ಬಿಗ್ ಬಿ ಬೆರಗುಗೊಳಿಸಿದ ಕ್ರಿಸ್ ಲಿನ್ ಕ್ಯಾಚ್
ಶಾರ್ಜಾ, ಏ.25: ಐಪಿಎಲ್ 7 ಟೂರ್ನಿಯ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 2 ರನ್ ಗಳ ಅಂತರದ ಸೋಲು ಅನುಭವಿಸಿದೆ. ಈ ಸೋಲಿಗೆ ನೇರ ಕಾರಣವಾಗಿದ್ದು ಬೌಂಡರಿಗೆರೆಯ ಬಳಿ ತೆಗೆದುಕೊಂಡ ಒಂದು ಕ್ಯಾಚ್. ಕ್ಯಾಚುಗಳನ್ನು ಹಿಡಿಯಿರಿ ಮ್ಯಾಚು ಗೆಲ್ಲಬಹುದು ಎಂಬ ಮಾತು ಕ್ಲೀಷೆ ಎನಿಸಿದರೂ ನಿನ್ನೆ ದಿನ ಕ್ರಿಸ್ ಲಿನ್ ತೆಗೆದುಕೊಂಡ ಎಬಿ ಡಿವಿಲೆಯರ್ಸ್ ಕ್ಯಾಚ್ ಸಾಮಾಜಿಕ ಜಾಲ ತಾಣಗಳಲ್ಲಿ ಇನ್ನೂ ಗಿರಕಿ ಹೊಡೆಯುತ್ತಲೆ ಇದೆ.
ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಟ್ವೀಟ್ ಮಾಡಿ ಅವರು ಟ್ವೀಟ್ ಮಾಡಿ ಕ್ರಿಸ್ ಲಿನ್ ಸೆನ್ಸೇಷನ್ ಕ್ಯಾಚ್ ಊಹಾತೀತವಾಗಿತ್ತು ಎಂದಿದ್ದಾರೆ. 1.1K ಸಲ ಟ್ವೀಟ್ ಹಾಗೂ ಫೇವರೀಟ್ ಆಗಿದೆ.
ಗೆಲುವಿಗೆ 151 ರನ್ ಗಳ ಸವಾಲನ್ನು ಪಡೆದಿದ್ದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 148 ರನ್ ಮಾತ್ರ ಸೇರಿಸಲು ಸಾಧ್ಯವಾಯಿತು. ಅತಿಯಾದ ಆತ್ಮವಿಶ್ವಾಸ ವಿರಾಟ್ ಕೊಹ್ಲಿ ಪಡೆಗೆ ಮುಳುವಾಯಿತು ಎನ್ನಬಹುದು.
ಅಂತಿಮ ಓವರ್ ನಲ್ಲಿ ಆರ್ ಸಿಬಿಯ ಗೆಲುವಿಗೆ 9 ರನ್ ಬೇಕಾಗಿತ್ತು. ವಿನಯ್ ಕುಮಾರ್ ಅವರ ಮೊದಲ ಮೂರು ಎಸೆತಗಳಲ್ಲಿ ಮೊರ್ಕೆಲ್ 2 ಮತ್ತು ವಿಲಿಯರ್ಸ್ 1 ರನ್ ಸೇರಿಸಿದರು. ನಾಲ್ಕನೆ ಎಸೆತದಲ್ಲಿ ವಿಲಿಯರ್ಸ್ ಅವರು ಲಿನ್ ಗೆ ಕ್ಯಾಚ್ ನೀಡಿ ನಿರ್ಗಮಿಸುವುದರೊಂದಿಗೆ ಆರ್ ಸಿಬಿ ಒತ್ತಡಕ್ಕೆ ಸಿಲುಕಿತು.
ಅಂತಿಮ ಎರಡು ಎಸೆತಗಳಲ್ಲಿ ಮೊರ್ಕೆಲ್ ಎರಡು ರನ್ ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಕೋಲ್ಕತಾ ತಂಡ ಅಚ್ಚರಿಯ ಗೆಲುವು ದಾಖಲಿಸಿತು. ಕೆಕೆಆರ್ ತಂಡ ಗೆಲುವಿಗೆ ಕಾರಣವಾದ ಲಿನ್ ಕ್ಯಾಚ್ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ಕ್ರಿಸ್ ಲಿನ್ ಗಿದು ಮೊದಲ ಪಂದ್ಯ
ಬ್ಯಾಟಿಂಗ್ ನಲ್ಲಿ ಮಿಂಚಿದ ಕ್ರಿಸ್ ಲಿನ್ ನಂತರ ಪಂದ್ಯದ ಗತಿ ಬದಲಾಯಿಸಿ ಕೆಕೆಆರ್ ಗೆ ಗೆಲುವು ತಂದಿತ್ತರು

