• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಮಾಸ್ಕ್ ಧರಿಸುವ ನಿಯಮದಲ್ಲಿ ಬದಲಾವಣೆ

|

ಬೆಂಗಳೂರು, ಆಗಸ್ಟ್ 27: ಮಾಸ್ಕ್ ಧರಿಸುವ ವಿಚಾರದಲ್ಲಿ ಮಾಧ್ಯಮ, ಜನರು ಕೇಳುತ್ತಿರುವ ಪ್ರಶ್ನೆಗೆ ಸ್ಪಷ್ಟನೆ ನೀಡಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಈ ಕುರಿತು ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.

   ಭಾರತದಲ್ಲೇ ತಯಾರಾಗಲಿದೆಯೇ Russian Sputnik V ಲಸಿಕೆ | Oneindia Kannada

   ಒಬ್ಬರೇ ವಾಹನ ಚಾಲನೆ ಮಾಡುವಾಗ, ಒಬ್ಬರೇ ವಾಕಿಂಗ್/ಜಾಗಿಂಗ್ ಹೋಗುವಾಗ ಮಾಸ್ಕ್ ಧರಿಸಬೇಕೆ? ಎಂದು ಹಲವಾರು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಮಾಸ್ಕ್ ಇಲ್ಲದಿದ್ದರೆ ಪ್ರಸ್ತುತ 200 ರೂ. ದಂಡ ಹಾಕಲಾಗುತ್ತಿದೆ.

   12 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ: ವಿಶ್ವ ಆರೋಗ್ಯ ಸಂಸ್ಥೆ

   ಕಾರು/ಬೈಕ್ ಒಬ್ಬರೇ ಚಾಲನೆ ಮಾಡುವಾಗ ಮಾಸ್ಕ್ ಧರಿಸಬೇಕೆ? ಎಂದು ಹಲವಾರು ಜನರು ಕೇಳುತ್ತಿದ್ದಾರೆ. ಮಾಧ್ಯಮಗಳು ಸಹ ಈ ಕುರಿತು ಪ್ರಶ್ನೆ ಮಾಡುತ್ತಿವೆ. ಆದ್ದರಿಂದ ಆರೋಗ್ಯ ಹೆಚ್ಚುವರಿ ಆಯುಕ್ತ ಜಾವೇದ್ ಅಖ್ತರ್‌ ಅವರಿಗೆ ಪತ್ರ ಬರೆದು ಸ್ಪಷ್ಟನೆ ಕೇಳಲಾಗಿದೆ.

   ಹುಷಾರ್!: ಮಾಸ್ಕ್ ಧರಿಸದೆ ಇದ್ದರೆ ದಂಡದ ಬದಲು ಈ ಶಿಕ್ಷೆಯೂ ಇದೆ!

   "ಆರೋಗ್ಯ ಇಲಾಖೆ ಪತ್ರಕ್ಕೆ ಪತ್ರಿಕ್ರಿಯೆ ನೀಡುವ ತನಕ ಬೈಕ್/ಕಾರು ಒಬ್ಬರೇ ಓಡಿಸುವಾಗ, ಒಬ್ಬರೇ ವಾಕಿಂಗ್/ಜಾಗಿಂಗ್ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು" ಎಂದು ಎನ್. ಮಂಜುನಾಥ ಪ್ರಸಾದ್ ಹೇಳಿದ್ದಾರೆ.

   ಪಶುಸಂಗೋಪನಾ ಸಚಿವರಿಗೆ ಮಾಸ್ಕ್ ರವಾನೆ; ವಿನೂತನ ಪ್ರತಿಭಟನೆ!

   ಕಾರು/ಬೈಕ್‌ನಲ್ಲಿ ಹೋಗಿ ವ್ಯಾಪಾರ, ಯಾರ ಜೊತೆಗಾದರೂ ಮಾತನಾಡಲು ನಿಲ್ಲಿಸಿದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಾಕಿಂಗ್/ಜಾಗಿಂಗ್ ಮಾಡುವವರಿಗೆ ಮಾಸ್ಕ್‌ನಿಂದ ವಿನಾಯಿತಿ ನೀಡಲಾಗುತ್ತದೆಯೇ? ಕಾದು ನೋಡಬೇಕು.

   ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಹಲವಾರು ಬಾರಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಕರೆ ನೀಡಿದ್ದಾರೆ.

   English summary
   Wearing mask mandatory during the time of driving alone and solo walk. BBMP commissioner N.Manjunatha Prasad has written to the health department seeking clarification on this.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X