲಿ ಯೋಜನೆಯನ್ನು ನಿಧಾನಗತಿಯಲ್ಲಿ ಮುಂದುವರೆಸಲು ಸರ್ಕಾರ ನಿರ್ಧರಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಹೀಗಾಗಿ ಸರ್ಕಾರ ಮಾಸ್ಟರ್ ಪ್ಲಾನ್ ಕುರಿತು ಸಾರ್ವಜನಿಕರಿಂದ ಹೊಸದಾಗಿ ಸಲಹೆ ಸೂಚನೆ, ಆಕ್ಷೇಪಣೆಗಳನ್ನು ಪಡೆಯಲು ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡಿದೆ. ನಗರಾಭಿವೃದ್ಧಿ ಇಲಾಖೆಯು ಶುಕ್ರವಾರದ ಬರೆದ ಪತ್ರದ ಪ್ರಕಾರ, ಅದರಲ್ಲಿ ಹೊಸದಾಗಿ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಪಡೆಯಲು ಇನ್ನೂ ಒಂದು ತಿಂಗಳ ಕಾಲವಕಾಶ ನೀಡಲಾಗಿದೆ.

ಸಾವ್ಝನಿಕರು ಸಲ್ಲಿಸಿದ ಅರ್ಜಿ ವಿಚಾರಣೆಗೆ ವಿಶೇಷ ತಂಡವೊಂದನ್ನು ರಚನೆ ಮಾಡಲಾಗಿದೆ. ಅದರಲ್ಲಿ ಹಿರಿಯ ಸರ್ಕಾರಿ ಅಧಿಕಾರಿಗಳಾದ ಅದರಲ್ಲಿ ಬಿ.ಎಸ್. ಪಾಟೀಲ್, ಮಾಜಿ ಬಿಬಿಎಂಪಿ ಹಾಗೂ ಬಿಡಿಎ ಆಯುಕ್ತ ಎಚ್. ಸಿದ್ದಯ್ಯ, ಟೌನ್ ಪ್ಲಾನಿಂಗ್ ಕಮಿಟಿ ಸದಸ್ಯ ಕಾರ್ಯದರ್ಶಿ ಎಲ್. ಶಶಿಕುಮಾರ್, ಬಿಡಿಎ ಆಯುಕ್ತ ಕಾಕೇಶ್ ಸಿಂಗ್ ಅವರನ್ನು ನೇಮಿಸಲಾಗಿದೆ.

Master Plan 2031 to be delayed further

ಈ ಮೊದಲು 2017ರ ನವೆಂಬರ್ 25ರಂದು ಬಿಡಿಎ ಯ ಮಾಸ್ಟರ್ ಪ್ಲಾನ್ ಯೋಜನೆಯನ್ನು ಸಾರ್ವಜನಿಕರ ಮುಂದಿಡಲಾಗಿತ್ತು. ಜನವರಿ 23ರೊಳಗೆ ಸೂಚನೆ, ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ ನಿದಿಪಡಿಸಲಾಗಿತ್ತು.

ಜತೆಗೆ 13067 ಅರ್ಜಿಗಳು ಕೂಡ ಬಂದಿದ್ದವು. ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು, ಐದು ಜನರ ಸಮಿತಿಯನ್ನು ರಚನೆ ಮಾಡಲಾಗಿತ್ತು. ಅದರಲ್ಲಿ ಬಿಬಿಎಂಪಿಯ ವಿಶೇಷ ಆಯುಕ್ತರು, ಬಿಎಂಆರ್ ಡಿಎ ನಿರ್ದೇಶಕರು, ಟೌನ್ ಪ್ಲಾನಿಂಗ್ ಕಮಿಟಿ ನಿರ್ದೇಶಕ, ಮಾಸ್ಟರ್ ಪ್ಲಾನ್ ನ ಜಂಟಿ ನಿರ್ದೇಶಕರನ್ನು ಒಳಗೊಂಡಿತ್ತು.

ಅರ್ಜಿಗಳನ್ನು ಪರಿಶೀಲಿಸಿದ ನಂತರ ಅಂತಿಮ ವರದಿಯನ್ನೂ ಕೂಡ ಎಂಆರ್ ಡಿಎಗೆ ನೀಡಿತ್ತು. ಸಚಿವ ಸಂಪುಟದಲ್ಲಿ ಅಂಗೀಕಾರವಾದರಷ್ಟೇ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಬಹುದಾಗಿದೆ. .ಇದರ ಜತೆಗೆ ವಿರೋದ ಪಕ್ಷಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ ಸೂಚನೆ ಪಡೆಯಲು ಇನ್ನೂ ಒಂದು ತಿಂಗಳು ಕಾಲವಕಾಶ ನೀಡುವುದರ ಜತೆಗೆ ವಿಶೇಷ ತಂಡವನ್ನೂ ರಚನೆ ಮಾಡಿದೆ. ಹಾಗಾಗಿ ಸರ್ಕಾವು ನೂತನ ತಂಡ ರಚಿಸಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+