ಮಲ್ಲೇಶ್ವರಂ ಸ್ಫೋಟ : 2 ಸಾವಿರ ರೂ.ಗೆ ಸ್ಫೋಟಕ ಮಾರಾಟ

ಬೆಂಗಳೂರು, ಜೂನ್ 14 : ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಡೆನಿಯಲ್ ಪ್ರಕಾಶ್ ಬಂಧನದಿಂದ ಚುರುಕಾಗಲಿದೆ. ಪ್ರಕಾಶ್ ಸ್ಫೋಟಕ್ಕೆ ಅಗತ್ಯವಿದ್ದ ಜಿಲೆಟಿನ್ ಕಡ್ಡಿಗಳನ್ನು 2 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸಿಸಿಬಿ ಪೊಲೀಸರು ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಡೆನಿಯಲ್ ಪ್ರಕಾಶ್‌ನನ್ನು ಸೋಮವಾರ ಸಂಜೆ ಬಂಧಿಸಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ತನ್ನ ಬಾಲ್ಯದ ಗೆಳೆಯ ಸೈಯದ್ ಅಲಿಗೆ ಜಿಲೆಟಿನ್ ಕಡ್ಡಿಗಳನ್ನು ಮಾರಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. [ಮಲ್ಲೇಶ್ವರಂ ಸ್ಫೋಟ : ಮುಖ್ಯ ಆರೋಪಿ ಡೇನಿಯಲ್ ಬಂಧನ]

malleswaram
Photo Credit:

2 ಸಾವಿರ ರೂ.ಗಳಿಗೆ ಜಿಲೆಟಿನ್ ಕಡ್ಡಿ ಮತ್ತು ಇತರ ಸ್ಫೋಟಕಗಳನ್ನು ಪ್ರಕಾಶ್ ಮಾರಾಟ ಮಾಡಿದ್ದ. ಆದರೆ, ಸೈಯದ್ ಅವುಗಳನ್ನು ಏಕೆ ಖರೀದಿ ಮಾಡಿದ್ದ? ಎಂಬುದು ಆತನಿಗೆ ತಿಳಿದಿರಲಿಲ್ಲ. ಜಿಲೆಟಿನ್ ಕಡ್ಡಿಗಳನ್ನು ಕದ್ದು, ಕಲ್ಲು ಕ್ವಾರಿಗಳಿಗೆ ಮಾರಾಟ ಮಾಡುವುದೇ ಪ್ರಕಾಶ್ ಕೆಲಸವಾಗಿತ್ತು. [ಬೆಂಗಳೂರು ಸ್ಫೋಟ : ಮದನಿ ವಿರುದ್ಧ ಉಲ್ಟಾ ಹೊಡೆದ ಸಾಕ್ಷಿಗಳು]

ಅಂದು ಏನಾಗಿತ್ತು? : 2013ರ ಏಪ್ರಿಲ್ 17ರಂದು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂಭಾಗದಲ್ಲಿ ಸ್ಫೋಟ ನಡೆದಿತ್ತು. ಹೈದರಾಬಾದ್‌ನಿಂದ ಕದ್ದು ತಂದಿದ್ದ ಬೈಕ್‌ನಲ್ಲಿ ಸ್ಫೋಟಕಗಳನ್ನು ಇಟ್ಟು, ಅದನ್ನು ಸ್ಫೋಟಿಸಲಾಗಿತ್ತು. ಈ ಸ್ಫೋಟದಲ್ಲಿ 16 ಜನರು ಗಾಯಗೊಂಡಿದ್ದರು. [ಬಾಂಬ್ ಸ್ಫೋಟ ರೂವಾರಿ ಬುಹಾರಿ ತಪ್ಪೊಪ್ಪಿಗೆ]

ತಮಿಳುನಾಡಿನ ಪುಡುಕೋಡಿ ಬಳಿ ನೀರಾವರಿ ಯೋಜನೆಯ ಕೆಲಸ ನಡೆಯುತ್ತಿತ್ತು. ಅಲ್ಲಿ ಬಳಕೆ ಮಾಡಲು ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಅಲ್ಲಿಂದ ಕಡ್ಡಿಗಳನ್ನು ಕದ್ದಿದ್ದ ಪ್ರಕಾಶ್ ಸೈಯದ್‌ಗೆ ಮಾರಾಟ ಮಾಡಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+