ಕಲಾವಿದರಿಗೆ ಪಡಿತರ ಕಿಟ್ ವಿತರಿಸಿದ ಲಗ್ಗೆರೆ ಪಾಲಿಕೆ ಸದಸ್ಯೆ ಮಂಜುಳಾ

ಬೆಂಗಳೂರು, ಏಪ್ರಿಲ್ 22: ಬೆಂಗಳೂರಿನ ಲಗ್ಗೆರೆ ವಾರ್ಡ್ ಮಹಾನಗರ ಪಾಲಿಕೆಯ ಸದಸ್ಯರಾದ ಮಂಜುಳಾ ಮತ್ತು ಅವರ ಪತಿ ನಾರಾಯಣ ಸ್ವಾಮಿ 250 ಮಂದಿ ಸಿನಿಮಾ ಕಲಾವಿದರಿಗೆ ಪಡಿತರ ಕಿಟ್ ವಿತರಣೆ ಮಾಡಿದ್ದಾರೆ.

ಹಿರಿಯ ಪೋಷಕ ಕಲಾವಿದ ಕಿಲ್ಲರ್ ವೆಂಕಟೇಶ್ ಆರ್ಥಿಕ ಸಂಕಷ್ಟದಲ್ಲಿರುವುದನ್ನು ಅರಿತ ಮಂಜುಳಾ ನಾರಾಯಣಸ್ವಾಮಿ, ಕಿಲ್ಲರ್ ವೆಂಕಟೇಶ್ ಜೀವಿತಾವಧಿಯ ತನಕ ಮಾಸಿಕ ಹತ್ತು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದ್ದಾರೆ.

ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಕಂದಾಯ ಸಚಿವ ಆರ್.ಅಶೋಕ್, ನಟಿ ಶೃತಿ, ನಟಿ ರಾಗಿಣಿ, ಸಾ.ರಾ.ಗೋವಿಂದು ಮತ್ತು ಮುನಿರತ್ನ ಪೋಷಕ ಕಲಾವಿದರಿಗೆ ಆಹಾರದ ಕಿಟ್ ವಿತರಿಸಿದರು. ತಲಾ ಮೂವತ್ತು ಕೆ.ಜಿ.ಯ ಈ ಕಿಟ್ ದಿನನಿತ್ಯ ಬಳಕೆಯ ಅಡುಗೆ ಪದಾರ್ಥಗಳನ್ನು ಒಳಗೊಂಡಿದೆ.

Manjula Narayanaswamy Distributes 250 Ration Kits For Cinema Artists

ಲಗ್ಗೆರೆ ವಾರ್ಡ್ ನಲ್ಲಿ ದುಡಿಯುವ, ಶ್ರಮಿಕ ವರ್ಗದ ಜನ ಹೆಚ್ಚು ವಾಸಿಸುತ್ತಿದ್ದಾರೆ. ಹೀಗಾಗಿ, ಕೊರೊನಾ ಕಾರಣಕ್ಕಾಗಿ ಲಾಕ್ ಡೌನ್ ಆದ ದಿನದಿಂದ ಪ್ರತಿ ದಿನ ಎಲ್ಲರ ಮನೆಗೆ ಊಟ ತಲುಪಿಸುವ ವ್ಯವಸ್ಥೆಯನ್ನೂ ಮಂಜುಳ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+