25 ಲಕ್ಷ ಬಾಕಿ ಹಣ ಕೇಳಿದ್ದಕ್ಕೆ ಬಿತ್ತು ಗೂಸಾ, ಆರೋಪಿ ಜೈಲು ಪಾಲು
ಬೆಂಗಳೂರು, ಜು.20: ಸಾಲ ಪಡೆದಿರುವ ಬಾಕಿ ಹಣವನ್ನು ಹಿಂದಿರುಗಿಸುವಂತೆ ಕೇಳಿದ ಕಾರಣಕ್ಕೆ ಕೋಪಗೊಂಡ ಮಾಲೀಕ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಕೊಡಿಗೇಹಳ್ಳಿ ಭದ್ರಪ್ಪ ಲೇಔಟ್‌ನಲ್ಲಿ ತಡರಾತ್ರಿ ಪುಟ್ಟಮಾದೇಗೌಡ ಮತ್ತು ಗ್ಯಾಂಗ್‌ನಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದ್ದು, ಪುಟ್ಟಮಾದೇಗೌಡ ಮತ್ತು ಗ್ಯಾಂಗ್‌ನಿಂದ ಗುರುವಾರ ತಡರಾತ್ರಿ ಜೋಸೆಫ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ತಮಿಳುನಾಡಯ ಮೂಲದ ಬೋರ್‌ವೆಲ್ ಪೈಪ್ ಅಸೋಸಿಯೇಷನ್‌ನಲ್ಲಿ ಜೋಸೆಫ್(40) ಎಂಬಾತ ಕೆಲಸ ಮಾಡುತ್ತಿದ್ದ ಪುಟ್ಟಮಾದೇಗೌಡ ಪಿವಿಸಿ ಪೈಕ್ ಖರೀದಿಸಿದ್ದ ಆದರೆ ಎಷ್ಟು ದಿನವಾದರೂ ಹಣವನ್ನು ನೀಡಿರಲಿಲ್ಲ, ಇದನ್ನು ಪ್ರಶ್ನಿಸಿದ ಜೋಸೆಫ್ ಹಣವನ್ನು ಬೇಗ ಕೊಡಿ ಎಂದು ಕೇಳಿಕೊಂಡಿದ್ದಾನೆ, 25 ಲಕ್ಷ ಹಣ ಬಾಕಿ ಇತ್ತು.

ಅದಕ್ಕೆ ಕೋಪಗೊಂಡ ಪುಟ್ಟಮಾದೇಗೌಡ ಜೋಸೆಫ್ ಮೇಲೆ ಹಲ್ಲೆ ನಡೆಸಿದ್ದಾನೆ, ಈಗ ಜೋಸೆಫ್ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೊಡಗಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications