ಬೆಂಗಳೂರಿನ ಈ ಭಾಗದಲ್ಲಿ ₹10,300 ಕೋಟಿ ಮೌಲ್ಯ ಬೃಹತ್ ಯೋಜನೆ: ಭೂಮಿಗೆ ಚಿನ್ನದ ಬೆಲೆ!
ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಅದರಲ್ಲಿ ಬೆಂಗಳೂರು ಉತ್ತರ ಪ್ರದೇಶವೂ ಒಂದಾಗಿದೆ. ಇದೀಗ ಬೆಂಗಳೂರಿನ ಉತ್ತರ ಪ್ರದೇಶದಲ್ಲಿ ಬೆಂಗಳೂರು ಮೂಲದ ಕಂಪನಿಯೊಂದು ಬೃಹತ್ ಯೋಜನೆಯನ್ನು ಅನುಷ್ಠಾನ ಮಾಡಲು ಮುಂದಾಗಿದ್ದು, ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಬರುವ ನಿರೀಕ್ಷೆ ಮೂಡಿದೆ.
ಹೌದು ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿಗೆ ಒಳ್ಳೆಯ ಬೆಲೆ ಇದೆ. ಅಲ್ಲದೇ ಬೆಂಗಳೂರಿನ ಬ್ಯುಸಿನೆಸ್ ಕಾರಿಡಾರ್ ಯೋಜನೆ ಹಾಗೂ ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ಅಭಿವೃದ್ಧಿ ಸೇರಿದಂತೆ ವಿವಿಧ ಪ್ರಮುಖ ಯೋಜನೆಗಳ ಅನುಷ್ಠಾನವಾಗುತ್ತಿದ್ದು, ಇದರಿಂದ ಸಹಜವಾಗಿಯೇ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಇದೀಗ ಹೊಸ ಯೋಜನೆಯು ಬೆಂಗಳೂರು ಉತ್ತರ ಭಾಗದಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಹೆಚ್ಚಳವಾಗಿದೆ.

ಬೆಂಗಳೂರು ಮೂಲದ ಎಂಬಸಿ (Bengaluru Embassy Development) ಡೆವಲಪ್‌ಮೆಂಟ್ಸ್ ಉತ್ತರ ಬೆಂಗಳೂರಿನಲ್ಲಿ ಸುಮಾರು ₹10,300 ಕೋಟಿ ಮೌಲ್ಯದ ಆರು ವಸತಿ ಯೋಜನೆಗಳನ್ನು ಪ್ರಾರಂಭಿಸಲು ಮುಂದಾಗಿದ್ದು, ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಹೆಚ್ಚಾಗಿದೆ. ಬೆಂಗಳೂರಿನ ಉತ್ತರ ಭಾಗದಲ್ಲಿ ಈಗಾಗಲೇ ಭೂಮಿಯ ಬೆಲೆ ಹೆಚ್ಚಳವಾಗಿದೆ. ಇದೀಗ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಮೂಡಿದೆ.
ಈ ಯೋಜನೆಯನ್ನು ಅನುಷ್ಠಾನ ಮಾಡುವುದರಿಂದ ಈ ಭಾಗದಲ್ಲಿ ಭೂಮಿಯ ಬೆಲೆ ಭರ್ಜರಿ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕಂಪನಿಯು ನವೆಂಬರ್ 24 ರಂದು ಹೇಳಿಕೆಯಲ್ಲಿ ಈ ಯೋಜನೆ ಅನುಷ್ಠಾನದ ಅಪ್ಡೇಟ್ಸ್ ಕೊಟ್ಟಿದೆ. ಬೆಂಗಳೂರು ಮೂಲದ ಎಂಬಸಿ ಡೆವಲಪ್‌ಮೆಂಟ್ಸ್ ಉತ್ತರ ಬೆಂಗಳೂರಿನಲ್ಲಿ ಸುಮಾರು ₹10,300 ಕೋಟಿ ಮೌಲ್ಯದ ಆರು ವಸತಿ ಯೋಜನೆಗಳನ್ನು ಪ್ರಾರಂಭಿಸಲಿದೆ ಎಂದು ಕಂಪನಿ ಹೇಳಿದೆ. ಅಪಾರ್ಟ್‌ಮೆಂಟ್‌ಗಳು ಮತ್ತು ವಿಲ್ಲಾಗಳಲ್ಲಿ 5.6 ಮಿಲಿಯನ್ ಚದರ ಅಡಿ ಪ್ರೀಮಿಯಂ ಅಭಿವೃದ್ಧಿ ಸಾಮರ್ಥ್ಯವನ್ನು ಒಳಗೊಂಡಿವೆ ಎಂದು ಹೇಳಲಾಗಿದೆ.
