ಮೆಟ್ರೋ ಅಧಿಕಾರಿಗಳಿಗೆ ನೋಟಿಸ್ ನೀಡಿದ ಮಂಜುಳಾ
ಬೆಂಗಳೂರು, ಡಿ. 3: ಮೆಟ್ರೋ ರೈಲು ನಿಲ್ದಾಣದ ಅಧಿಕಾರಿಗಳಿಬ್ಬರು ತಮ್ಮೊಂದಿಗೆ ಅನುಚಿತ ವರ್ತನೆ ತೋರಿದ್ದಾರೆಂದು ಆರೋಪಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ನೋಟಿಸ್ ಜಾರಿ ಮಾಡಿದ್ದಾರೆ.
ಮಹಿಳೆಯರೊಬ್ಬರು ದೂರು ನೀಡಿದ್ದರಿಂದ ಪರಿಶೀಲನೆಗೆಂದು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಕ್ಕೆ ತೆರಳಿದ್ದೆ. ಈ ಸಂದರ್ಭದಲ್ಲಿ ನಿಲ್ದಾಣದಲ್ಲಿರುವ ಇಬ್ಬರು ಅಧಿಕಾರಿಗಳು ನನಗೆ ಪ್ರವೇಶ ನಿರ್ಬಂಧಿಸಿದರು. ಅಲ್ಲದೆ, ಅನುಚಿತವಾಗಿ ವರ್ತಿಸಿದರು ಎಂದು ಮಂಜುಳಾ ಮಾನಸ ಆರೋಪಿಸಿದ್ದಾರೆ. [ಬೆಂಗಳೂರು ವಿವಿ ಪ್ರಾಧ್ಯಾಪಕಿಯರಿಗೆ ಲೈಂಗಿಕ ಕಿರುಕುಳ]

ಅಲ್ಲದೆ, ಇಬ್ಬರೂ ಅಧಿಕಾರಿಗಳ ವಿರುದ್ಧವೂ ಪೀಣ್ಯ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.
ವಿಜಯಾಪುರ ವರದಿ: ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಎಸ್.ಎಲ್. ಚಂದ್ರಶೇಖರ ಮತ್ತು ರಾಘವೇಂದ್ರ ಸೊಂಡೂರು ಅವರನ್ನು ವಜಾಗೊಳಿಸಿ ರಾಜ್ಯಪಾಲ ವಜುಬಾಯಿ ವಾಲಾ ಡಿ. 1ರಂದು ಆದೇಶ ಹೊರಡಿಸಿದ್ದರು. ಇವರಿಬ್ಬರೂ ನಾಮನಿರ್ದೇಶಿತರಾಗಿ ಆಯ್ಕೆಯಾಗಿದ್ದರು.











Click it and Unblock the Notifications