ಆಸ್ಟ್ರೇಲಿಯಾದ ಪ್ರತಿಭೆ ಕ್ರಿಸ್ ಲಿನ್
24ವರ್ಷದ ಕ್ರಿಸ್ಟೋಫರ್ ಆಸ್ಟಿನ್ ಲಿನ್ ಅವರು ಆಸ್ಟ್ರೇಲಿಯಾದ ಕ್ವೀನ್ ಲ್ಯಾಂಡ್ ನ ಪ್ರತಿಭೆ. ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್, ಉತ್ತಮ ಫೀಲ್ಡರ್

ಸಮಯಪ್ರಜ್ಞೆ ಮೆರೆದ ಕ್ರಿಸ್ ಲಿನ್
ಬೌಂಡರಿ ಗೆರೆ ಹತ್ತಿರ ನಿಂತ ಕ್ರಿಸ್ ಕ್ಯಾಚ್ ತೆಗೆದುಕೊಳ್ಳುವುದಕ್ಕೆ ಮುನ್ನ ಸರಿ ಸಮಯಕ್ಕೆ 'ಜಂಪ್' ಮಾಡಲು ಅಣಿಯಾದರು. ನಂತರ ಕ್ಯಾಚ್ ಹಿಡಿದು ನೆಲಕ್ಕೆ ಕುಸಿದರೂ ಗೆರೆ ದಾಟದಂತೆ ಎಚ್ಚರಿಕೆ ವಹಿಸಿ ನಿಂತಲ್ಲೇ ಸಮತೋಲನ ಕಾಯ್ದುಕೊಂಡಿದ್ದು ಅದ್ಭುತವಾಗಿತ್ತು.

ಪಂದ್ಯದ ಗತಿ ಬದಲಾಯಿಸಿ ಕ್ಯಾಚ್
ಬಿಗ್ ಬ್ಯಾಶ್ ಲೀಗ್ ನಲ್ಲಿ ಬ್ರಿಸ್ಬೇಬ್ ಹೀಟ್, ಕ್ವೀನ್ಸ್ ಲ್ಯಾಂಡ್ ಪರ ಆಡುವ ಕ್ರಿಸ್ ಲಿನ್ ಅವರು ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ.

ಡಿಸಿಯಿಂದ ಕೆಕೆಆರ್ ಗೆ ಶಿಫ್ಟ್
ಡೆಕ್ಕನ್ ಚಾರ್ಜರ್ಸ್ ಪರ ಇದ್ದ ಕ್ರಿಸ್ ಲಿನ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಶಿಫ್ಟ್ ಆಗಿದ್ದು ಫಲ ನೀಡಿದೆ. 2012 ಒಂದೇ ಒಂದು ಪಂದ್ಯವಾಡಿದ್ದ ಕ್ರಿಸ್ ಸನ್ ರೈಸರ್ಸ್ ಹೈದರಾಬಾದ್ ಪರ 2013ರಲ್ಲಿ ಚಾನ್ಸ್ ಪಡೆಯಲಿಲ್ಲ. ಈಗ ಕೆಕೆಆರ್ ಪರ ಅದೃಷ್ಟ ಖುಲಾಯಿಸಿದೆ.

