Maldives Trip: ಬೆಂಗಳೂರು ಟು ಮಾಲ್ಡೀವ್ಸ್​ಗೆ ನೇರ ವಿಮಾನ ಸೇವೆ, ಇಲ್ಲಿದೆ ವಿವರ

ಬೆಂಗಳೂರು, ಡಿಸೆಂಬರ್‌ 01: ಮಾಲ್ಡೀವ್ಸ್‌ಗೆ ಟ್ರಿಪ್‌ಗೆ ಪ್ಲಾನ್‌ ಮಾಡುತ್ತಿರುವವರು ಈ ಸುದ್ದಿಯನ್ನು ಮಿಸ್‌ ಮಾಡದೇ ಓದಿ. ಬೆಂಗಳೂರಿನಿಂದ ಮಾಲ್ಡೀವ್ಸ್‌ಗೆ ಹೋಗಬೇಕು ಎಂದುಕೊಂಡವರಿಗೆ ಗುಡ್‌ನ್ಯೂಸ್‌ ಸಿಕ್ಕಿದ್ದು, ಯಾವುದೇ ಪ್ರಯಾಣ ಆಯಾಸ ಇಲ್ಲದೇ ಬೆಂಗಳೂರಿನಿಂದ ನೇರವಾಗಿ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಬಹುದಾಗಿದೆ.

ಮಾಲ್ಡೀವ್ಸ್ ಮೂಲದ ವಿಮಾನಯಾನ ಸಂಸ್ಥೆ ಮಾಂಟಾ ಏರ್ 2024ರ ಜನವರಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಭಾರತದಿಂದ ಮಾಲ್ಡೀವ್ಸ್‌ಗೆ ನೇರ ವಿಮಾನಯಾನವನ್ನು ಪ್ರಾರಂಭಿಸಲು ಸಜ್ಜಾಗಿದೆ.

Manta Air To Start Direct Flights From Bengaluru To Maldives

ಈ ಕ್ರಮವು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ವಿಮಾನ ಪ್ರಯಾಣವನ್ನು ಮತ್ತಷ್ಟು ಹತ್ತಿರವಾಗಿರುವ ಗುರಿಯನ್ನು ಹೊಂದಿದೆ. ಮಾಂಟಾ ವಿಮಾನಯಾನ ಸಂಸ್ಥೆಯ ವಿಮಾನಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾಲ್ಡೀವ್ಸ್‌ನ ಧಾಲು ವಿಮಾನ ನಿಲ್ದಾಣಕ್ಕೆ ನೇರವಾಗಿ ಸಂಚಲಿಸಲಿದೆ.

ವೇಲಾನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎದುರಾಗುವ ತೊಂದರೆಗಳು ಹಾಗೂ ಹೆಚ್ಚುವರಿ ವೆಚ್ಚವನ್ನು ತಪ್ಪಿಸಲು ಹಾಗೂ ಧಾಲುನಲ್ಲಿರುವ ಅನೇಕ ಐಷಾರಾಮಿ ರೆಸಾರ್ಟ್‌ಗಳಿಗೆ ನೇರ ಪ್ರವೇಶವನ್ನು ಪಡೆಯಲು ಈ ವಿಮಾನಯಾನ ಅನುವು ಮಾಡಿಕೊಡುತ್ತದೆ.

ಮಾಂಟಾ ಏರ್, ಧಾಲು ವಿಮಾನ ನಿಲ್ದಾಣದಲ್ಲಿ ತನ್ನ ಅತಿಥಿಗಳಿಗಾಗಿ ಪ್ರತ್ಯೇಕವಾದ ರೆಸಾರ್ಟ್​ಗಳ ವ್ಯವಸ್ಥೆಯನ್ನು ಮಾಡುತ್ತಿದೆ. ಕಾಂಡಿಮಾ ಮಾಲ್ಡೀವ್ಸ್, ನಿಯಮಾ ಖಾಸಗಿ ದ್ವೀಪಗಳು, ಸೇಂಟ್ ರೆಗಿಸ್ ಮಾಲ್ಡೀವ್ಸ್, ಆರ್​ಐಯು, ಬಾಗ್ಲಿಯೋನಿ, ಆಂಗ್ಸಾನಾ ವೆಲವಾರು ಮತ್ತು ಸನ್ ಸಿಯಾಮ್ ಇರುವೆಲಿ ಸೇರಿದಂತೆ ದೇಶದ ಕೆಲವು ಅತ್ಯುತ್ತಮ ರೆಸಾರ್ಟ್‌ಗಳಿಗೆ ಧಾಲು ಹವಳ ಆತಿಥ್ಯ ವಹಿಸಿದೆ.

Manta Air To Start Direct Flights From Bengaluru To Maldives

ಮಾಲ್ಡೀವ್ಸ್‌ ಟ್ರಿಪ್‌ಗೆ ಬರುವ ಪ್ರವಾಸಿಗರು ಮಾಲ್ಡೀವ್ಸ್‌ನಲ್ಲಿ ಹೆಚ್ಚು ಸಮಯ ಕಳೆಯುವಂತೆ ವಿಮಾನದ ವೇಳಾಪಟ್ಟಿಯನ್ನು ಮಾಂಟಾ ವಿನ್ಯಾಸಗೊಳಿಸುತ್ತಿದೆ. ಎಲ್ಲಾ ವಿಮಾನಗಳು ಬೆಂಗಳೂರಿನಿಂದ ಹೊರಟು ಬೆಳಗ್ಗೆ ಮಾಲ್ಡೀವ್ಸ್‌ಗೆ ತೆರಳಲಿದ್ದು, ಸಂಜೆ ತಡವಾಗಿ ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಪ್ರಯಾಣ ಬೆಳಸಲಿದೆ.

ಸದ್ಯ ಆರಂಭಿಕ ಹಂತದಲ್ಲಿ ವಾರದಲ್ಲಿ ಮೂರು ದಿನ ಈ ಬೆಂಗಳೂರು ಟು ಮಾಲ್ಡೀವ್ಸ್‌ ನೇರ ವಿಮಾನಯಾನ ಇರಲಿದ್ದು, ನಂತರ ಪ್ರಯಾಣಿಕ ಸಂಖ್ಯೆ ಆಧಾರದಲ್ಲಿ ವಿಮಾನಗಳ ಸಂಚಾರದ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಮಾಂಟಾ ಏರ್‌ನ ವಿಸ್ತರಣೆಯೊಂದಿಗೆ ಭಾರತದಿಂದ ಮಾಲ್ಡೀವ್ಸ್‌ಗೆ ಹೊಸ ನೇರ ವಿಮಾನ ಮಾರ್ಗ ಆರಂಭವಾಗಲಿದೆ. ಹೀಗಾಗಿ ಭಾರತೀಯ ಪ್ರವಾಸಿಗರಿಂದ ಪ್ರಯಾಣದ ಆಸಕ್ತಿ ಮತ್ತು ಬುಕಿಂಗ್‍ನಲ್ಲಿ ಹೆಚ್ಚಳವನ್ನು ನಾವು ನಿರೀಕ್ಷಿಸುತ್ತೇವೆ ಎಂದು ಮಾಂಟಾ ಏರ್‌ನ ಡೆಪ್ಯೂಟಿ ಸಿಇಒ ಅಹ್ಮದ್ ಮೌಮೂನ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+