ಹರಿಪ್ರಸಾದ್ ಗೆ ಬೆಂಬಲ ವದಂತಿ: ಸ್ಪಷ್ಟನೆ ನೀಡಿದ ಬ್ರಾಹ್ಮಣ ಮಹಾಸಭಾ
ಬೆಂಗಳೂರು, ಏಪ್ರಿಲ್ 16: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಕೆ ಹರಿಪ್ರಸಾದ್ ಅವರಿಗೆ ಬ್ರಾಹ್ಮಣರು ಬೆಂಬಲ ನೀಡುತ್ತಾರೆ ಎಂಬ ವದಂತಿ ಹಬ್ಬರಿರುವ ಕುರಿತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸ್ಪಷ್ಟನೆ ನೀಡಿದೆ.
"ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಮೈಸೂರಿನಲ್ಲಿ ಕೆಲವು ಬ್ರಾಹ್ಮಣ ವ್ಯಕ್ತಿಗಳಿಂದ ಪ್ರಕಟವಾಗಿರುವ ಹೇಳಿಕೆಗೂ ಮತ್ತು ದಿನಾಂಕ 15.04.2019 ರಂದು ಪದ್ಮನಾಭನಗರದಲ್ಲಿ ನಡೆಯಿತು ಎನ್ನಲಾದ ಘಟನೆಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸ್ಪಷ್ಟೀಕರಣ ನೀಡಲಾಗಿದೆ ಹಾಗೂ ಎಲ್ಲಾ ವಿಪ್ರರು ಕಡ್ಡಾಯ ಮತದಾನ ಮಾಡಲು ಈಗಾಗಲೇ ಕರೆ ನೀಡಲಾಗಿದೆ" ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ ಎನ್ ವೇಂಕಟನಾರಾಯಣ ಅವರು ಸ್ಪಷ್ಟನೆ ನೀಡಿದರು.

ಬನಶಂಕರಿ ಎರಡನೇ ಹಂತದ ಬನಗಿರಿ ವರಸಿದ್ದಿ ವಿನಾಯಕ ದೇವಾಲಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಕೆ ಹರಿಪ್ರಸಾದ್ ನೇತೃತ್ವದಲ್ಲಿ ಸಭೆಯೊಂದನ್ನು ನಡೆಸಲಾಗಿತ್ತು.ಈ ಸಭೆಗೆ ಕೆಲವು ಬ್ರಾಹ್ಮಣರನ್ನು ಆಮಂತ್ರಿಸಲಾಗಿತ್ತು. ನಂತರ ಆ ಎಲ್ಲಾ ಬ್ರಾಹ್ಮಣರೂ ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತಾರೆ ಎಂದು ವರದಿಯಾಗಿತ್ತು.












Click it and Unblock the Notifications