ಈ ಸಮತೋಲನ ಹೇಗೆ ಸಾಧ್ಯ
ಆಸ್ಟ್ರೇಲಿಯನ್ ಆಗಿ ಉತ್ತಮ ಫೀಲ್ಡಿಂಗ್ ಮಾಡುವುದು ಆರಂಭದಿಂದಲೂ ರೂಢಿಸಿಕೊಂಡು ಬಂದಿದೆ. ಹೀಗಾಗಿ ಸ್ವಲ್ಪ ಸಮಯ ಪ್ರಜ್ಞೆ ಬಳಸಿ ಕ್ಯಾಚ್ ಸುಲಭವಾಗಿ ಹಿಡಿದಿದ್ದಾರೆ.

ದಡ ಸೇರಿಸುವಲ್ಲಿ ಮತ್ತೆ ಯುವಿ ವಿಫಲ
15.5 ಓವರ್ ಗಳಲ್ಲಿ ಸ್ಕೋರ್ 122ಕ್ಕೆ ತಲುಪಿದ್ದಾಗ ನಾಯಕ ಕೊಹ್ಲಿ ಅವರು ಸುನಿಲ್ ನರೇನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ವಾಪಸಾದರು. ಯುವರಾಜ್ ಸಿಂಗ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.

ವಿನಯ್ ಕುಮಾರ್ ಉತ್ತಮ ಬೌಲಿಂಗ್
ರೀ ಕ್ಯಾಪ್ : ಅಂತಿಮ ಓವರ್ ನಲ್ಲಿ ಆರ್ ಸಿಬಿಯ ಗೆಲುವಿಗೆ 9 ರನ್ ಬೇಕಾಗಿತ್ತು. ವಿನಯ್ ಕುಮಾರ್ ಅವರ ಮೊದಲ ಮೂರು ಎಸೆತಗಳಲ್ಲಿ ಮೊರ್ಕೆಲ್ 2 ಮತ್ತು ವಿಲಿಯರ್ಸ್ 1 ರನ್ ಸೇರಿಸಿದರು. ನಾಲ್ಕನೆ ಎಸೆತದಲ್ಲಿ ವಿಲಿಯರ್ಸ್ ಅವರು ಲಿನ್‌ಗೆ ಕ್ಯಾಚ್ ನೀಡಿ ನಿರ್ಗಮಿಸುವುದರೊಂದಿಗೆ ಆರ್ ಸಿಬಿ ಒತ್ತಡಕ್ಕೆ ಸಿಲುಕಿತು. ಅಂತಿಮ ಎರಡು ಎಸೆತಗಳಲ್ಲಿ ಮೊರ್ಕೆಲ್ ಎರಡು ರನ್ ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಕೋಲ್ಕತಾ ತಂಡ ಅಚ್ಚರಿಯ ಗೆಲುವು ದಾಖಲಿಸಿತು.
|
ಅದ್ಭುತ ಕ್ಯಾಚ್ ಹಿಡಿದ ಕ್ರಿಸ್ ಹೀರೊ
ಅದ್ಭುತ ಕ್ಯಾಚ್ ಹಿಡಿದ ಕ್ರಿಸ್ ಈಗ ಟ್ವಿಟ್ಟರ್ ನಲ್ಲಿ ಹೀರೊ ಆಗಿದ್ದು, ಇಂದು ಕೂಡಾ ಅವರ ಹೆಸರು ಟ್ರೆಂಡಿಂಗ್ ನಲ್ಲಿದೆ
|
ಇದು ಐಪಿಎಲ್ ಅಥವಾ ಆಸೀಸ್ ಲೀಗ್?
ಇದು ಐಪಿಎಲ್ ಅಥವಾ ಆಸೀಸ್ ಲೀಗ್? ಈ ಬಾರಿ ಅಸ್ಟ್ರೇಲಿಯನ್ನರೇ ಮಿಂಚುತ್ತಿದ್ದಾರೆ
ಅದ್ಭುತ ಕ್ಯಾಚ್ ಹಿಡಿದ ಕ್ರಿಸ್
ಅದ್ಭುತ ಕ್ಯಾಚ್ ಹಿಡಿದ ಕ್ರಿಸ್ ವಿಡಿಯೋ ನೋಡಿ












Click it and Unblock the Notifications