ಇನ್ನು ಈಗಾಗಲೇ ಹೇಳಿರುವಂತೆ ಈ ಭಾಗದಲ್ಲಿ ಅನುಷ್ಠಾನ ಮಾಡಲು ಉದ್ದೇಶಿಸಲಾಗಿರುವ ಎರಡು ಪ್ರಮುಖ ಮುಂಬರುವ ಯೋಜನೆಗಳಾದ ಎಂಬಸಿ ಗ್ರೀನ್‌ಶೋರ್ ಮತ್ತು ಎಂಬಸಿ ವರ್ಡೆ ಹಂತ II ಗಾಗಿ RERA ಅನುಮೋದನೆ ಸಿಕ್ಕಂತಾಗಿದೆ. ಇದೆರಡೂ ಸಹ ಎಂಬಸಿ ಸ್ಪ್ರಿಂಗ್ಸ್‌ನ 288 ಎಕರೆ ಭಾಗದಲ್ಲಿ ಟೌನ್‌ಶಿಪ್ ಬರಲಿವೆ. ಗ್ರೀನ್‌ಶೋರ್ 800 ಕ್ಕೂ ಹೆಚ್ಚು ವಿಶಾಲವಾದ 2, 3 ಮತ್ತು 4 BHK ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು, ದೊಡ್ಡ ವಿನ್ಯಾಸಗಳು ಮತ್ತು ನವೀಕರಿಸಿದ ವಿಶೇಷಗಳನ್ನು ಒಳಗೊಂಡಿರಲಿವೆ.
2026ನೇ ಸಾಲಿನಲ್ಲಿ ಪ್ರಮುಖ ಯೋಜನೆಗಳನ್ನು ಅನುಷ್ಠಾನ ಮಾಡುವುದಾಗಿ ಹೇಳಲಾಗಿದೆ. ಹೆಬ್ಬಾಳದಲ್ಲಿ ಹೊಸ ವಸತಿ ಪ್ರದೇಶ ಅಭಿವೃದ್ಧಿ. ಎಂಬಸಿ ಲೇಕ್ ಟೆರೇಸ್‌ಗಳ ಪಕ್ಕದಲ್ಲಿರುವ ಈ 10 ಎಕರೆ ಅಭಿವೃದ್ಧಿಯು ಹೆಚ್ಚು ಸ್ಥಳಾವಕಾಶ ಅತ್ಯುತ್ತಮ ನಿವಾಸಗಳನ್ನು ಆದ್ಯತೆ ನೀಡುವ ಖರೀದಿದಾರರಿಗೆ 3 BHK (ಮಧ್ಯಮ ಮತ್ತು ದೊಡ್ಡ) ಮತ್ತು 4 BHK ಸ್ವರೂಪಗಳಲ್ಲಿ 600 ಕ್ಕೂ ಹೆಚ್ಚು ಪ್ರೀಮಿಯಂ ನಿವಾಸಗಳನ್ನು ಒಳಗೊಂಡಿರಲಿದೆ ಎಂದು ಕಂಪನಿ ತಿಳಿಸಿದೆ.
ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ: ಇನ್ನು ಬೆಂಗಳೂರಿನ ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ನಿರೀಕ್ಷೆ ಇದೆ. ಬೆಂಗಳೂರು ಉತ್ತರ ಭಾಗದಲ್ಲಿ ಈ ಬೃಹತ್ ಯೋಜನೆ ಜಾರಿ ಮಾಡುತ್ತಿರುವುದು ಈ ಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಬೆಲೆ ದಿಢೀರ್ ಹೆಚ್ಚಳವಾಗುವ ನಿರೀಕ್ಷೆ ಮೂಡಿದೆ.
ಬೆಂಗಳೂರಿನಲ್ಲಿ ವಸತಿ ಪ್ರದೇಶಗಳಿಗೆ ಭಾರೀ ಬೇಡಿಕೆ ಇದೆ. ಇದೀಗ ವಸತಿ ಯೋಜನೆಗಳು ಚುರುಕು ಪಡೆದುಕೊಂಡಿವೆ.












Click it and Unblock the Notifications