ಅನಿಲ್, ಉದಯ್ ಕುಟುಂಬಕ್ಕೆ ಇನ್ಫೋಸಿಸ್ ಸಹಾಯಹಸ್ತ

ಬೆಂಗಳೂರು, ಡಿಸೆಂಬರ್ 16 : ಮಾಸ್ತಿ ಗುಡಿ ಚಿತ್ರಿಕರಣದ ಸಂದರ್ಭದಲ್ಲಿ ಮೃತಪಟ್ಟ ಅನಿಲ್ ಮತ್ತು ಉದಯ್ ರವರ ಕುಟುಂಬಗಳಿಗೆ ತಲಾ 2 ಲಕ್ಷ ರುಪಾಯಿಗಳನ್ನು ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಸುಧಾಮೂರ್ತಿ ಅವರು ನೀಡಿ ಮಾನವೀಯತೆ ಮೆರೆದಿದ್ದಾರೆ.

Maasti Gudi tragedy : Help by Sudha Murthy of Infosys Foundation

ಡಿಸೆಂಬರ್ 16ರ ಶುಕ್ರವಾರ ಬನಶಂಕರಿ ದೇವಸ್ಥಾನದಲ್ಲಿ ದೇಹದಾರ್ಢ್ಯ ಪಟುಗಳಾಗಿದ್ದ ಅನಿಲ್ ಮತ್ತು ಉದಯ್ ಅವರ ಕುಟುಂಬದವರಿಗೆ ಚೆಕ್ ವಿತರಿಸಿ ಮೃತ ವ್ಯಕ್ತಿಗಳ ಆತ್ಮಕ್ಕೆ ಶಾಂತಿಸಿಗಲಿ ಎಂದು ಸುಧಾಮೂರ್ತಿ ಅವರು ಕೋರಿದರು.[ಮಾಸ್ತಿಗುಡಿ ಪ್ರಕರಣ: ಐವರು ಆರೋಪಿಗಳಿಗೆ ಜೈಲುವಾಸ]

Maasti Gudi tragedy : Help by Sudha Murthy of Infosys Foundation

ದುನಿಯಾ ವಿಜಯ್ ಅಭಿನಯದ 'ಮಾಸ್ತಿ ಗುಡಿ' ಸಿನೆಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡುತ್ತಿದ್ದ ಸಮಯದಲ್ಲಿ, ಹೆಲಿಕಾಪ್ಟರ್ ನಿಂದ ಕೆರೆಗೆ ಹಾರುವ ಸನ್ನಿವೇಶದಲ್ಲಿ, ಈಜು ಬರದೆ ಅನಿಲ್ ಮತ್ತು ಉದಯ್ ಮುಳುಗಿ ದುರಂತ ಸಾವನ್ನಪ್ಪಿದ್ದರು. ಜೀವರಕ್ಷಕ ಸಾಧನಗಳನ್ನು ಅವರು ತೊಟ್ಟಿಲ್ಲದಿದ್ದರಿಂದ ಈ ದುರ್ಘಟನೆ ಸಂಭವಿಸಿತ್ತು.[ಮಾಸ್ತಿಗುಡಿ ದುರಂತ: ಶವ ಹುಡುಕಿಕೊಟ್ಟ ಮಂಗಳೂರು ಈಜುತಜ್ಞರು]

Maasti Gudi tragedy : Help by Sudha Murthy of Infosys Foundation

ಈವರೆಗೆ ಹಲವಾರು ಸಂಘಟನೆಗಳು, ವ್ಯಕ್ತಿಗಳು ಉದಯ್ ಮತ್ತು ಅನಿಲ್ ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದಾರೆ. ನಿರ್ದೇಶಕ ಆರ್ ಚಂದ್ರು, ಉದ್ಯಮಿ ಸರವಣ, ಸಂಸದ ರಾಜೀವ್ ಚಂದ್ರಶೇಖರ್ ಅವರು ತಲಾ 1 ಲಕ್ಷ ರುಪಾಯಿ ಕೊಟ್ಟು ಸಾಂತ್ವನ ಹೇಳಿದ್ದಾರೆ.

Maasti Gudi tragedy : Help by Sudha Murthy of Infosys Foundation

ಹಾಗೆಯೆ, ನಟ ಯಶ್ ಅವರ ಯಶೋಮಾರ್ಗ ಫೌಂಡೇಶನ್ ಮೂಲಕ ಎರಡೂ ಕುಟುಂಬಗಳಿಗೆ 6.5 ಲಕ್ಷ ಸಹಾಯಧನ ನೀಡಲಾಗಿದೆ. ಅನಿಲ್ ಮಕ್ಕಳ ವಿದ್ಯಾಭ್ಯಾಸಕ್ಕೆ ಯಶೋಮಾರ್ಗ ಕಡೆಯಿಂದ 5 ಲಕ್ಷ ಬಾಂಡ್, ಉದಯ್ ತಾಯಿಗೆ 1.5 ಲಕ್ಷ ಚೆಕ್ ಕೂಡ ಯಶೋಮಾರ್ಗದ ಮೂಲಕ ನೀಡಿ ಯಶ್ ಮಾನವೀಯತೆ ಮೆರಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+